ಬೆಂಗಳೂರಿನಲ್ಲಿ ಫೆ.20ರಂದು ಕಾವೇರಿ ನೀರು ಪೂರೈಕೆ ವ್ಯತ್ಯಯ; ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ!

Published : Feb 18, 2025, 04:19 PM ISTUpdated : Feb 18, 2025, 05:32 PM IST
ಬೆಂಗಳೂರಿನಲ್ಲಿ ಫೆ.20ರಂದು ಕಾವೇರಿ ನೀರು ಪೂರೈಕೆ ವ್ಯತ್ಯಯ; ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ!

ಸಾರಾಂಶ

ಫೆಬ್ರವರಿ 20 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರತ್ತಹಳ್ಳಿ ಸಮೀಪದ ಕಾಮಗಾರಿಯಿಂದಾಗಿ ಈ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನೀರನ್ನು ಮುಂಚಿತವಾಗಿ ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಸೂಚಿಸಿದೆ.

ಬೆಂಗಳೂರು (ಫೆ.18) : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ  ಕಾವೇರಿ 4ನೇ ಹಂತ 2ನೇ ಘಟ್ಟದ ಕಾನಿಅ(ಪೂರ್ವ )-1 ರ ವ್ಯಾಪ್ತಿಗೆ ಒಳಪಡುವ ಮಾರತ್ತಹಳ್ಳಿ, ಜೀವಿಕಾ ಆಸ್ಪತ್ರೆ ಸಮೀಪ 800 ಮಿ.ಮೀ. ವ್ಯಾಸದ ಹೂಡಿ ಜಿ.ಎಲ್.ಆರ್ ಒಳ ಹರಿವು ಮಾರ್ಗವನ್ನು ಸ್ಥಗಿತಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಫೆ.20ರ ಬೆಳಿಗ್ಗೆ 09ರಿಂದ ರಾತ್ರಿ 09ರವರೆಗೆ  ಸುಮಾರು 12  ಗಂಟೆಗಳ ಕಾಲ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರುಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿರುವ ಪ್ರದೇಶಗಳು: ಮಾರತ್ತಹಳ್ಳಿ, ದೊಡ್ಡನ್ನೆಕುಂದಿ, ಮುನ್ನೆಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ , ಬೆಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಭೀಮಾನಗರ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮ ಆರಂಭ: ಈ 6 ಚಟುವಟಿಕೆಗೆ ಕಾವೇರಿ ನೀರು ಬಳಕೆ ನಿಷೇಧಿಸಿದ ಜಲಮಂಡಳಿ!

ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್