Bengaluru Traffic Police: ಹಾಫ್‌ ಹೆಲ್ಮೆಟ್‌ ವಿರುದ್ಧ ಪೊಲೀಸರ ಗದಾ ಪ್ರಹಾರ..!

By Kannadaprabha News  |  First Published Jan 26, 2022, 7:31 AM IST

*  ಜನರ ಪ್ರಾಣಕ್ಕೆ ಕುತ್ತಾಗುವ ಕಳಪೆ ಹೆಲ್ಮೆಟ್‌ಗಳ ವಿರುದ್ಧ ಸಂಚಾರ ಪೊಲೀಸರ ಕಾರ್ಯಾಚರಣೆ
*  15 ದಿನದ ಅಭಿಯಾನದ ಬಳಿಕ ದಂಡ
*  ಮೂರು ವರ್ಷಗಳ ಅವಧಿಯಲ್ಲಿ 325 ಮಂದಿ ಬಲಿ 
 


ಬೆಂಗಳೂರು(ಜ.26):  ಇತ್ತೀಚಿಗೆ ದ್ವಿಚಕ್ರ ವಾಹನಗಳ(Bike) ಅಪಘಾತದಲ್ಲಿ(Accident) ಪ್ರಾಣಹಾನಿಗೆ ಹಾಫ್‌ ಹಾಗೂ ಕಳಪೆ ಗುಣಮಟ್ಟದ ಹೆಲ್ಮಟ್‌ಗಳು(Helmet) ಕಾರಣವಾಗುತ್ತಿವೆ ಎಂಬ ವರದಿ ಹಿನ್ನಲೆಯಲ್ಲಿ ಎಚ್ಚೆತ್ತ ಸಂಚಾರ ವಿಭಾಗದ ಪೊಲೀಸರು(Traffic Police), ಈಗ ರಾಜಧಾನಿಯಲ್ಲಿ ‘ಕಳಪೆ ಹೆಲ್ಮೆಟ್‌ಗಳ’ನ್ನು ನಿಷೇಧಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.

ಮೊದಲ ಹಂತದಲ್ಲಿ ಕಳಪೆ ಹೆಲ್ಮೆಟ್‌ಗಳ ಧಾರಣೆಯಿಂದ ಉಂಟಾಗುವ ಅಪಾಯದ ಕುರಿತು 15 ದಿನ ಜನ-ಜಾಗೃತಿ ಅಭಿಯಾನ ಶುರು ಮಾಡಿರುವ ಪೊಲೀಸರು, ಈ ಅಭಿಯಾನದ ಬಳಿಕ ಕಳಪೆ ಹೆಲ್ಮೆಟ್‌ ಧರಿಸುವವರ ಮೇಲೆ ‘ದಂಡ’ ಪ್ರಯೋಗಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಐಎಸ್‌ಐ ಮಾರ್ಕ್(IS Mark) ಇಲ್ಲದ ಹೆಲ್ಮೆಟ್‌ ಮಾರಾಟಗಾರರ ವಿರುದ್ಧ ಅಳತೆ ಮತ್ತು ತೂಕದ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಚುರುಕು ಮುಟ್ಟಿಸಲು ಸಹ ಪೊಲೀಸರು ಯೋಜಿಸಿದ್ದಾರೆ.

Tap to resize

Latest Videos

Araga Jnanendra ಹೆಲ್ಮೆಟ್ ಹಾಕದೆ ಪೊಲೀಸರಿಗೆ ಸಿಕ್ಕಿಬಿದ್ದ ಅಸಾಮಿ, ಬಿಡಿಸಿಕೊಳ್ಳಲು ರಾತ್ರಿ 11 ಗಂಟೆಗೆ ಗೃಹ ಮಂತ್ರಿಗೆ ಕರೆ!

ಮೂರು ವರ್ಷಗಳ ಅವಧಿಯಲ್ಲಿ ನಗರ ವ್ಯಾಪ್ತಿ ಸಂಭವಿಸಿದ ಅಪಘಾತ ಪ್ರಕರಣಗಳನ್ನು ಸಂಚಾರ ವಿಭಾಗದ ಪೊಲೀಸರು ವಿಶ್ಲೇಷಿಸಿದಾಗ ಜನರ ಸಾವಿಗೆ ಕಳಪೆ ಹೆಲ್ಮೆಟ್‌ಗಳು ಸಹ ಪ್ರಮುಖ ಕಾರಣವಾಗಿವೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿತ್ತು. ಅಪಘಾತಗಳಲ್ಲಿ ಹೆಲ್ಮಟ್‌ ಧರಿಸಿದ್ದವರಲ್ಲೇ ಹೆಚ್ಚು ಸಾವು ಸಂಭವಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸವಾರರು ಕೇವಲ ನಿಯಮ ಪಾಲನೆಗಾಗಿ ಕಳಪೆ ಗುಣಮಟ್ಟದ ಹೆಲ್ಮಟ್‌ ಧರಿಸಿರುವುದು. ಅಲ್ಲದೆ ಚಿನ್‌ ಸ್ಟ್ರಾಪ್‌ ಹಾಕದಿರುವುದು ಹಾಗೂ ಹಾಫ್‌ ಹೆಲ್ಮಟ್‌ಗಳಿಂದ(Half Helmet) ತಲೆ ಮತ್ತು ಮಿದುಳಿನ ಬಳ್ಳಿ ಬುಡಕ್ಕೆ ಗಾಯಗಳಾಗಿ ಸಾವು ಸಂಭವಿಸಿದೆ ಎಂದು ಜಂಟಿ ಆಯುಕ್ತ(ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ವರದಿ ನೀಡಿದ್ದರು.

