ತುಮಕೂರಿನ ಟೆಕ್ಕಿಯಿಂದ ಬೆಂಗಳೂರಲ್ಲಿ ಮದುವೆ ದಂಧೆ, ಮೂರನೇ ವಿವಾಹಕ್ಕೆ ರೆಡಿಯಾದವ ಗರ್ಭಿಣಿ ಪತ್ನಿಗೆ ಸಿಕ್ಕಿಬಿದ್ದ!

Published : Apr 13, 2026, 02:33 PM IST
Bengaluru Techie

ಸಾರಾಂಶ

ಜಿಗಣಿಯ ಖಾಸಗಿ ಕಂಪನಿ ಇಂಜಿನಿಯರ್ ರವಿ, ಮದುವೆ ಹೆಸರಿನಲ್ಲಿ ಹಲವು ಯುವತಿಯರಿಗೆ ವಂಚಿಸಿದ್ದಾನೆ. ಈಗಾಗಲೇ ಇಬ್ಬರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈತನ ಕೃತ್ಯ ಬಯಲಾಗಿದ್ದು, ಮೊದಲ ಪತ್ನಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರ ಜೊತೆಗೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್ ಅಮಾಯಕ ಹೆಣ್ಮಕ್ಕಳ ಬಾಳಲ್ಲಿ ಆಟ ಆಡೋ ಕಾಮುಕ ಟೆಕ್ಕಿ. ಹೆಣ್ಣು ಮಕ್ಕಳನ್ನ ಶರ್ಟ್ ಬದಲಿಸೋ ಹಾಗೆ ಬದಲಿಸೋ ಕಿಲಾಡಿ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್, ಆದ್ರೆ ಇವನಿಗೆ ಮದುವೆ ಆಗೋದೆ ಬಿಸಿನೆಸ್. ಇವನ ಚಪಲಕ್ಕೆ ಆತನ ಕುಟುಂಬವೇ ಸಾಥ್. ಕಾಮುಕ ಬಣ್ಣ ಬಯಲಾಗಿ ಹುಡುಗಿ ಮನೆಯವರಿಂದಲೇ ಬಿತ್ತು ಗೂಸಾ.

ಆನೇಕಲ್ ಉಪವಿಭಾಗದ ಜಿಗಣಿ ಪ್ರದೇಶದಲ್ಲಿ ವಿವಾಹದ ಹೆಸರಿನಲ್ಲಿ ಯುವತಿಯರ ಜೀವನದೊಂದಿಗೆ ಆಟವಾಡಿದ ವ್ಯಕ್ತಿಯ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ರವಿ ಎಂಬಾತನ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಬಹುವಿವಾಹ ಸಂಬಂಧಿತ ಪ್ರಕರಣ ದಾಖಲಾಗಿದೆ.

ಹಲವು ಯುವತಿಯರನ್ನು ಮೋಸಗೊಳಿಸಿದ ಕಾಮುಕ

ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನವನಾದ ರವಿ, ಜಿಗಣಿ ಸಮೀಪದ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ, ಮದುವೆಯನ್ನು ವ್ಯವಹಾರವನ್ನಾಗಿಸಿಕೊಂಡು ಹಲವು ಯುವತಿಯರನ್ನು ಮೋಸಗೊಳಿಸಿರುವ ಆರೋಪ ಈತನ ವಿರುದ್ಧ ಕೇಳಿಬಂದಿದೆ. ರವಿ ತನ್ನ ಕುಟುಂಬದವರ ಸಹಕಾರದೊಂದಿಗೆ ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸಂಬಂಧ ಬೆಳೆಸಿ, ಮದುವೆಯ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದನು. ಇದುವೇ ಆತಮ ಕಾಮುಕ ಕಾಯಕವಾಗಿತ್ತು.

