ಬೆಳಗಾವಿ: ಗೂಗಲ್ ಮ್ಯಾಪ್ ನಂಬಿ ರಾತ್ರಿಯಿಡಿ ಕಾಡಿನಲ್ಲೇ ಕಳೆದ ಕುಟುಂಬ!

By Girish Goudar  |  First Published Dec 6, 2024, 9:53 AM IST

ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟವರ್ಕ್ ಸಿಗದೇ ಪರದಾಡಿದ್ದಾರೆ. ನಾಲ್ಕು ಕಿಲೋ ಮೀಟರ್ ಹೊರ ಬಂದ ಬಳಿಕ ನೆಟವರ್ಕ್ ಸಿಕ್ಕ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ 112 ಸಿಬ್ಬಂದಿಗೆ ಕರೆ ಮಾಡಿದ್ದರು. ಪೊಲೀಸರ ನೆರನಿಂದ ಕುಟುಂಬ ಕಾಡಿನಿಂದ ಹೊರ ಬಂದಿದೆ. ಗೂಗಲ್ ಮ್ಯಾಪ್ ನಂಬಿ ರಾತ್ರಿ ಇಡೀ ಕಾರಿನಲ್ಲಿ ಕಳೆದಿದ್ದಾರೆ. 


ಬೆಳಗಾವಿ(ಡಿ.06): ಗೂಗಲ್ ಮ್ಯಾಪ್ ನಂಬಿ ಕುಟುಂಬವೊಂದು ರಾತ್ರಿಯಿಡಿ ಕಾಡಿನಲ್ಲಿಯೇ ಕಳೆದ ಘಟನೆ ಜಿಲ್ಲೆಯ ಖಾನಾಪುರ ಭೀಮಗಢ ಅರಣ್ಯ ಪ್ರದೇಶಲ್ಲಿ ನಡೆದಿದೆ. 

ಬಿಹಾರ ಮೂಲದ ರಣಜಿತದಾಸ್ ಕುಟುಂಬ ಗೋವಾಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಮಧ್ಯೆ ಸಮೀಪ ಗೂಗಲ್‌ ಮ್ಯಾಪ್ ದಾರಿ ತೋರಿಸಿದೆ. ಮ್ಯಾಪ್ ನಂಬಿ ಭೀಮಗಢ ಅರಣ್ಯದೊಳಗೆ 7-8 ಕಿ.ಮೀ ಬಂದಿದ್ದಾರೆ. 

Tap to resize

Latest Videos

ಗೂಗಲ್ ಮ್ಯಾಪ್ ನಂಬಿ ಕಾಲುವೆ ಬಿದ್ದ ಕಾರು, ಪ್ರಯಾಣಿಕರ ಜೀವ ಉಳಿಸಿದ ಟಾಟಾ ಟಿಗೋರ್!

ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟವರ್ಕ್ ಸಿಗದೇ ಪರದಾಡಿದ್ದಾರೆ. ನಾಲ್ಕು ಕಿಲೋ ಮೀಟರ್ ಹೊರ ಬಂದ ಬಳಿಕ ನೆಟವರ್ಕ್ ಸಿಕ್ಕ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ 112 ಸಿಬ್ಬಂದಿಗೆ ಕರೆ ಮಾಡಿದ್ದರು. 
ಪೊಲೀಸರ ನೆರನಿಂದ ಕುಟುಂಬ ಕಾಡಿನಿಂದ ಹೊರ ಬಂದಿದೆ. ಗೂಗಲ್ ಮ್ಯಾಪ್ ನಂಬಿ ರಾತ್ರಿ ಇಡೀ ಕಾರಿನಲ್ಲಿ ಕಳೆದಿದ್ದಾರೆ. 

ಜಿಪಿಎಸ್‌ ತೋರಿದ ದಾರೀಲಿ ಮದುವೆ ಮನೆಗೆ ಹೋಗ್ತಿದ್ದ ಕಾರು ಸೀದಾ ನದಿಗೆ ಬಿದ್ದು ಮೂವರ ಸಾವು!

ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಗೂಗಲ್‌ ಮ್ಯಾಪ್ಸ್‌ನಲ್ಲಿನ ಎಡವಟ್ಟಿನ ಕಾರಣದಿಂದ ಭಾರೀ ದುರಂತವೊಂದು ನ.25 ರಂದು ಸಂಭವಿಸಿತ್ತು. ಮದುವೆ ಮನೆಗೆ ರೀಚ್‌ ಆಗಲು ವ್ಯಕ್ತಿಗಳು ಗೂಗಲ್‌ ಮ್ಯಾಪ್ಸ್‌ ನೆಚ್ಚಿಕೊಂಡಿದ್ದರು. ಆದರೆ, ಗೂಗಲ್‌ ಮ್ಯಾಪ್‌ ಕಾಮಗಾರಿ ನಡೆಯುತ್ತಿದ್ದ ಬ್ರಿಜ್‌ಅನ್ನು ದಾರಿಯಾಗಿ ತೋರಿಸಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗಿದ ಕಾರು, ನದಿಗೆ ಉರುಳಿ ಬಿದ್ದು ಮೂವರು ಸಾವು ಕಂಡಿರುವ ಘಟನೆ ನಡೆದಿದೆ. ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌ (ಜಿಪಿಎಸ್‌) ಸಹಾಯದಿಂದ ಸಂಚಾರ ಮಾಡುತ್ತಿದ್ದ ಕಾರು ಇನ್ನೂ ಕಾಮಗಾರಿ ನಡೆಯುತ್ತಿದ್ದ ಸೇತುವೆಯಿಂದ ಉರುಳಿ ನದಿಗೆ ಬಿದ್ದಿದೆ. ಇದರಿಂದಾಗಿ ಮದುವೆ ಮನೆಗೆ ಹೋಗ್ತಿದ್ದ ಮೂವರು ಮಸಣದ ದಾರಿ ಹಿಡಿದಿದ್ದರು. 

