ಬೆಂಗಳೂರು (ಜು.17): ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್. ನೀವಿನ್ನು ಮೆಟ್ರೋ ಇಳಿದು ರಾತ್ರಿ ವೇಳೆ ನಡೆದುಕೊಂಡು ಅಥವಾ ಆಟೋವನ್ನೋ ಅವಲಂಬಿಸಿ ಹೋಗಬೇಕಾದ ಅವಶ್ಯಕತೆ ಇಲ್ಲ. ಇನ್ಮುಂದೆ ಮೆಟ್ರೋಗೆ ಬಿಎಂಟಿಸಿ ಸಾಥ್ ನೀಡಲಿದೆ.
ಎಲ್ಲಾ ಮೆಟ್ರೋ ನಿಲ್ದಾಣಗಳ ಮುಂದೆ ಬಿಎಂಟಿಸಿ ಬಸ್ ಗಳನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ರಾತ್ರಿ ವೇಳೆಯಲ್ಲಿ ಮೆಟ್ರೋ ನಿಲ್ದಾಣದ ಮುಂದೆ ಬಿಎಂಟಿಸಿ ಬಸ್ ಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ.
undefined
ಮೆಟ್ರೋ ಪ್ರಯಾಣಿಕರೇ ಎಚ್ಚರ : ಬೀಳುತ್ತೆ ಭಾರಿ ದಂಡ
ರಾತ್ರಿ ವೇಳೆ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಹಾಗೂ ಇಳಿಸುವ ಕಾರ್ಯಚರಣೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಮೆಟ್ರೋದಿಂದ ಸೂಚನೆ ನೀಡಲಾಗಿದೆ. ಇದರಿಂದ ಮೆಟ್ರೋಗೆ ಬಿಎಂಟಿಸಿ ಸಾಥ್ ಸಿಗಲಿದೆ.
ಅದರಲ್ಲೂ ಮಹಿಳೆಯರನ್ನು ತಪ್ಪದೆ ಮೆಟ್ರೋ ನಿಲ್ದಾಣಗಳ ಬಳಿ ಹತ್ತಿಸಿಕೊಳ್ಳಲು ಹಾಗೂ ಇಳಿಸುವ ಉದ್ದೇಶದಿಂದ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಮೆಟ್ರೋ ಪ್ರಯಾಣಕ್ಕೆ ಸಂಪರ್ಕ ಸೇತುವೆಯಾಗಿ ಬಿಎಂಟಿಸಿ ಬಳಸಿ ಅನುಕೂಲಕರ ವಾತವರಣ ಒದಗಿಸಿಕೊಡಲು ಆದೇಶ ನೀಡಲಾಗಿದೆ.