ರಾಜಸ್ಥಾನದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹೊನ್ನಾಳಿಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ನೇತೃತ್ವದ ಪ್ರತಿಭಟನೆ ನಡೆಯಿತು. ತುಂತುರು ಮಳೆಯಲ್ಲಿಯೇ ಪ್ರತಿಭಟನಾ ರ್ಯಾಲಿ ನಡೆಸಿದ ರೇಣುಕಾಚಾರ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು
ವರದಿ : ವರದರಾಜ್
ದಾವಣಗೆರೆ (ಜುಲೈ4): ರಾಜಸ್ಥಾನದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹೊನ್ನಾಳಿಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ನೇತೃತ್ವದ ಪ್ರತಿಭಟನೆ ನಡೆಯಿತು. ತುಂತುರು ಮಳೆಯಲ್ಲಿಯೇ ಪ್ರತಿಭಟನಾ ರ್ಯಾಲಿ ನಡೆಸಿದ ರೇಣುಕಾಚಾರ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ನೂರಾರು ಹಿಂದೂ ಕಾರ್ಯಕರ್ತರ ಜೊತೆ ರೇಣುಕಾಚಾರ್ಯ ನಿವಾಸದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೂ ಪ್ರತಿಭಟನಾ ಜಾಥಾ ನಡೆಸಿದ ರೇಣುಕಾಚಾರ್ಯ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಉದಯಪುರ ದಲ್ಲಿ ಕನ್ನಯಲಾಲ್ ಹತ್ಯೆ ಮಾಡಿದ್ದು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಪಾಕಿಸ್ತಾನ ದಲ್ಲಿ ತರಬೇತಿ ಪಡೆದು ಭಯೋತ್ಪಾದಕರು ಕನ್ನಯ್ಯ ಲಾಲ್ ನ ಹತ್ಯೆ ಮಾಡಿ ಪ್ರಧಾನಿಗಳಿಗೆ ಧಮ್ಕಿ ಹಾಕಿದ್ದಾರೆ. ಅವರನ್ನು ಗುಂಡಿಕ್ಕಿ ಕೊಂಡಾಗ ಮಾತ್ರ ಹತ್ಯೆಯಾದ ಹಿಂದೂಗಳ ಆತ್ಮಕ್ಕೆ ಶಾಂತಿ ಸಿಗುತ್ತೆ. ಕೊಲೆ ಬೆದರಿಕೆ ಇದೆ ಎಂದು ಗೊತ್ತಿದ್ದರು ರಾಜಸ್ಥಾನ ಸರ್ಕಾರ (Rajastan Govt) ನಿರ್ಲಕ್ಷ್ಯ ವಹಿಸಿದೆ. ಕೂಡಲೇ ರಾಷ್ಟ್ರಪತಿಗಳಿಗೆ (President) ಮನವಿ ಮಾಡುತ್ತೇವೆ. ಕೂಡಲೇ ರಾಜಸ್ಥಾನದ ಸರ್ಕಾರವನ್ನು ವಜಾ ಮಾಡಬೇಕು.ಹಿಂದೂಗಳ ಬಗ್ಗೆ ಹಗುರವಾಗಿ ಕಾಣುತ್ತಿದ್ದಾರೆ. ಅಂತವರ ಬಗ್ಗೆ ನಾವು ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡುತ್ತೇವೆ. ಅನ್ನ ನೀರು ಇಲ್ಲೆ ತಿಂದು ಕುಡಿದು ಪಾಕಿಸ್ತಾನಕ್ಕೆ (Pakistan) ಜೈಕಾರ ಹಾಕುತ್ತಾರೆ. ಹುಬ್ಬಳ್ಳಿ(Hubli) ಯಲ್ಲಿ ಮೌಲಿಗಳೇ ಗಲಭೆಗೆ ಪ್ರಚೋದನೆ ನೀಡಿದ್ದಾರೆ.
ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ, ನನ್ನ ಕತ್ತನ್ನು ಸೀಳಬೇಡಿ: ಅಭಿಯಾನ ಶುರು
ಹತ್ಯೆ ಮಾಡಿದ ಹಂತಕರು ಬಿಜೆಪಿ ಕಾರ್ಯಕರ್ತರು ಎನ್ನುವ ವಿಚಾರವನ್ನು ಹಬ್ಬಿಸುತ್ತಿದ್ದಾರೆ. ವಿಷಯಾಂತರ ಮಾಡಬೇಕು ಎಂದು ಈ ರೀತಿ ಹುಟ್ಟು ಹಾಕಿದ್ದಾರೆ. ಸಿದ್ದರಾಮಯ್ಯ ಡಿಕೆಶಿ ರಾಹುಲ್ ಗಾಂಧಿ ಹಿಂದುಗಳ ಪರವಾಗಿ ಇದೀವಿ ಎಂದು ಹೇಳಲಿ ನೋಡೋಣ. ನಾವು ಓಟ್ ಬ್ಯಾಂಕ್ ರಾಜಕಾರಣ ಮಾಡೋದಿಲ್ಲ, ಅಲ್ಪಸಂಖ್ಯಾತ ಓಲೈಕೆ ಮಾಡುತ್ತಿಲ್ಲ ಎಂದು ಹೇಳಲಿ. ಇದೆಲ್ಲಾ ಬೇಕು ಎಂದು ಸೃಷ್ಟಿ ಮಾಡಿದ್ದಾರೆ ಬಿಜೆಪಿಗೂ ಅವರಿಗೂ ಸಂಬಂಧ ಇಲ್ಲ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ನೆಲೆ ಇಲ್ಲ ಇಡಿ ದೇಶದಲ್ಲಿ ಕಾಂಗ್ರೆಸ್ ಎರಡೇ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದರು.
ಸಿದ್ದರಾಮೋತ್ಸವದ ಬಗ್ಗೆ ನಾನು ಟೀಕೆ ಮಾಡೋದಿಲ್ಲ : ರೇಣುಕಾಚಾರ್ಯ
ಅದು ಅವರ ವೈಯಕ್ತಿಕ ಕಾರ್ಯಕ್ರಮ ಮುಳುಗಿದ ಹಡಗಿಗೆ ನಾವಿಕ ನಾನೇ ಆಗಬೇಕು ಎನ್ನುತ್ತಿದ್ದಾರೆ. ನಾನು ಮುಂಚೂಣಿಯಲ್ಲಿ ಇರಬೇಕು ಎಂದು ಪೈಪೋಟಿ ನಡೆಸುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಬಲಿಪಶು ಮಾಡಿದ್ದಾರೆ. ಸಿದ್ದರಾಮಯ್ಯನವರ (Siddaramia) ಮನಸ್ಸು ಕಾಂಗ್ರೆಸ್‌ನಲ್ಲಿ ಇಲ್ಲ. ಹಲವು ಬಾರಿ ವೇದಿಕೆ ಮೇಲೆ ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ. ಅವರ ದೇಹ ಮಾತ್ರ ಕಾಂಗ್ರೆಸ್ ನಲ್ಲಿ ಇದೆ. ಕಾಂಗ್ರೆಸ್ ಬಿಟ್ಟು ಬೇರೆ ಕಡೆ ಹೋಗುವ ಯೋಚನೆ ಮಾಡಿ ಎಂದು ಸಿದ್ದರಾಮಯ್ಯಗೆ ರೇಣುಕಾಚಾರ್ಯ (Renukhacharya) ಕುಟುಕಿದರು.
