ಅತ್ತಿಬೆಲೆ, ಸರ್ಜಾಪುರ ಹಾಗೂ ಆನೇಕಲ್ ಠಾಣಾ ವ್ಯಾಪ್ತಿಯ ಮೂಲಕ ರಾಜ್ಯವನ್ನು ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಬೇಕು| ಶ್ವಾನದಳವನ್ನು ಬಳಸಿಕೊಂಡು ಅತ್ಯಂತ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು| ಯಾವುದೇ ಶಿಫಾರಸ್ಸಿಗೂ ಬಗ್ಗದೇ, ಕೆಲಸ ಮಾಡಬೇಕೆಂದು ತಾಕೀತು ಮಾಡಿದ ಎಸ್ಪಿ ರವಿ ಡಿ ಚನ್ನಣ್ಣನವರ್|
ಆನೇಕಲ್(ಸೆ.04): ತಾಲೂಕಿನ 3 ಠಾಣಾ ವ್ಯಾಪ್ತಿಗಳು ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿರಿಸಬೇಕು. ಸಣ್ಣ ಪ್ರಮಾಣದ ಸರಕು ದೊರೆತರೂ ಆಯಾ ಠಾಣಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಎಚ್ಚರಿಕೆ ನೀಡಿದ್ದಾರೆ.
ಹೆಬ್ಬಗೋಡಿ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಅವರು, ಅತ್ತಿಬೆಲೆ, ಸರ್ಜಾಪುರ ಹಾಗೂ ಆನೇಕಲ್ ಠಾಣಾ ವ್ಯಾಪ್ತಿಯ ಮೂಲಕ ರಾಜ್ಯವನ್ನು ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಬೇಕು. ಶ್ವಾನದಳವನ್ನು ಬಳಸಿಕೊಂಡು ಅತ್ಯಂತ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಶಿಫಾರಸ್ಸಿಗೂ ಬಗ್ಗದೇ, ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
undefined
ಲಾಂಗು, ಮಚ್ಚು ಝಳಪಿಸಿದ್ರೆ ಪಿಸ್ತೂಲು ಸದ್ದು: ರವಿ ಚನ್ನಣ್ಣನವರ್ ಖಡಕ್ ಎಚ್ಚರಿಕೆ
ಜಿಗಣಿ, ಹೆಬ್ಗಗೋಡಿ ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವಿದ್ದು, ರಾಜ್ಯ-ಹೊರರಾಜ್ಯಗಳ ಲಕ್ಷಾಂತರ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲೂ ಗಾಂಜಾ ಘಾಟು ಕಂಡುಬಂದಿದ್ದು, ಇದಕ್ಕೆ ಸಂಪೂರ್ಣ ನಿಯಂತ್ರಣ ಹೇರಬೇಕೆಂದು ಸೂಚಿಸಿದ್ದಾರೆ.