'ಕೊರೋನಾದಂತಹ ಸಂದರ್ಭದಲ್ಲೂ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿರುವ ಬಿಜೆಪಿಗರು'

By Kannadaprabha News  |  First Published Jul 19, 2020, 8:41 AM IST

ಕೊರೋನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ| ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ ಆರೋ​ಪ| ಕೊರೋನಾ ವಾರಿಯರ್ಸ್‌ಗಳಿಗೆ ಪಿಪಿಇ ಕಿಟ್‌, ವೇತನ ನೀಡುವಲ್ಲಿ ತಾರತಮ್ಯ ಮಾಡುವ ಮೂಲಕ ಆಡಳಿತದಲ್ಲಿ ಸಂಪೂರ್ಣವಾಗಿ ಎಡವಿದ ಬಿಜೆಪಿ ಸರ್ಕಾರ|


ಗುತ್ತಲ(ಜು.19): ರಾಜ್ಯಾದ್ಯಂತ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಬಗ್ಗೆ ಆಡಳಿತಾರೂಢ ಬಿಜೆಪಿ ಪಕ್ಷ ಆರೋಗ್ಯದ ದೃಷ್ಟಿಯಿಂದ ಸೋಂಕು ಹರಡದಂತೆ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ ಹೇಳಿದ್ದಾರೆ. 

ಪಟ್ಟಣದ ಜಯ ಕರ್ನಾಟಕ ಆಟೋ ಚಾಲಕ ಸಂಘದ ವರಿಗೆ ಮಾಸ್ಕ್‌ ವಿತರಿಸಿ ಮಾತನಾಡಿದರು. ಚಾಲಕರಾದವರು ತಾವುಗಳೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಪ್ರಯಾಣಿಕರಿಗೂ ಮಾಸ್ಕ್‌ ಧರಿಸಿದರೆ ಮಾತ್ರ ಬಾಡಿಗೆ ಬರುವುದಾಗಿ, ಅವರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಬಿಜೆಪಿ ಸರ್ಕಾರ ಕೊರೋನಾದಂತಹ ಸಂದಿಗ್ಧ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಕ್ರಮ ಕೈಗೊಳ್ಳದೆ, ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಆಟೋ ಚಾಲಕರ ಜೀವನವೂ ದುಸ್ತರವಾಗಿದ್ದು, ಮೊದಲಿನಂತೆ ಬಾಡಿಗೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಆಟೋ ಚಾಲಕರಿಗೂ ಆರ್ಥಿಕ ಸಹಾಯಧನ ನೀಡಬೇಕು ಎಂದು ಹೇಳಿದರು.

Tap to resize

Latest Videos

ಹಾವೇರಿ: ಶಿಗ್ಗಾಂವಿ ತಹಸೀಲ್ದಾರ್‌ಗೆ ಕೊರೋನಾ, ಕಚೇರಿ ಸೀಲ್‌ಡೌನ್‌

ಯುವ ಕಾಂಗ್ರೆಸ್‌ ಅಧ್ಯಕ್ಷ ಅಜಯ ಬಂಡಿವಡ್ಡರ ಮಾತನಾಡಿ, ಕೊರೊನಾ ರೋಗ ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಮಹಾಮಾರಿಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ವೈದ್ಯರು, ನರ್ಸ್‌ಗಳು, ಪೊಲೀಸರು, ಕಂದಾಯ ಇಲಾಖೆ, ಪೌರಾಡಳಿತ ಇಲಾಖೆಯ ಅಧಿಕಾರಿಗಳು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ರೋಗದ ಹತೋಟಿಗೆ ತಮ್ಮದೆ ಆದ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಅವರೊಂದಿಗೆ ಜನರ ಸಹಕಾರವು ಅತೀ ಅವಶ್ಯವಾಗಿದೆ. ಆದರೆ, ಬಿಜೆಪಿ ಸರ್ಕಾರ ಇಂತಹ ಕೊರೋನಾ ವಾರಿಯರ್ಸ್‌ಗಳಿಗೆ ಪಿಪಿಇ ಕಿಟ್‌, ವೇತನ ನೀಡುವಲ್ಲಿ ತಾರತಮ್ಯ ಮಾಡುವ ಮೂಲಕ ಆಡಳಿತದಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಲಿಂಗೇಶ ಬೆನ್ನೂರ, ಮಾಲತೇಶ ಮಡಿವಾಳರ, ಆಟೋ ರಿಕ್ಷಾ ಚಾಲಕರಾದ ಬಾಬುಸಾಬ ಆಲದಗೇರಿ, ಸಂತೋಷ ಶೆಟ್ಟೆಪ್ಪನವರ, ದಾದಾಪೀರ ಗಳಗನಾಥ, ಗುಡ್ಡಪ್ಪ ಹಡಗಲಿ, ನಾಗರಾಜ ಆರೇರ, ಸಾಧಿಕ್‌ ಸಾಂಗ್ಲಿ, ಸಲ್ಮಾನ್‌ ಸಾಂಗ್ಲಿ, ಬಸವರಾಜ ಸಣ್ಣಪ್ಪನವರ, ರಫೀಕ್‌ ಭಾಗವಾನ, ಪುಟ್ಟಪ್ಪ ಕೋಟ್ಯಾಳ, ಮಂಜುನಾಥ ಅಂಗಡಿ, ಮಲ್ಲಪ್ಪ ಜಾಲಮ್ಮನವರ, ಹನುಮಂತ ಹರನಗೇರಿ, ಲಿಂಗರಾಜ ಹಡಗಲಿ ಸೇರಿದಂತೆ ಅನೇಕರಿದ್ದರು.
 

click me!