Bengaluru: ಟ್ರಾಫಿಕ್ ತಡೆಗಟ್ಟಲು ನಗರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ನಿರ್ಬಂಧ; ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೂ ನೋ ಎಂಟ್ರಿ?

Published : Sep 03, 2026, 10:20 AM IST
Bus

ಸಾರಾಂಶ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು, ರಾಜ್ಯ ಸರ್ಕಾರವು ಹಗಲು ಹೊತ್ತಿನಲ್ಲಿ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರೊಂದಿಗೆ, ನಗರದಲ್ಲಿ ಹೊಸ 'ಗ್ರೇಟರ್ ಬೆಂಗಳೂರು ಪಾರ್ಕಿಂಗ್ ನೀತಿ'ಯ ಕರಡನ್ನು ಪ್ರಕಟಿಸಿದ್ದು, ರಸ್ತೆಗಳನ್ನು ವರ್ಗೀಕರಿಸಿ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲು ಯೋಜಿಸಲಾಗಿದೆ.

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನಗರ ಪ್ರಮುಖ ಮೇಲ್ಸೇತುವೆ ಮೇಲೆ ಬೈಕ್ ಮತ್ತು ಆಟೋಗಳಿಗ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಇದರ ನಡುವೆಯ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಬೆಂಗಳೂರು ಟ್ರಾಫಿಕ್: ಖಾಸಗಿ ಬಸ್‌ಗಳಿಗೆ ಬೀಳಲಿದೆಯೇ ಬ್ರೇಕ್?

ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲು ಖಾಸಗಿ ಬಸ್ ಗಳ ಸಂಚಾರಕ್ಕೂ ನಿರ್ಬಂಧ ಹೇರಲು ಸರ್ಕಾರ ಪ್ಲ್ಯಾನ್ ಮಾಡುತ್ತಿದೆ. ನಗರದಲ್ಲಿ ಅದರಲ್ಲೂ ಹಗಲು ಸಮಯದಲ್ಲಿ ಆಲ್‌ ಇಂಡಿಯಾ ಪರ್ಮಿಟ್‌ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಬೆಳಗ್ಗೆ 8 ರಿಂದ ರಾತ್ರಿ 8ರವರೆಗೂ ಆಲ್‌ ಇಂಡಿಯಾ ಪರ್ಮಿಟ್‌ ಹೊಂದಿರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಚಿಂತನ ನಡೆಸಲಾಗಿದೆ.

ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್!

ಇದರಂತೆ ಬೆಳಗ್ಗೆ 08 ಗಂಟೆಯೊಳಗೆ ಖಾಸಗಿ ಬಸ್‌ಗಳು ಶೆಡ್‌ ಸೇರಿಬೇಕು ಎಂದು ಸೂಚಿಸುವ ನಿರೀಕ್ಷೆ ಇದೆ. ಏಕೆಂದರೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳು ಆಗಮಿಸುತ್ತವೆ. ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳು ಹಾದು ಹೋಗುವುದರಿಂದ ನಗರದೆಲ್ಲೆಡೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಯಶವಂತಪುರ, ನವರಂಗ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತಲೂ , ಹೊಸುರು ರಸ್ತೆ ಭಾಗದಲ್ಲಿ ಖಾಸಗಿ ಬಸ್ ಗಳಿಂದೇ ಅತಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಹಗಲಿನಲ್ಲಿ ಖಾಸಗಿ ಬಸ್‌ಗಳ ಸಂಚಾರ ಕಡಿಮೆ ಮಾಡಲು ಸಂಚಾರ ಪೊಲೀಸ್ ರಿಂದ ಹೊಸ ಚಿಂತನೆ ನಡೆಸಿದೆ. ಒಂದೊಮ್ಮೆ ಈ ನಿಯಮಗಳು ಜಾರಿಯಾದರೆ, ಬೆಳಗ್ಗೆ8 ಗಂಟೆಯೊಳಗೆ ಖಾಸಗಿ ಬಸ್‌ಗಳು ನಗರವನ್ನ ಪ್ರವೇಶ ಮಾಡಿರಬೇಕು. ರಾತ್ರಿ 8 ಗಂಟೆಯ ನಂತರವಷ್ಟೇ ಶೆಡ್ ಗಳಿಂದ ಹೊರಬರಬೇಕು. ಇಂತಹ ರೂಲ್ಸ್ ತರಲು ಗೃಹ ಇಲಾಖೆ ಚಿಂತನೆ ನಡೆಸಿದೆ.

