ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ, ಶೀತ ವಾತಾವರಣದಿಂದ ವೀಳ್ಯದೆಲೆಯ ಅಭಾವ ಉಂಟಾಗಿದೆ. ಈ ಬಾರಿ ವೀಳ್ಯದೆಲೆ ಬೆಲೆ ಶಾಕ್ ನೀಡಲು ಕಾರಣವಾಗಿದೆ. ವೀಳ್ಯದೆಲೆ ಇತಿಹಾಸದಲ್ಲಿಯೇ ಇತ್ತೀಚೆಗೆ ಇತಿಹಾಸದಲ್ಲಿ ಕಾಣದಷ್ಟು ಬೆಲೆಯೇರಿಕೆ ಉಂಟಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜ.30): ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ, ಶೀತ ವಾತಾವರಣದಿಂದ ವೀಳ್ಯದೆಲೆಯ ಅಭಾವ ಉಂಟಾಗಿದೆ. ಈ ಬಾರಿ ವೀಳ್ಯದೆಲೆ ಬೆಲೆ ಶಾಕ್ ನೀಡಲು ಕಾರಣವಾಗಿದೆ. ವೀಳ್ಯದೆಲೆ ಇತಿಹಾಸದಲ್ಲಿಯೇ ಇತ್ತೀಚೆಗೆ ಇತಿಹಾಸದಲ್ಲಿ ಕಾಣದಷ್ಟು ಬೆಲೆಯೇರಿಕೆ ಉಂಟಾಗಿದೆ. ಅದರ ಬಗೆಗಿನ ಡಿಟೇಲ್ಸ್ ಇಲ್ಲಿದೆ ನೋಡಿ. ಹೀಗೆ ಹಚ್ಚು ಹಸಿರಾಗಿ ಕಾಣ್ತೀರೋ ವೀಳ್ಯದೆಲೆ ಇದೀಗ ಒಂದು ಪೆಂಡಿಗೆ 20 ಸಾವಿರದಷ್ಟು ಬೆಲೆಯೇರಿಕೆ ಕಂಡಿದೆ. ಒಂದು ಕಟ್ಟು ವೀಳ್ಯದೆಲೆ ಇನ್ನೂರು ರೂಪಾಯಿವರೆಗೂ ಬಂದಿದೆಯಂತೆ.
ಸಾಮಾನ್ಯವಾಗಿ ಶುಭ ಸಮಾರಂಭಗಳು ಇರುವ ದಿನಗಳಲ್ಲಿ ವೀಳ್ಯದೆಲೆ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಈ ವರ್ಷ ಮಳೆಯಿಂದ ತೋಟಗಳು ಹಾಳಾಗಿರುವುದಲ್ಲದೆ, ಎಲೆ ಬಳ್ಳಿಗಳಿಗೆ ನಾನಾ ನಮೂನೆಯ ಖಾಯಿಲೆಗಳು ಸಹ ತಗುಲಿವೆ. ಇದರಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ ವೀಳ್ಯದೆಲೆಗೆ ಬೆಲೆ ಬಂದರೂ ರೋಗದ ಕಾಟ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕು ಎಂಬುದು ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮದ ವೀಳ್ಯದೆಲೆ ಬೆಳೆಗಾರರ ಮನವಿ. ಕರ್ನಾಟಕದಲ್ಲಿ ಏಳೆಂಟು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆ ಬೆಳೆಯಲಾಗುತ್ತಿತ್ತು.
ಕಾಂಗ್ರೆಸ್ ಬಸ್‌ಯಾತ್ರೆಗೆ 52 ಸ್ಥಾನ ಮಾತ್ರ: ಸಚಿವ ಅಶ್ವತ್ಥ ನಾರಾಯಣ್
ಆದರೆ ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಸುರಿದ ಮಳೆ ಪ್ರಮಾಣದಿಂದಾಗಿ ಶೇ.40ರಷ್ಟು ತೋಟಗಳು ಹಾಳಾಗಿವೆ. ಹೊಸ ಎಲೆಬಳ್ಳಿ ನಾಟಿ ಮಾಡಿದರೂ ಫಸಲು ಕೊಡಲು ಎರಡು ವರ್ಷ ಬೇಕು. ಹೀಗಾಗಿ ಬೇಡಿಕೆ ಇರುವ ಸಮಯದಲ್ಲಿ ವೀಳ್ಯದೆಲೆಗೆ ಬಂಪರ್ ಬೆಲೆ ಬಂದಿದೆ. ಇನ್ನು ನಿರೀಕ್ಷೆಗಿಂತ ಹೆಚ್ಚು ಸುರಿದ ಮಳೆಯಿಂದಾಗಿ ವೀಳ್ಯದೆಲೆ ಎಲೆ ಬಳ್ಳಿಗಳಿಗೆ ಕರಿಚುಕ್ಕಿ ರೋಗ, ಸೆಕೆಗುಳ್ಳೆ ರೋಗದಂತಹ ಸಮಸ್ಯೆ ಇನ್ನೂ ಇದೆ. ಹೀಗಾಗಿ ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಾಗಲಿ, ಯಾರೂ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಆ ಬಗ್ಗೆ ಗಮನವಹಿಸಿದರೆ ರೈತರಿಗೆ ಅನುಕೂಲವಾಗಲಿದೆ.
ಬಿಜೆಪಿಗೆ ಕಾಂಗ್ರೆಸ್ ಕಂಡರೆ ಭಯ: ಸಿದ್ದರಾಮಯ್ಯ ತಿರುಗೇಟು
ಈ ರೋಗ ನಿವಾರಣೆ ಮಾಡಲು ಮಾರ್ಗದರ್ಶನ ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ವೀಳ್ಯದೆಲೆ ಬಳ್ಳಿಯ ಬೆಳೆಗಾರರು. ವೀಳ್ಯದೆಲೆ ಎಲ್ಲ ಶುಭ ಕಾರಣಗಳಿಗೂ ಬೇಕು. ಇದೀಗ ಸುರಿದ ಹೆಚ್ಚು ಮಳೆಗೆ ಒಂದು ಕಡೆ ದರ ಹೆಚ್ಚಾದರೆ, ಆ ಮಳೆಯಿಂದ ಬಹುತೇಕ ತೋಟಗಳು ಸಾಕಷ್ಟು ಹಾಳಾಗಿ ರೋಗಗಳು ಸಹ ಉಲ್ಬಣವಾಗಿವೆ. ಇದರಿಂದ ವೀಳ್ಯದೆಲೆ ರೈತರು ಪರದಾಡುವಂತಾಗಿದ್ದು, ಅದರೊಟ್ಟಿಗೆ ಗ್ರಾಹಕರು ಸಹ ವೀಳ್ಯದೆಲೆಗೆ ಹೆಚ್ಚಿನ ಬೆಲೆ ತೆರಬೇಕಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ರೋಗ ನಿವಾರಣೆಯ ಕುರಿತು ಮಾರ್ಗದರ್ಶನ ನೀಡಬೇಕಿದೆ.