'ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು'

Suvarna News   | Asianet News
Published : Mar 08, 2020, 08:17 PM ISTUpdated : Mar 08, 2020, 08:19 PM IST
'ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು'

ಸಾರಾಂಶ

ಥಾಯ್ಲೆಂಡ್ ದೇಶದಿಂದ ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಹಾರ| 50 ಎಕರೆಯಲ್ಲಿ ಸೆಟ್ ನಿರ್ಮಿಸಿ ಮದುವೆ ಮಾಡಲು ಹೊರಟಿದ್ದಾರೆ| ಸಾರ್ವಜನಿಕ ಜೀವನದಲ್ಲಿರುವವರು ಆದರ್ಶವಾಗಿ ಜೀವನ ಮಾಡಬೇಕು| ಆದರ್ಶವಾಗಿ ಮದುವೆ ಮಾಡಬೇಕು: ಹೆಚ್. ವಿಶ್ವನಾಥ್|

ಕೋಲಾರ[ಮಾ.08]:  ರಾಜ್ಯ ಬಜೆಟ್ ಜನಪ್ರಿಯವಾಗಿದೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಉತ್ತಮ ಬಜೆಟ್ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡೋದ್ರಲ್ಲಿ ಯಾವುದೇ ಅರ್ಥವಿಲ್ಲ. ನಾನು‌ ಚುನಾವಣೆ ಹೇಗೆ ಮಾಡಿದ್ದೀನಿ ನೋಡಿದಿನಿ ಅಂತ ಹೇಳುತ್ತಾರೆ. ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಹೇಗೆ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂದು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಥಾಯ್ಲೆಂಡ್ ದೇಶದಿಂದ ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಹಾರ ತರಿಸಿದ್ದಾರೆ. 50 ಎಕರೆಯಲ್ಲಿ ಸೆಟ್ ನಿರ್ಮಿಸಿ ಮದುವೆ ಮಾಡಲು ಹೊರಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾರ್ವಜನಿಕ ಜೀವನದಲ್ಲಿರುವವರು ಆದರ್ಶವಾಗಿ ಜೀವನ ಮಾಡಬೇಕು, ಆದರ್ಶವಾಗಿ ಮದುವೆ ಮಾಡಬೇಕು. ಬಿಜೆಪಿ ಪಕ್ಷ ನನ್ನನ್ನ ನಿರ್ಲಕ್ಷ್ಯ ಮಾಡಿಲ್ಲ ಎಂದು ತಿಳಿಸಿದ್ದಾರೆ.

PREV
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