2024ರ ಜನವರಿಯಲ್ಲಿ ರವಿ ಪಂಕಜ ಎಂಬ ಯುವತಿಯನ್ನು ಮದುವೆಯಾಗಿದ್ದನು. ಮದುವೆಯ ನಂತರವೂ ಅವನ ವರ್ತನೆ ಅನುಮಾನಾಸ್ಪದವಾಗಿತ್ತು. ಕಂಡ ಕಂಡ ಹೆಣ್ಮಕ್ಕಳ ಕೆಟ್ಟದಾಗಿ ಮಾತನಾಡುವುದು. ಅವನ್ನು ವರ್ಣನೆ ಮಾಡುವುದು, ವರದಕ್ಷಿಣೆ ತಗೊಂಡು ಬರುವಂತೆ ಸ್ನೇಹಿತರನ್ನು ಮನೆಗೆ ಕರೆಸುವಂತೆ ಒತ್ತಾಯಿಸುವುದು ಸೇರಿದಂತೆ ಅಸಹ್ಯ ವರ್ತನೆ ತೋರಿಸುತ್ತಿದ್ದನೆಂದು ಮೊದಲ ಪತ್ನಿ ಆರೋಪಿಸಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿದ್ದಾಗಲೇ, ರವಿ ಮತ್ತೊಮ್ಮೆ ಮದುವೆಗಾಗಿ ಹುಡುಕಾಟ ಆರಂಭಿಸಿದ್ದನು.

ಬೇರೊಬ್ಬಳ ಜತೆ ನಿಶ್ಚಿತಾರ್ಥ, ಮೊತ್ತೊಬ್ಬಳ ಜೊತೆಗೆ ಎರಡನೇ ಮದುವೆ

ತಾನು ಇನ್ನೂ ಮದುವೆಯಾಗಿಲ್ಲವೆಂದು ಸುಳ್ಳು ಹೇಳಿ, ತನ್ನ ಕುಟುಂಬದವರ ಜೊತೆಗೂಡಿ ವಿವಿಧ ಕಡೆಗಳಲ್ಲಿ ಮದುವೆ ಮಾತುಕತೆ ನಡೆಸುತ್ತಿದ್ದನು. 2024ರ ಅಕ್ಟೋಬರ್ ತಿಂಗಳಲ್ಲಿ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಈ ವಿಚಾರ ತಿಳಿದ ಮೊದಲ ಪತ್ನಿ, ಆ ಯುವತಿಯ ಕುಟುಂಬಕ್ಕೆ ಮಾಹಿತಿ ನೀಡಿದಳು. ಇದರಿಂದ ಆಕ್ರೋಶಗೊಂಡ ಆ ಕುಟುಂಬಸ್ಥರು ರವಿ ಮನೆಗೆ ಬಂದು ಅವನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಇದಾದ ನಂತರವೂ ತನ್ನ ಕೃತ್ಯಗಳನ್ನು ನಿಲ್ಲಿಸದ ರವಿ, 2025ರ ಡಿಸೆಂಬರ್‌ನಲ್ಲಿ ನೇಹಾ ಎಂಬ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಮದುವೆಯ ಸಮಯದಲ್ಲೂ ತಾನು ಅವಿವಾಹಿತನೆಂದು ಸುಳ್ಳು ಹೇಳಿದ್ದಾನೆ. ಎರಡನೇ ಮದುವೆಯ ವಿಚಾರ ತಿಳಿದ ಮೊದಲ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ರವಿ ಮನೆಗೆ ತೆರಳಿ ಪ್ರಶ್ನಿಸಿದಾಗ, ವಾಗ್ವಾದ ತೀವ್ರಗೊಂಡು ಅವನಿಗೆ ಧರ್ಮದೇಟು ನೀಡಿದ ಘಟನೆ ನಡೆದಿದೆ. ಬಳಿಕ ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಆರೋಪಿ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಹಿಳೆಯರನ್ನು ಮದುವೆಯ ಹೆಸರಿನಲ್ಲಿ ಮೋಸಗೊಳಿಸಿದ ಈ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

ವಿಜಯಪುರ: 10 ದಿನಗಳ ಪೆರೋಲ್ ರಜೆ ಪಡೆದು ಪರಾರಿಯಾಗಿದ್ದ ಆರೋಪಿ, 21 ವರ್ಷಗಳ ಬಳಿಕ ಸೆರೆ
ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ!