
ಮಧುಗಿರಿ (ಜ.31): ನಗರದ ಜನತಗೆ ದೋಣಿ ವಿಹಾರದ ಭಾಗ್ಯ ದೊರಕಿದ್ದು, ಕುಟುಂಬ ಪರಿವಾರದೊಂದಿಗೆ ಚೋಳೇನಹಳ್ಳಿ ಕೆರೆಗೆ ತೆರಳಿ ದೋಣಿಯಲ್ಲಿ ಕೂತು ಕೆರೆಯ ಅಂಗಳದಲ್ಲಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಮಧುಗಿರಿ ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸುವ ಚೋಳೇನಹಳ್ಳಿ ಕೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರವಾಸೋದ್ಯಮಕ್ಕೆ ಅಧಿಕ ಒತ್ತು ಕೊಡುವ ನಿಟ್ಟಿನಲ್ಲಿ ಚೋಳೇನಹಳ್ಳಿ ಕೆರೆಯಲ್ಲಿ ಸಾರ್ವಜನಿಕರಿಗೆ 15 ದಿನಗಳವರೆಗೆ ದೋಣಿ ವಿಹಾರ ಕಲ್ಪಿಸಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದ ಸಚಿವ ರಾಜಣ್ಣ ,ಈ ಕೆರೆಯಲ್ಲಿ ನೀರು ಕಡಿಮೆಯಾದಾಗ ಕೆರೆಯ ಹೂಳು ತೆಗೆಸಿ ಏರಿ ಎತ್ತರಿಸಿ ಕೆರೆಯ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವ ಜೊತೆಗೆ ಸಮಗ್ರ ಕೆರೆ ಅಭಿವೃದ್ಧಿಗೊಳಿಸಲಾಗುವುದು.ಈ ಕೆರೆ ಅತ್ಯಂತ ಅಚ್ಚುಕಟ್ಟು ಪ್ರದೇಶವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದ್ದರಿಂದ ಈ ಕೆರೆಯನ್ನು ಸುಂದರಗೊಳಿಸಿ ಪ್ರವಾಸಿಗರ,ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ಶಾಶ್ವತವಾಗಿ ದೋಣಿ ವಿವಾರದ ಕೇಂದ್ರವನ್ನಾಗಿ ರೂಪಿಸುವುದಾಗಿ ಸಚಿವ ರಾಜಣ್ಣ ಭರವಸೆ ನೀಡಿದರು.
ರೇಷ್ಮೆ ಮಾರುಕಟ್ಟೆ ರಾಮನಗರದಲ್ಲಿಯೇ ಉಳಿಯಲಿದೆ: ಶಾಸಕ ಇಕ್ಬಾಲ್ ಹುಸೇನ್
ಚೋಳೇನಹಳ್ಳಿ ಕೆರೆ ತುಂಬಿದಾಗಲೆಲ್ಲಾ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ಗೇವಿಯ ತೆಪ್ಪೋತ್ಸವ ಆಚರಿಸೋಣ. ಈ ಮೂಲಕ ನಮ್ಮ ಕ್ಷೇತ್ರದ ಜನತೆಗೆ ತಾಯಿ ದಂಡಿಮಾರಮ್ಮ ಶಾಂತಿ, ನೆಮ್ಮದಿ ಕರುಣಿಸಿ ಸಕಾಲಕ್ಕೆ ಮಳೆ , ಬಂದು ಬೆಳೆಯಾಗಿ, ಕೃಷಿಕರು ಹಾಗೂ ಕೂಲಿಕಾರ್ಮಿಕರು ನೆಮ್ಮದಿಯ ಜೀವನ ನಡೆಸುವ ಮುಖೇನ ಸುಭೀಕ್ಷೆ ಉಂಟು ಮಾಡಲಿ. ತೆಪ್ಪೋತ್ಸವ ಆಚರಣೆಗಾಗಿಯೇ ಕೆರೆಯ ಅಂಗಳದಲ್ಲಿ ಒಂದು ಸುಂದರ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬೋಟ್ ಸಂಚರಿಸುವ ವ್ಯವಸ್ತೆ ಮಾಡಲಾಗವುದು ಎಂದರು.
ಫೆ.10ರ ನಂತರ ಪಟ್ಟಣದ ಪುರಸಭಾ ವ್ಯಾಪ್ತಿ ಪ್ರದೇಶದಲ್ಲಿ 30 ಲಕ್ಷ ಆಸ್ತಿಗೆ ಬಿ,ಖಾತಾ ನೀಡಲು ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆಸ್ತಿಗೆ ಬಿ.ಖಾತಾ ಪಡೆದವರಿಗೆ ಸಾಲ ಸೌಲಭ್ಯ ಸಿಗಲಿದೆ ಎಂದರು. ಪಾವಗಡ, ಕೊರಟಗೆರೆ, ಶಿರಾ ಸೇರಿಸಿ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ. ಸೂಕ್ತ ಸಮಯದಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಲಿದೆ ಎಂದರು. ವಿಶ್ವದ ಗಮನ ಸಳೆದಿರುವ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಯೋಜನೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ತೋರಿರುವ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿನಂದನೆ ತಿಳಿಸಿದರು.
ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಬಂಡವಾಳ ಬಿಚ್ಚಿಡ್ತೀನಿ: ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ
ಈ ಭಾಗದ ಬಹು ದಿನಗಳ ಬೇಡಿಕೆಯಾದ ಏಕಶಿಲಾ ಬೆಟ್ಟಕ್ಕೆ ರೋಪವೇ ಅಳವಡಿಸುವ ಕಾಮಗಾರಿಗೆ ಸಂಬಂಧಪಟ್ಟ ಸಟಿವರು, ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿದ್ದು ಟೆಂಡರ್ ಕರೆಯಲಾಗಿದೆ . ಅತಿ ಶೀಘ್ರ ಕಾಮಗಾರಿ ಕೈಗೆತ್ತಿಕೊಂಡು ಒಂದೇ ವರ್ಷದಲ್ಲಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರಿನ್‌ತಾಜ್, ತಾಪಂ ಇಒ ಲಕ್ಷ್ಮಣ್,ಮಧುಗಿರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಪುರಸಭೆ ಸದಸ್ಯರಾದ ಮಂಜುನಾಥ್ ಆಚಾರ್, ಎಂ.ಶ್ರೀಧರ್, ಆಲೀಮ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಗಂಗಣ್ಮ ಸೇರಿದಂತೆ ಅನೇಕರು ಬೋಟಿನಲ್ಲಿ ಸಂಚರಿಸಿದರು.