ಚಿಕ್ಕಮಗಳೂರು: ಕನ್ಹಯ್ಯ ಕೊಲೆಗೈದವರನ್ನ ನೇಣಿಗೇರಿಸಿ, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

*  ಕೊಲೆಗಡುಕರ ಪ್ರತಿಕೃತಿ ಸಾರ್ವಜನಿಕವಾಗಿ ನೇಣಿಗೇರಿಸಿ, ಪ್ರತಿಕೃತಿ ದಹನ 
*  ಮಾನವ ಸರಪಳಿ ನಿರ್ಮಿಸಿ, ಆರೋಪಿಗಳನ್ನ ನೇಣಿಗೇರಿಸುವಂತೆ ಆಗ್ರಹ 
*  ಭಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರಿಂದ ಪ್ರತಿಭಟನೆ
 

Protest by Hindu organisations For Against Udaipur Murder Case in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.30):  ರಾಜಾಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ ಜಿಹಾದಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಇಂದು(ಗುರುವಾರ) ಸಂಜೆ ಚಿಕ್ಕಮಗಳೂರು  ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕೊಲೆಗಡುಕರ ಪ್ರತಿಕೃತಿ ನೇಣಿಗೇರಿಸಿ ಪ್ರತಿಕೃತಿ ದಹನ 

ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್ಗಳಿಗೆ ಬೆಂಕಿ ಹಚ್ಚಿ, ಜೆಹಾದಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊಲೆಗಡುಕರ ಪ್ರತಿಕೃತಿಯನ್ನ ಸಾರ್ವಜನಿಕವಾಗಿ ನೇಣಿಗೇರಿಸಿ, ಪ್ರತಿಕೃತಿ ದಹನವನ್ನು ಮಾಡಿದರು.ರಾಷ್ಟ್ರೀಯ ಹೆದ್ದಾರಿಯಾದ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಆರೋಪಿಗಳನ್ನ ನೇಣಿಗೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿರಸ್ತೆ ತಡೆ ನಡೆಸಿ, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು.

ಸಖರಾಯಪಟ್ಟಣದಲ್ಲಿ ಬಗೆ-ಬಗೆಯ ಹಲಸಿನ ಖಾದ್ಯ, ಬಾಯಿಗೆ ರುಚಿ ತೋರಿಸಿದ್ರೆ ಬಿಡಲು ಅಸಾಧ್ಯ

ಭಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು ಮಾತನಾಡಿ, ಕನ್ಹಯ್ಯ ಲಾಲ್, ಶಿವಮೊಗ್ಗದ ಹರ್ಷ ಸೇರಿದಂತೆ ಹಲವು ಹಿಂದೂಗಳ ಹತ್ಯೆಗೆ ಇಂದಲ್ಲಾ ನಾಳೆ ಪ್ರತೀಕಾರವನ್ನು ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಹಿಂದೂ ಸಮಾಜ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಜಿಹಾದಿ ಮನಸ್ಥಿತಿಯವರೊಂದಿಗೆ ವ್ಯಾಪಾರ, ವಹಿವಾಟು ನಿಲ್ಲಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೊದಲು ಮದ್ರಾಸಗಳನ್ನು ಬಂದ್ ಮಾಡಬೇಕು. ಅಲ್ಲಿಂದಲೇ ಮಕ್ಕಳಲ್ಲಿ ಜೆಹಾದಿ ಮನಸ್ಥಿತಿಯನ್ನು ಬಿತ್ತಲಾಗುತ್ತಿದೆ. ಹಿಂದೂಗಳ ಹತ್ಯೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದರು. 

ಅಂಬೇಡ್ಕರ್ ಸಂವಿಧಾನವನ್ನು ಉಳಿಸುವವರು, ರಕ್ಷಿಸುವವರು ಬಜರಂಗದಳ, ವಿಶ್ವಹಿಂದೂ ಪರಿಷತ್ ಮಾತ್ರ. ಸಂವಿಧಾನವನ್ನು ಒಪ್ಪದವರು ದೇಶಬಿಟ್ಟು ತೊಲಗಬೇಕೆಂದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್ ಸೇರಿದಂದೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios