ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯೆಂದು ಅಪ್ರಾಪ್ತೆ ಮೇಲೆ ಹಲ್ಲೆ: ಕೈ ಮುಖಂಡನ ಸೆರೆ!

Kannadaprabha News   | Kannada Prabha
Published : Apr 29, 2026, 08:31 AM IST
Congress

ಸಾರಾಂಶ

ಬೆಂಗಳೂರಿನ ಕಾಂಗ್ರೆಸ್ ಮುಖಂಡ ಆನಂದ್ ಪಿ. ಎಂಬುವವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ವ್ಯಕ್ತಿಯೊಬ್ಬರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಅವರ ಅಪ್ರಾಪ್ತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ದೂರುದಾರರ ಮೇಲೆ ಹಲ್ಲೆ ನಡೆಸಿ ಆಸ್ತಿ ಕಬಳಿಸಿದ ಗಂಭೀರ ಆರೋಪಗಳು ಆತನ ಮೇಲಿದೆ.

ಬೆಂಗಳೂರು: ವ್ಯಕ್ತಿಯೊಬ್ಬರ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಆತನ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಗರದ ಕಾಂಗ್ರೆಸ್‌ ಮುಖಂಡನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಳಗಾಳದ ನಿವಾಸಿಯಾದ 40 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿ ಆನಂದ್‌ ಪಿ. (ಆನಂದ್ ನಾಯ್ಡು) ಎಂಬುವರನ್ನು ಬಂಧಿಸಲಾಗಿದೆ. ದೂರುದಾರರ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ದೂರುದಾರರು 2008ರಲ್ಲಿ ಪರಿಚಯವಾದ ಯುವತಿಯೊಬ್ಬರನ್ನು ಮದುವೆ ಆಗಿದ್ದರು. ಆದರೆ, ಆಕೆ ತನಗೆ ಈಗಾಗಲೇ ಮದುವೆಯಾಗಿ ಒಂದು ಹೆಣ್ಣು ಮಗು ಇರುವುದನ್ನು ಮುಚ್ಚಿಟ್ಟು ನನ್ನನ್ನು ವಿವಾಹವಾಗಿ ವಂಚಿಸಿದ್ದರು. ಆದರೂ ತಾನು ಆಕೆ ಜತೆ ಸಂಸಾರ ಮಾಡುತ್ತಿದ್ದೆ. ಈ ಮಧ್ಯೆ ತಮಗೆ ಇಬ್ಬರು ಮಕ್ಕಳು ಜನಿಸಿದ್ದರು. ನಂತರ ತಂದೆಯ ವ್ಯಾಪಾರ ನೋಡಿಕೊಳ್ಳಲು ಆರಂಭಿಸಿದ್ದು, ಮಾಳಗಾಳದಲ್ಲಿ ನಿವೇಶನ ಖರೀದಿಸಿ ಹೊಸ ಮನೆ ಕಟ್ಟಿದ್ದೆ. ಆದರೆ, ಪತ್ನಿ 2016ರಲ್ಲಿ ಜಿಮ್‌ವೊಂದಕ್ಕೆ ಸೇರಿಕೊಂಡಿದ್ದರು. ನಂತರ ಜಿಮ್‌ ಟ್ರೈನರ್‌ ಪ್ರಶಾಂತ್ ಜತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ 2018ರಲ್ಲಿ ಮತ್ತೊಂದು ಜಿಮ್‌ಗೆ ಸೇರಿಕೊಂಡು ಉಮೇಶ್‌ ಜತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ ಸುಂಕದಕಟ್ಟೆ ಶಿವು ಎಂಬಾತನ ಜತೆಯೂ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ಪ್ರಶ್ನಿಸಿದಾಗ ತನ್ನ ಹತ್ಯೆಗೆ ಸಂಚು ರೂಪಿಸಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ನನ್ನ ಆಸ್ತಿ ಕಬಳಿಕೆ ಆಗಿದೆ:

2022ರಲ್ಲಿ ಹಣಕಾಸಿನ ವಿಚಾರವಾಗಿ ಆನಂದ್‌ ಎಂಬಾತನ ಪರಿಚಯವಾಗಿತ್ತು. ನಂತರ ಆತ ನನ್ನ ಪತ್ನಿಯನ್ನು ಪರಿಚಯಿಸಿಕೊಂಡು ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೇವೆ ಎಂದು ತನಗೂ ಹಾಗೂ ನನ್ನ ಮಕ್ಕಳ ಮೇಲೆ ಇಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಅಲ್ಲದೆ, ಆನಂದ್‌ ತನ್ನ ಅಪ್ರಾಪ್ತ ಪುತ್ರಿ ಜತೆ ಅನುಚಿತವಾಗಿ ವರ್ತಿಸಿದ್ದ. ಅದರೊಂದಿಗೆ ತನಗೆ ಪ್ರಾಣ ಬೆದರಿಕೆ ಹಾಕಿ, ನನ್ನಿಂದ ಆಸ್ತಿಯ ಹಕ್ಕು ಬಿಡುಗಡೆ ಪತ್ರ ಮತ್ತು ದಾನಪತ್ರವನ್ನು ಬರೆಸಿಕೊಂಡಿದ್ದಾರೆ. ನಂತರ ತನ್ನನ್ನು ಮನೆಯಿಂದ ಹೊರಗಡೆ ಹಾಕಿದರು. ಆ ಬಳಿಕವೂ ತನ್ನ ಮಕ್ಕಳ ನೋಡಲು ಬರುತ್ತಿದ್ದಾಗ, ಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡರು. ಹೀಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಆನಂದ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿಯ ವಿಚಾರಣೆ ನಡೆಸಿರುವ ಪೊಲೀಸರು: 

ದೂರಿನ ಹಿನ್ನೆಲೆಯಲ್ಲಿ ಆನಂದ್‌ ಸೇರಿ ಮಹಿಳೆಯ ವಿರುದ್ಧ ಪೋಕ್ಸೋ ಹಾಗೂ ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ದೂರುದಾರರ ಪತ್ನಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆನಂದ್ ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಂದು ತಿಳಿದುಬಂದಿದೆ.

PREV
Read more Articles on
click me!

Recommended Stories

Shivamogga: 2ನೇ ಪತ್ನಿಯ ಆತ್ಮ*ಹತ್ಯೆ: ಸೊರಬದ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಬಂಧನ
ಧಾರವಾಡದ ಪೆಟ್ರೋಲ್ ಬಂಕ್‌ಗಳ ಮುಂದೆ ಮತ್ತೆ ನೋ ಸ್ಟಾಕ್ ಬೋರ್ಡ್; ಕೃತಕ ಅಭಾವ ಸೃಷ್ಟಿಯ ಆರೋಪ