2019ರಲ್ಲಿ ಸ್ವಯಂ ಅಪಘಾತ ಸೇರಿದಂತೆ 810 ಮಾರಣಾಂತಿಕ ಅಪಘಾತಗಳು ಸಂಭವಿಸಿ 832 ಮಂದಿ ಮೃತಪಟ್ಟಿದ್ದರು. 2020ರಲ್ಲಿ 632 ಅಪಘಾತದಲ್ಲಿ 655 ಜನರು ಸಾವನ್ನಪ್ಪಿದ್ದರೆ(Death), 2021ರಲ್ಲಿ 618 ಅಪಘಾತಗಳಲ್ಲಿ 651 ಸಾವುಗಳು ವರದಿಯಾಗಿವೆ. ಹಾಗೆಯೇ ಹೆಲ್ಮಟ್‌ ಧರಿಸದೆ ಈ ಮೂರು ವರ್ಷಗಳ ಅವಧಿಯಲ್ಲಿ 325 ಮಂದಿ ಪ್ರಾಣ ತೆತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.ಜಾಗೃತಿ ಅಭಿಯಾನ:

ಈ ಸಾವು-ನೋವಿನ ಹಿನ್ನೆಲೆಯಲ್ಲಿ ಐಎಸ್‌ಐ ಮಾರ್ಕ್ ಇಲ್ಲದ ಕಳಪೆ ಗುಣಮಟ್ಟ ಹಾಗೂ ಹಾಫ್‌ ಹೆಲ್ಮೆಟ್‌ ಧರಿಸುವುದರಿಂದ ಉಂಟಾಗುವ ಅಪಾಯದ ಬಗ್ಗೆ ಜನರಿಗೆ ಸಂಚಾರ ಪೊಲೀಸರು ಅರಿವು ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಸಂಚಾರ ಠಾಣೆಗಳ ಎಲ್ಲ ಹಂತದ ಪೊಲೀಸರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪ್ರತಿ ದಿನ ಓರ್ವ ಸಿಬ್ಬಂದಿ ಕನಿಷ್ಠ 8 ಮಂದಿಗೆ ಹೆಲ್ಮೆಟ್‌ ಧಾರಣೆ ಹಾಗೂ ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಬೇಕು ಎಂದು ಮೌಖಿಕ ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಜಂಕ್ಷನ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ಪೊಲೀಸರು ಹೆಲ್ಮೆಟ್‌ ಮಹತ್ವದ ಬಗ್ಗೆ ‘ಪಾಠ’ ನಡೆದಿದೆ.

3 ವರ್ಷದಲ್ಲಿ ಹೆಲ್ಮೆಟ್‌ ಇಲ್ಲದೆ ಮೃತಪಟ್ಟವರ ವಿವರ: ವರ್ಷ ಸವಾರ ಹಿಂಬದಿ ಸವಾರ

2019 118 19
2020 72 31
2021 56 29
246 79

Mysuru : ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್

ಜನರಿಂದ ಅದೆಷ್ಟೇ ಟೀಕೆಗಳು ವ್ಯಕ್ತವಾದರೂ ಕಳಪೆ ಹೆಲ್ಮೆಟ್‌ ವಿರುದ್ಧ ಕ್ರಮ ಜರುಗಿಸುತ್ತೇವೆ. ಲಕ್ಷಾಂತರ ರು. ವ್ಯಯಿಸಿ ದ್ವಿಚಕ್ರ ಖರೀದಿಸುವ ಜನರು ಹೆಲ್ಮೆಟ್‌ ಬಗ್ಗೆ ಮಾತ್ರ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಜನರ ಪ್ರಾಣ ರಕ್ಷಣೆಗೆ ಐಎಸ್‌ಐ ಮಾರ್ಕ್‌ನ ಹೆಲ್ಮೆಟ್‌ ಧರಿಸುವಂತೆ ಪೊಲೀಸರು ಹೇಳುತ್ತಿದ್ದಾರೆ. ಅರ್ಥ ಮಾಡಿಕೊಳ್ಳಬೇಕು. ಸೆಕ್ಷನ್‌ 129 ಮೋಟಾರು ಕಾಯ್ದೆ ಅನ್ವಯ ಪ್ರತಿ ಸವಾರ ಮತ್ತು ಹಿಂಬದಿ ಸವಾರ ಗುಣಮಟ್ಟದ ಹೆಲ್ಮೆಟ್‌ ಧಾರಣೆ ಕಡ್ಡಾಯ ಅಂತ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ. 

ಕಳಪೆ ಹೆಲ್ಮೆಟ್‌ ಸಂಬಂಧ ಏಕಾಏಕಿ ದಂಡ ವಿಧಿಸಿದರೆ ನಾಗರಿಕರ ವಿರೋಧ ವ್ಯಕ್ತವಾಗುತ್ತದೆ ಎಂಬ ಅರಿವಿದೆ. ಹೀಗಾಗಿ ಈ ಬಗ್ಗೆ ಮೊದಲು ಜಾಗೃತಿ ಮೂಡಿಸುತ್ತೇವೆ. ಬಳಿಕ ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್‌ ಮಹತ್ವದ ಬಗ್ಗೆ ಸಾರ್ವಜನಿಕರು ಅರಿತುಕೊಳ್ಳಬೇಕು ಅಂತ ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ಹೇಳಿದ್ದಾರೆ. 
 

click me!