ಚಿಕ್ಕಮಗಳೂರು: ಕನ್ಹಯ್ಯ ಕೊಲೆಗೈದವರನ್ನ ನೇಣಿಗೇರಿಸಿ, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಬಿಜೆಪಿಯ ಒಬ್ಬಬ್ಬರೂ ಸಿಂಹದ ಮರಿಗಳು, ಮುಳುಗಿದ ಹಡಗನ್ನು ಯಾರು ಹತ್ತಲು ಹೋಗುತ್ತಾರೆ ಹೇಳಿ ಎಂದು ವ್ಯಂಗ್ಯವಾಡಿದ ರೇಣುಕಾಚಾರ್ಯ ಸಿದ್ದರಾಮಯ್ಯನವರನ್ನು ನಮ್ಮ ಪಕ್ಷಕ್ಕೆ ಎಳೆಯುವ ಪ್ರಯತ್ನ ಇಲ್ಲ. ನಮ್ಮಲ್ಲಿಯೇ ಮುಖಂಡರು ಸಾಕಷ್ಟು ಜನರಿದ್ದಾರೆ. ಯಡಿಯೂರಪ್ಪ, ಬೊಮ್ಮಯಿ, ಕಟೀಲ್ ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ. ಸಿದ್ದರಾಮಯ್ಯ ಅವರು ಬಂದರೆ ತಪ್ಪೇನಿದೆ, ಅವರಲ್ಲಿ ಕೂಡ ಒಳ್ಳೆಯ ನಾಯಕತ್ವ ಇದೆ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಿದ್ದಾರೆ ಎಂದೂ ರೇಣುಕಾಚಾರ್ಯ ಹೇಳಿದರು.
ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಎಂಬ ಸಮೀಕ್ಷೆ ವಿಚಾರ
ಕಾಂಗ್ರೆಸ್ ನವರು ಸಮೀಕ್ಷೆಯನ್ನು ಬೆಳಗ್ಗೆ ಮಾಡಿಸಿದ್ರಾ, ರಾತ್ರಿ ಮಾಡಿಸಿದ್ರಾ ನನಗೆ ಅನಿಸಿದಂತೆ ಕಾಂಗ್ರೆಸ್ ನವರು ಮಧ್ಯರಾತ್ರಿ ಸಮೀಕ್ಷೆ ಮಾಡಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಉತ್ತಮ ಅಡಳಿತ ಇದೆ. 2023 ರ ಚುನಾವಣೆಯಲ್ಲಿ 100 ಕ್ಕೆ 100 ರಷ್ಟು ಬಿಜೆಪಿ ಅಧಿಕಾರಕ್ಕೆ ಬರುತ್ತೆ.
ಲೀನಾ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ಸಿನಿಮಾದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಸಿನಿಮಾ ನಿರ್ಮಾಪಕಿ ಲೀನಾ ವಿರುದ್ದ ರೇಣುಕಾಚಾರ್ಯ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ದೇವಾನುದೇವತೆಗಳಿಗೆ ದೇಶದ್ರೋಹಿ ಗಳು ಅಪಮಾನ ಮಾಡುತ್ತಿದ್ದಾರೆ. ಒಂದು ಕಡೆ ಹಿಂದೂ ಯುವಕರನ್ನು ಹತ್ಯೆ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಲೀನಾ ಎಂಬ ಕ್ರಿಶ್ಚಿಯನ್ ಮಹಿಳೆ ಕಾಳಿ ದೇವತೆಗೆ ಅಪಮಾನ ಮಾಡಿದ್ದಾರೆ. ಕಾಳಿ ಮಾತೆಯ ಒಂದು ಕೈಯಲ್ಲಿ ಸಿಗರೇಟ್ ಹಿಡಿಸಿ ಅಪಮಾನ ಮಾಡಿದ್ದಾರೆ
ಇದನ್ನು ಹಿಂದೂಗಳು ಒಕ್ಕೊರಳಿನಿಂದ ಖಂಡಿಸಬೇಕು ಎಂದು ರೇಣುಕಾಚಾರ್ಯ ಹೇಳಿದರು.