ಕುಸಿದ ಬೆಂಗಳೂರಿನ ಹೆದ್ದಾರಿಯ ಫ್ಲೈ ಓವರ್

By Web DeskFirst Published Jul 13, 2019, 8:00 AM IST
Highlights

ಬೆಂಗಳೂರಿನ ಹೆದ್ದಾರಿಯಲ್ಲಿರುವ ಫ್ಲೈ ಓವರ್ ಕುಸಿದಿದೆ. ಇದರಿಂದ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. 

ಬೆಂಗಳೂರು [ಜು.13]:  ಕೇವಲ ಒಂದೂವರೆ ವರ್ಷದ ಹಿಂದೆಯಷ್ಟೇ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಬಾಶೆಟ್ಟಿ  ಹಳ್ಳಿ ಬಳಿ ರೈಲ್ವೇ ಹಳಿಯ ಮೇಲೆ ನಿರ್ಮಾಣವಾಗಿದ್ದ ಬೃಹತ್ ಮೇಲ್ಸೇತುವೆ ಶುಕ್ರವಾರ ದಿಢೀರ್ ಕುಸಿದಿದ್ದು, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ. 

ಕಳಪೆ ಕಾಮಗಾರಿಯೇ ಘಟನೆಗೆ ಕಾರಣ ಎನ್ನಲಾಗಿದೆ. ಬೃಹತ್ ಮೇಲ್ಸೇತುವೆಯ ಗೋಡೆ ಶುಕ್ರವಾರ ಮಧ್ಯಾಹ್ನದಿಂದಲೇ  ಕುಸಿಯಲಾ ರಂಭಿಸಿದ್ದು, ಕಾಂಕ್ರೀಟ್ ಸ್ಲಾಬ್‌ಗಳು ಕಿತ್ತು ಬಂದು ಮಣ್ಣು ಕುಸಿದಿದೆ. ನಿರಂತರವಾಗಿ ಸೇತುವೆಯಿಂದ ಮಣ್ಣು ಕುಸಿಯುತ್ತಿದ್ದು, ಸೇತುವೆ ಮೇಲಿನ ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ. 

ಈ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಉಂಟಾಗಿದೆ. ಸೇತುವೆ ಪ್ರದೇಶದಲ್ಲಿ ಪೊಲೀಸ್ ಕಣ್ಗಾವಲು ವ್ಯ ವಸ್ಥೆ ಮಾಡಲಾಗಿದ್ದು, ಕುಸಿತಕ್ಕೆ ಒಳಗಾಗಿರುವ ಭಾಗದಲ್ಲಿ ಯಾರೂ ಹೋಗದಂತೆ ಎಚ್ಚರ ವಹಿಸಲಾಗಿದೆ.

click me!