ಭಾನುವಾರ ಬರೇಲಿಯಿಂದ ಬದೌನ್‌ ಜಿಲ್ಲೆಯ ದಾತ್‌ಗಂಜ್‌ನಲ್ಲಿ ನಡೆಯಬೇಕಿದ್ದ ಮದುವೆ ಮನೆಗೆ ಹೊರಟಿತ್ತು. ಬೆಳಗ್ಗೆ 10 ಗಂಟೆಯ ವೇಳೆಗೆ ಖಲ್ಪುರ್‌-ದಾತ್‌ಗಂಜ್‌ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದ ಸೇತುವೆಯ ಮಾಹಿತಿ ತಿಳಿಯದೇ ವಾಗವಾಗಿ ಚಲಿಸಿದೆ. ಈ ವೇಳೆ ಕಾರು ರಾಮ್‌ಗಂಗಾ ನದಿಗೆ ಉರುಳಿ ಬಿದ್ದಿದ್ದು ಪ್ರಯಾಣ ಮಾಡುತ್ತಿದ್ದ ಮೂವರು ಸಾವು ಕಂಡಿದ್ದಾರೆ. ಇತ್ತೀಚಿನ ಪ್ರವಾಹದ ವೇಳೆ ಸೇತುವೆಯ ಭಾಗ ಕುಸಿದಿತ್ತು. ಆದರೆ, ಇದು ಜಿಪಿಎಸ್‌ನಲ್ಲಿ ಪರಿಷ್ಕರಣೆ ಆಗದ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿತ್ತು. 

ಸಾವು ಕಂಡಿರುವ ಇಬ್ಬರನ್ನು ವಿವೇಕ್‌ ಹಾಗೂ ಅಮಿತ್‌ ಎಂದು ಗುರುತಿಸಲಾಗಿದೆ. ಗುರುಗ್ರಾಮದಿಂದ ಹೊರಟಿಟ್ದದ ಅವರು ದಾತ್‌ಗಂಜ್‌ನಲ್ಲಿ ಸ್ನೇಹಿತನ ಮದುವೆಗಾಗಿ ತೆರಳಿದ್ದರು. 50 ಫೀಟ್‌ನಿಂದ ಕೆಳಗೆ ಕಾರು ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಸಾವು ಕಂಡಿದ್ದರು.

ಗೂಗಲ್ ಮ್ಯಾಪ್‌ನಿಂದ ಮತ್ತೊಂದು ಎಡವಟ್ಟು, ಆಸ್ಪತ್ರೆ ಬದಲು ನದಿ ದಾರಿ ತೋರಿಸಿದ ಮ್ಯಾಪ್‌!

ಬಹಳ ಸಮಯದ ಬಳಿಕ ಸ್ಥಳೀಯರು ಸೇತುವೆಯ ಮೇಲಿನಿಂದ ಕಾರು ಬಿದ್ದಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ನಜ್ಜುಗುಜ್ಜಾದ ಕಾರ್‌ನಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. 

'ಸೇತುವೆಯ ಮೇಲಿನಿಂದ ರಾಮಗಂಗಾ ನದಿಗೆ ಬಿದ್ದ ಕಾರ್‌ಅನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದೆವು. ವ್ಯಾಗನರ್‌ ಕಾರ್‌ಅನ್ನು ಟ್ಯಾಕ್ಸಿ ಮಾಡಿಕೊಂಡು ಇವರು ಬಂದಿದ್ದರು. ಅಪೂರ್ಣ ಸೇತುವೆಯ ಮೇಲಿನಿಂದ ಬಿದ್ದು ಸಾವು ಕಂಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದರು. ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿಗಳ ಕುಟುಂಬದವರು ತಮ್ಮವರ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ದೂರಿದ್ದರು. ಅದಲ್ಲದೆ, ಅಪೂರ್ಣ ಸೇತುವೆಗೆ ಬ್ಯಾರಿಕೇಡ್‌ಗಳನ್ನು ಯಾಕೆ ಹಾಕಲಾಗಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದರು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿದ್ದರು. 

click me!