ಗೃಹ ಸಚಿವರು ಹೇಳಿದ್ದೇನು?

ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಸಂಚಾರ ದಟ್ಟಣೆ ತಡೆಗಟ್ಟಲು ಫ್ಲೈಓವರ್‌ಗಳ ಮೇಲೆ ಕೆಲ ವಾಹನಗಳ ನಿರ್ಬಂಧ ಹೇರಲಾಗಿದೆ. ಜನರಿಗೆ ಅನುಕೂಲ ಆಗಲು ಜಾರಿ ಮಾಡಲಾಗುತ್ತಿದೆ. ಇದರಂತೆ ಖಾಸಗಿ ಬಸ್‌ಗಳ ನಿರ್ಬಂಧ ಸಂಬಂಧಿಸಿದಂತೆ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪಾರ್ಕಿಂಗ್ ನೀತಿ ಕರುಡು ನಿಯಮ

ಇನ್ನು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ಅವ್ಯವಸ್ಥಿತ ಪಾರ್ಕಿಂಗ್ ಸಮಸ್ಯೆಗೆ ಪರಿಹಾರಕ್ಕಾಗಿ ಗ್ರೇಟರ್ ಬೆಂಗಳೂರು ಪಾರ್ಕಿಂಗ್ ನೀತಿ ಕರುಡು ನಿಯಮ ಪ್ರಕಟಿಸಿದೆ. ಇದಕ್ಕೆ ಸೆಪ್ಟೆಂಬರ್ 10ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಗರದ ರಸ್ತೆಗಳನ್ನು ಎ, ಬಿ, ಸಿ ಎಂದು ಮೂರು ವರ್ಗಗಳಾಗಿ ವಿಂಗಡಣೆ. ಇದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗುತ್ತಿದೆ.

ಇದರಲ್ಲಿ ಆನ್‌ಸ್ಟ್ರೀಟ್ ಹಾಗೂ ಆಫ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಆಫ್‌ಸ್ಟಿಟ್ ಪಾರ್ಕಿಂಗ್‌ಗೆ ಮಾಸಿಕ ಪಾಸ್ ಸೌಲಭ್ಯ ನೀಡಲಾಗಿದೆ. 'ಎ' ವರ್ಗದ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಗಂಟೆಗೆ 40 ರೂ., ಕಾರಿಗೆ ₹80 ಶುಲ್ಕ. ಬಿ' ಮತ್ತು 'ಸಿ' ವರ್ಗದಲ್ಲಿ ಕ್ರಮವಾಗಿ 30 ರೂ,60 ರೂ. 20, 40 ರೂ. ಹಾಗೂ ಮೆಟ್ರೋ, ಪ್ರಮುಖ ಬಸ್ ನಿಲ್ದಾಣಗಳ ಸುತ್ತಮುತ್ತ ಪಾರ್ಕಿಂಗ್ ನಿರ್ಬಂಧ ವಿಧಿಸಲಾಗಿದೆ. ನಿಯಮಿತ ಆಟೋರಿಕ್ಷಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಇರುವುದಿಲ್ಲ.

PREV
Read more Articles on
click me!

Recommended Stories

Gokak: 5 kgಯಿಂದ ಆರಂಭ, ಇಂದು ದಿನಕ್ಕೆ 2 ಸಾವಿರ ಕೆಜಿ; 3ನೇ ಕ್ಲಾಸ್ ಓದಿರೋ ಕೋಟಿ ಒಡೆಯ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ನೌಕರ ಸಾವು; ಮ್ಯಾನೇಜರ್ ಕಿರುಕುಳವೇ ಕಾರಣವೆಂದ ಕುಟುಂಬ!