ಮಗಳು ಲವ್‌ ಮಾಡಿ ಓಡಿಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ

By Sathish Kumar KH  |  First Published Oct 22, 2023, 2:53 PM IST

ಮಗಳು ಬೇರೊಬ್ಬನನ್ನು ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದರಿಂದ ಮನನೊಂದು ತಂದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಬೆಂಗಳೂರು/ಆನೇಕಲ್‌ (ಅ.22): ಪ್ರೀತಿಯಿಂದ ಸಾಕಿ, ಸಲುಹಿ ಬೆಳೆಸಿದ್ದ ಮಗಳು ಬೇರೊಬ್ಬನನ್ನು ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದರಿಂದ ಮನನೊಂದು ತಂದೆ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ಆನೇಕಲ್‌ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎನ್ನುವುದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಹೀಗಾಗಿ, ಮಕ್ಕಳನ್ನು ಹರೆಯದ ವಯಸ್ಸಿನಲ್ಲಿ ಸ್ನೇಹಿತರಂತೆ ಕಂಡು ಮಕ್ಕಳ ಮನಸ್ಸಿನಲ್ಲಿ ಇರುವುದನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಮಕ್ಕಳ ಮೇಲೆ ಎಷ್ಟೇ ಅತಿಯಾದ ಪ್ರೀತಿಯೊದ್ದರೂ, ಪ್ರೀತಿ- ಪ್ರೇಮದ ವಿಚಾರವನ್ನು ಮನೆಯ ಹಿರಿಯರ ಬಳಿ ಮುಚ್ಚಿಟ್ಟು ಓಡಿ ಹೋಗುವ ಘಟನೆಗಳು ನಡೆಯುತ್ತವೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ ತಾಲೂಕಿನ ನಾರಾಯಣಪುರದಲ್ಲಿಯೂ ನಡೆದಿದೆ.

Tap to resize

Latest Videos

undefined

ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್‌ ಬರ್ಬರ ಹತ್ಯೆ

ಮಗಳು ಪ್ರೀತಿ ಮಾಡಿದವನ ಜೊತೆ ಪರಾರಿಯಾಗಿದ್ದಕ್ಕೆ ತಂದೆ ನೇಣಿಗೆ ಶರಣಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರದಲ್ಲಿ ಘಟನೆ ನಡೆದಿದೆ. ನಾರಾಯಣಪುರ ಗ್ರಾಮದ ನಿವಾಸಿ ಗೋಪಾಲ್ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಮಗ್ಗದ ಕೆಲಸ ಮಾಡಿಕೊಂಡಿದ್ದ ಗೋಪಾಲ್‌ ಕಳೆದೆರಡು ದಿನಗಳಿಂದ ಮಗಳು ಪ್ರೀತಿಸಿದವನ ಜೊತೆಗೆಓಡಿ ಹೋಗಿದ್ದ ವಿಚಾರಕ್ಕೆ ಮನನೊಂದಿದ್ದ ತಂದೆ, ಇದೇ ವಿಚಾರಕ್ಕೆ ಮನೆಯಲ್ಲಿನ ಸದಸ್ಯರೊಂದಿಗೂ ಗಲಾಟೆ ಮಾಡಿಕೊಂಡು ಮನಸ್ತಾಪ ಮಾಡಿಕೊಂಡಿದ್ದರು.

ಮನೆಯಲ್ಲಿ ನೆಮ್ಮದಿ ಇಲ್ಲವೆಂದು ಬೆಳಗ್ಗೆ ಎದ್ದವರೇ ಮನೆಯಿಂದ ಹೊರಗೆ ಹೋಗಿದ್ದ ಗೋಪಾಲ್‌ ಆನೇಕಲ್‌ ಕೆರೆಯ ಆವರಣದಲ್ಲಿದ್ದ ಮರಕ್ಕೆ ಹಗ್ಗವನ್ನು ಕಟ್ಟಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇನ್ನು ಬೆಳಗ್ಗೆ ವಾಯು ವಿಹಾರಕ್ಕೆಂದು ಜನರು ತೆರಳಿದ್ದ ವೇಳೆ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ದೃಶ್ಯವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದಾಗ ಜೇಬಿನಲ್ಲಿದ್ದ ಪರ್ಸ್‌ ಹಾಗೂ ಇತರೆ ದಾಖಲೆಗಳ ಆಧಾರದಲ್ಲಿ ಗೋಪಾಲ್‌ ಎಂಬುದನ್ನು ಪತ್ತೆಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯರನ್ನು ಡೋಂಗಿ ಸಮಾಜವಾದಿ, ಫುಲ್‌ಟೈಂ ಮೀರ್‌ಸಾದಿಕ್‌, ಹೆಗ್ಗಣಕ್ಕೆ ಹೋಲಿಸಿದ ಎಚ್‌ಡಿಕೆ!

ನಂತರ, ಅವರ ಮನೆಯವರಿಗೆ ಮಾಹಿತಿ ನೀಡಿದ್ದು, ಅವರ ಪತ್ನಿ ಬಂದು ಮೃತದೇಹ ತನ್ನ ಗಂಡನದ್ದೆಂದು ಪತ್ತೆಹಚ್ಚಿದ್ದಾರೆ. ನಂತರ, ಪೊಲೀಸರು ಮೃತ ದೇಹವನ್ನು ಮರದಿಂದ ಕೆಳಕ್ಕೆ ಇಳಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಆನೇಕಲ್ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಪತ್ನಿಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

click me!