
ರಾಮನಗರ (ಜ.29): ರಾಜ್ಯದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಆತಂಕದ ನಡುವೆಯೇ ಬಿಡದಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಮಿಕರ ಮನೆಗೆ ನುಗ್ಗಿ ಒಂಟಿಯಾಗಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಿನ್ನೆ ನಡೆದಿದೆ.
ರಾಮನಗರ ಜಿಲ್ಲೆಯ ಬಿಡದಿಯ ಬಿಡದಿ ಬಳಿಯ ಅಬ್ಬನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಡಿಶಾ ರಾಜ್ಯದಿಂದ ಬಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಾ ವಾಸವಿದ್ದ ಕಾರ್ಮಿಕ ಕುಟುಂಬದ 20 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಲಾಗಿದೆ. ಹಾಸನ ಮೂಲದ ಮಂಜು ಆಲಂ ಎಂಬ (32) ವ್ಯಕ್ತಿಯೇ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಆರೋಪಿ ಮಂಜು ಆಲಂನನನ್ನು ಬಿಡದಿ ಪೋಲಿಸರು ಬಂಧಿಸಿದ್ದಾರೆ. ಸಂತ್ರಸ್ಥೆ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಕಾರ್ಖಾನೆಯಲ್ಲಿ ಕೆಲಸಕ್ಕೆ ಬಂದಿರುವ ಒಡಿಶಾ ಮೂಲದ ಕುಟುಂಬದಲ್ಲಿ ಮನೆಯ ಸದಸ್ಯರು ಕೆಲಸಕ್ಕೆ ಹೋಗಿದ್ದಾರೆ. ಕೆಲಸದಿಂದ ಬರುವುದು ತಡವಾಗಿದ್ದರಿಂದ ಮನೆಯವರಿಗಾಗಿ ಯುವತಿ ಕಾಯುತ್ತಾ ಕುಳಿತಿದ್ದಾಳೆ. ಈ ವೇಳೆ ಮನೆಯಲ್ಲಿ ಯುವತಿ ಒಬ್ಬಂಟಿ ಆಗಿರುವುದನ್ನು ನೋಡಿಕೊಂಡು ಹೊಂಚುಹಾಕಿ ಒಳಗೆ ನುಗ್ಗಿದ ಕಾಮುಕ ಮಂಜು, ಯುವತಿ ಎಷ್ಟೇ ವಿರೋಧಿಸಿದರೂ ಬಲಾತ್ಕಾರ ಮಾಡಿ ಪರಾರಿ ಆಗಿದ್ದಾನೆ. ಯುವತಿ ಮನೆಯವರು ಬಂದ ನಂತರ ಮಾಹಿತಿ ತಿಳಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು. ಆಗ ಪೋಷಕರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆನು, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಅತ್ಯಾಚಾರ ಆರೋಪಿ ಹಾಸನ ಮೂಲದ ಮಂಜು ಆಲಂಗೆ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಮಕ್ಕಳು ಕೂಡ ಇವೆ. ಜೀವನೋಪಾಯಕ್ಕಾಗಿ ಬಿಡದಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ರಾಮನಗರ ತಾಲ್ಲೂಕಿನ ಬಿಡದಿ ಬಳಿಯ ಅಬ್ಬನಕುಪ್ಪೆ ಗ್ರಾಮದಲ್ಲಿ ವಾಸವಿದ್ದ, ಓಡಿಶಾ ಮೂಲದ ಕಾರ್ಮಿಕನ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಅತ್ಯಾಚಾರ ಸಾಬೀತಾದಲ್ಲಿ ಈತನಿಗ ಶಿಕ್ಷೆ ಆಗಲಿದ್ದು, ಕುಟುಂಬ ಸದಸ್ಯರು ಬೀದಿಗೆ ಬೀಳುವ ಸಾಧ್ಯತೆಯಿದೆ.