‘ಪಕ್ಷ ಬಿಟ್ಟು ಬಂದು ನಿಜವಾದ ಸ್ವಾಭಿಮಾನಿಯಾದವರು ಎಂಬಿಟಿ’ ಹೊಗಳಿದ ಬಿಜೆಪಿ ಸಂಸದ

Published : Nov 27, 2019, 12:22 PM IST
‘ಪಕ್ಷ ಬಿಟ್ಟು ಬಂದು ನಿಜವಾದ ಸ್ವಾಭಿಮಾನಿಯಾದವರು ಎಂಬಿಟಿ’ ಹೊಗಳಿದ ಬಿಜೆಪಿ ಸಂಸದ

ಸಾರಾಂಶ

ತಾವಿದ್ದ ಪಕ್ಷ ಬಿಟ್ಟು ಬಂದು ಎಂಟಿಬಿ ನಾಗರಾಜ್ ಸ್ವಾಭಿಮಾನಿಯಾದರು ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಹೊಗಳಿದ್ದಾರೆ.

ಕೋಲಾರ [ನ.27]:  ನಿಜವಾದ ಸ್ವಾಭಿಮಾನಿ ಅಂದರೆ ಅದು ಎಂಟಿಬಿ ನಾಗರಾಜ್‌ ಎಂದು ಕೋಲಾರದಲ್ಲಿ ಸಂಸದ ಎಸ್‌ ಮುನಿಸ್ವಾಮಿ ಹೇಳಿದರು. 

ಹೊಸಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಶಾಸಕ ಸ್ಥಾನ ಬಿಟ್ಟು ಬಿಜೆಪಿಗೆ ಬಂದಿದ್ದಾರೆ ಎಂಟಿಬಿ ನಾಗರಾಜ್‌ ಅವರೇ ನಿಜವಾದ ಸ್ವಾಭಿಮಾನಿ ಎಂದು ಮುನಿಸ್ವಾಮಿ ತಿಳಿಸಿದರು. ಶರತ್‌ ಬಚ್ಚೇಗೌಡ ತಮ್ಮನ್ನು ತಾವೇ ಸ್ವಾಭಿಮಾನಿ ಹೇಳಿಕೊಂಡು ಸುಮ್ಮನೆ ಬೇರೆಯವರ ಮೇಲೆ ಆರೋಪಗಳನ್ನು ಮಾಡುತಿದ್ದಾರೆ ಎಂದರು.

ಎಂಟಿಬಿ ನಾಗರಾಜ್‌ ಅವರಿಂದ ಶರತ್‌ ಬಚ್ಚೇಗೌಡ ಅವರಿಗೆ 120 ಕೋಟಿ ಆಮಿಷ ಸುಳ್ಳು,ಶರತ್‌ ಬಚ್ಚೇಗೌಡ ಯಾವುದಾದರೂ ದಾಖಲೆ ಇದ್ದರೆ ಕೊಡಲಿ. ಶರತ್‌ ಬಚ್ಚೇಗೌಡ ಸುಳ್ಳು ಆರೋಪಗಳನ್ನು ಮಾಡುವುದು ಬಿಟ್ಟು ಚುನಾವಣೆಯನ್ನು ರಾಜಕೀಯವಾಗಿ ಎದುರಿಸಲಿ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಳ್ಳು ಆರೋಪಗಳನ್ನು ಮಾಡುವುದರಿಂದ ಯಾವು ಪ್ರಯೋಜನವೂ ಇಲ್ಲ ಎಂದರು. ಶರತ್‌ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಮುನಿಸ್ವಾಮಿ ಹೇಳಿದರು.

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