ನಮ್ಮ ಮೆಟ್ರೋ ದರ ಏರಿಕೆಗೆ ಬಿಎಂಆರ್‌ಸಿಎಲ್ ಗ್ರೀನ್ ಸಿಗ್ನಲ್; ನಾಳೆಯೇ ದರ ಹೆಚ್ಚಳ ಘೋಷಣೆ!

Published : Jan 17, 2025, 02:11 PM IST
ನಮ್ಮ ಮೆಟ್ರೋ ದರ ಏರಿಕೆಗೆ ಬಿಎಂಆರ್‌ಸಿಎಲ್ ಗ್ರೀನ್ ಸಿಗ್ನಲ್; ನಾಳೆಯೇ ದರ ಹೆಚ್ಚಳ ಘೋಷಣೆ!

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಮಂಡಳಿ ಅನುಮೋದನೆ ನೀಡಿದೆ. ಶೇ.10 ರಿಂದ ಶೇ.15ರಷ್ಟು ಟಿಕೆಟ್ ದರ ಹೆಚ್ಚಳವನ್ನು ನಾಳೆಯಿಂದಲೇ ಜಾರಿಗೆ ತರಲಾಗುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ನಾಳೆ ಬಿಎಂಆರ್‌ಸಿಎಲ್ ಅಧಿಕೃತ ಘೋಷಣೆ ಮಾಡಲಿದೆ.

ಬೆಂಗಳೂರು (ಜ.17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಆಗಿರುವ ನಮ್ಮ ಮೆಟ್ರೋ ರೈಲು ಪ್ರಯಾಣದ ಟಿಕೆಟ್ ದರವನ್ನು ಹೆಚ್ಚಳ ಮಾಡುವುದಕ್ಕೆ ಬಿಎಂಆರ್‌ಸಿಎಲ್ ಮಂಡಳಿಯು ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಶೇ.10 ರಿಂದ ಶೇ.15ರಷ್ಟು ಟಿಕೆಟ್ ದರ ಹೆಚ್ಚಳ ಅನ್ವಯವಾಗುವ ಸಾಧ್ಯತೆಯಿದೆ.

ಬೆಂಗಳೂರಿನ ನಮ್ಮ ಮೆಟ್ರೋ ದರ ಏರಿಕೆ ಸಂಬಂಧ ಶುಕ್ರವಾರ ನಡೆಸಲಾದ ಬಿಎಂಆರ್‌ಸಿಎಲ್ ಬೋರ್ಡ್ ಮಿಟಿಂಗ್ ಮುಕ್ತಾಯಗೊಂಡಿದೆ. ಈಗಾಗಲೇ ಕಳೆದೊಂದು ವರ್ಷಗಳಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ್ಯೂ ರಾಜ್ಯ ಸರ್ಕಾರ ವಿವಿಧ ಚುನಾವಣೆಗಳ ನೆಪವೊಡ್ಡಿ ಮೆಟ್ರೋ ದರ ಏರಿಕರ ಮಾಡದಂತೆ ತಡೆ ಹಿಡಿಯಲಾಗಿತ್ತು. ಆದರೆ, ಕಳೆದೊಂದು ವಾರದ ಹಿಂದೆ ಮೆಟ್ರೋದ ದರ ಹೆಚ್ಚಳ ಮಾಡುವುದಕ್ಕೆ ಶುಕ್ರವಾರ ಬೋರ್ಡ್ ಮೀಟಿಂಗ್ ನಡಸಲು ಸಿದ್ಧತೆ ಮಾಡಿಕೊಡಿತ್ತು. ಇಂದು ಬೆಳಗ್ಗೆ ಬೋರ್ಡ್ ಮೀಟಿಂಗ್ ಸೇರಿದ ಆಡೆಳಿತ ಮಂಡಳಿಯು ಮೆಟ್ರೋ ಪ್ರಯಾಣದ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಇನ್ನು ಏರಿಕೆಯಾಗಲಿರುವ ದರವನ್ನ ನಾಳೆ ಬಿಎಂಆರ್‌ಸಿಎಲ್ ಅಧಿಕೃತವಾಗಿ ಘೋಷಣೆ ಮಾಡಲಿದೆ. ಈ ಕುರಿತು ಬಿಎಂಆರ್‌ಸಿಎಲ್ ಆಡಳಿತಾಧಿಕಾರಿಗಳು ಸುದ್ದಿಗೋಷ್ಠಿಯನ್ನು ಏರ್ಪಡಿಸಿ ದರ ಘೋಷಣೆ ಮಾಡಲಿದ್ದಾರೆ. ಇನ್ನು ಸೋಮವಾರದಿಂದ ದರ ಹೆಚ್ಚಳವನ್ನು ಅನ್ವಯ ಮಾಡುವುದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ದರ ಹೆಚ್ಚಳ ಮಾಡುವ ಸಾಧ್ಯತೆ ಇದ್ದು, ನಾಳೆ ಎಷ್ಟು ದರ ಹೆಚ್ಚಳ ಮಾಡಲಾಗುತ್ತದೆ ಎಂಬ ಮಾಹಿತಿ ಹೊರಬೀಳಲಿದೆ.

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