ದಾವಣಗೆರೆ (ಜು.04): ರಾಜಕೀಯವಾಗಿ ನನ್ನನ್ನು ಮುಗಿಸಲು ಎಲ್ಲಾ ವಿಚಾರಕ್ಕೂ ಕಾಂಗ್ರೆಸ್ ನಾಯಕರು ನನ್ನನ್ನೇ ಗುರಿಯಾಗಿ ಮಾಡುತ್ತಿದ್ದಾರೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ. ಸಿದ್ದೇಶ್ವರ ಆರೋಪಿಸಿದ್ದಾರೆ.
' ಯಡಿಯೂರಪ್ಪ ಮಗ ಕಂಪ್ಲೆಂಟ್ ಕೊಟ್ಟಿದ್ದಾರೆ, ಪಿಎ ಆಗಲಿ, ಯಾರೇ ಆಗಲಿ.. ಶಿಕ್ಷೆ ಆಗಲೇಬೇಕು' .
ಶನಿವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಏನೇ ಆದರೂ ಅದಕ್ಕೆಲ್ಲಾ ನಾನೇ ಕಾರಣ ಎಂಬುದಾಗಿ ಕಾಂಗ್ರೆಸ್ಸಿನ ನಾಯಕರೆನಿಸಿಕೊಂಡವರು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಹೆಸರು ಪ್ರಸ್ತಾಪಿಸದೇ ಕಿಡಿಕಾರಿದರು.
ಖಾಸಗಿ ಬ್ಯಾನರ್‌ನಡಿ ಸರ್ಕಾರದ ಕೋಟಾದಿಂದ ಬಂದ ಲಸಿಕೆಯನ್ನು ನೀಡದಂತೆ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದು, ಸತ್ಯ. ಈ ಕಾರಣಕ್ಕೆ ನನ್ನನ್ನು ಕಾಂಗ್ರೆಸ್ಸಿನವರು ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.