ವೇಗವಾಗಿ ಬರುತ್ತಿದ್ದ ಆಂಬುಲೆನ್ಸ್‌ಗೆ ದಾರಿ ಬಿಡಲು ಹೋಗಿ ಕಾರು ಪಲ್ಟಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ನಡೆದಿದೆ.
ಬೆಂಗಳೂರು (ಆ.19): ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಉದ್ದನೆಯ ಫ್ಲೈ ಓವರ್ ಎಂಬ ಖ್ಯಾತಿಯನ್ನು ಪಡೆದಿರುವಎಲೆಕ್ಟ್ರಾನಿಕ್ ಸಿಟಿ ಫ್ಲೈ ಒವರ್‌ನಲ್ಲಿ ಹಿಂದೆ ವೇಗವಾಗಿ ಬರುತ್ತಿದ್ದ ಆಂಬುಲೆನ್ಸ್‌ಗೆ ದಾರಿ ಬಿಡಲು ಹೋಗಿ ಕಾರು ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿರುವ ದುರ್ಘಟನೆ ಸಂಭವಿಸಿದೆ.
ಹೌದು, ಬೆಂಗಳೂರಿನ ಅತ್ಯಂತ ಉದ್ದನೆಯ ಪ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದೆ. ಆಂಬ್ಯುಲೆನ್ಸ್ ಗೆ ದಾರಿ ಬಿಡಲು ಹೋಗಿ ಕಾರು ಪಲ್ಟಿಯಾಗಿದೆ. ಈ ಕುರಿತ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ವಿಡಿಯೋ ನೋಡಿದರೆ ಎಂಥವರೂ ಬೆಚ್ಚಿ ಬೀಳ್ತಾರೆ. ಸ್ವಲ್ಪ ಯಾಮಾರಿದ್ದರೂ ಕಾರು ಪ್ಲೈಓವರ್ ಮೇಲಿಂದ ಕೆಳಗೆ ಬಿದ್ದು, ಕಾರಿನಲ್ಲಿದ್ದವರ ಪ್ರಾಣವೇ ಹೋಗುತ್ತಿತ್ತು. ಸೋಮವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನ ಪಕ್ಕದಲ್ಲಿ ಹೋಗುತ್ತಿದ್ದ ಇ-ಸೈಕಲ್‌ಗೂ ಡಿಕ್ಕಿ ಹೊಡೆದಿದೆ. ಆ್ಯಂಬುಲೆನ್ಸ್ ಪಕ್ಕದಲ್ಲಿದ್ದ ಇನ್ನೊಂದು ಕಾರಿಗೂ ಡಿಕ್ಕಿಯಾಗಿದೆ. ಆದರೆ, ಯಾರಿಗೂ ಏನೂ ಆಗಿಲ್ಲ. ಮುಂದೆ ಹೋಗುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಜೈಲಿನಲ್ಲಿದ್ದರೂ ನಟಿ ಪವಿತ್ರಾ ಗೌಡ ಧಿಮಾಕು ಕಮ್ಮಿಯಾಗಿಲ್ಲ!
ಇನ್ನು ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಬೇರೊಂದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿ ಕೆಲವರು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದರೆ, ಮತ್ತೆ ಕೆಲವರು ದೃಶ್ಯಾವಳಿಗಳನ್ನು ವಾಹನ ಸವಾರರು ನೋಡುತ್ತಾ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ಲೈಓವರ್ ಮೇಲೆ ನಡೆದ ಘಟನೆಯ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ಸಂಚಾರಿ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಬ್ಯಾರಿಕೆಡ್ ಅಳವಡಿಸಿ ಉಳಿದ ರಸ್ತೆಯ ಭಾಗದಲ್ಲಿ ವಾಹನಗಳು ಸುಗಮವಾಗಿ ಸಂಚಾರ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.