ರಾಯಲ್ ಲೇಕ್ ಫ್ರೆಂಟ್ ರೆಸಿಡೆನ್ಸಿಗೆ ಡಿಮ್ಯಾಂಡ್ ನೋಟಿಸ್ ಕೊಟ್ಟ ಬೆಂಗಳೂರು ಜಲಮಂಡಳಿ; ಹಣ ಕಟ್ಟಿದರಷ್ಟೇ ನೀರು!

By Sathish Kumar KHFirst Published Apr 15, 2024, 7:50 PM IST
Highlights

ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿದ್ದು, ಇಟಿಪಿ ಶುಲ್ಕ ಪಾವತಿಸಿಲ್ಲಿ ಮಾತ್ರ ಕಾವೇರಿ ನೀರು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಬೆಂಗಳೂರು (ಏ.15): ಬೊಮ್ಮನಹಳ್ಳಿ ವಲಯದ ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಲಮಂಡಳಿ ಎಲ್ಲಾ ರೀತಿಯ ಸಹಾಯ ಮಾಡಲಿದೆ. ನಿವಾಸಿಗಳು ತಮ್ಮ ಪಾಲಿನ ಇ.ಟಿ.ಪಿ ಶುಲ್ಕವನ್ನು ಪಾವತಿಸಿದಲ್ಲಿ ಕಾವೇರಿ ನೀರು ಸರಬರಾಜು ಮಾಡಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಭರವಸೆ ನೀಡಿದರು. 

ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸೋಮವಾರ ಸಭೆಯನ್ನು ನಡೆಸಿದ ಮಾತನಾಡಿದ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳಿಗೆ ಜಲಮಂಡಳಿ ಡಿಮ್ಯಾಂಡ್‌ ನೋಟೀಸ್‌ ನೀಡಿದೆ. ಆದರೆ, ಇದು ಜಲಮಂಡಳಿಯ ಕಾರ್ಯ ವೈಖರಿಯಾಗಿದೆ. ರಾಯಲ್‌ ಲೇಕ್‌ ಫ್ರಂಟ್‌ ಲೇಔಟ್‌ ನಿರ್ಮಾಣ ಸಂಧರ್ಭದಲ್ಲೇ ಅಗತ್ಯ ಪೈಪ್‌ಲೈನ್‌ ಅಳವಡಿಕೆಯನ್ನ ಆಯಾ ಲೇಔಟ್‌ ನಿರ್ಮಾತೃಗಳು ಮಾಡಬೇಕಾಗಿತ್ತು. ಆದರೆ, ಪೈಪ್‌ಲೈನ್‌ ವ್ಯವಸ್ಥೆ ಅಲ್ಲಿ ಅಳವಡಿಕೆಯಾಗಿಲ್ಲ. ಈ ಹಿನ್ನಲೆಯಲ್ಲಿ ಈ ಮೂಲಭೂತ ಸೌಕರ್ಯವನ್ನು ಅಳವಡಿಸಲು ಜಲಮಂಡಳಿಗೆ ತಗಲುವ ವೆಚ್ವವನ್ನು ಡಿಮ್ಯಾಂಡ್‌ ನೋಟೀಸ್‌ ಮೂಲಕ ಕೇಳಲಾಗಿದೆ. ಇದನ್ನು ಭರಿಸಿದಲ್ಲಿ ಜಲಮಂಡಳಿ ಅಗತ್ಯ ಕಾಮಗಾರಿಯನ್ನು ನಡೆಸಿ ಕಾವೇರಿ ಕುಡಿಯುವ ನೀರನ್ನು ನಿವಾಸಿಗಳಿಗೆ ಸರಬರಾಜು ಮಾಡಲಾಗುವುದು ಎಂದು ವಿವರಿಸಿದರು. 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2.90 ಕೋಟಿ ರೂ. ದಾಖಲೆಗಳಿಲ್ಲದ ಹಣ ಜಪ್ತಿ

ಇತರೆ 5 ಲೇಔಟ್‌ಗಳ ಬಗ್ಗೆ ವಿವರಣೆ:
ಜೊತೆಗೆ, ರಾಯಲ್‌ ಲೇಕ್‌ ಫ್ರಂಟ್‌ ನಿವಾಸಿಗಳು ತಮ್ಮ ಮನವಿ ಪತ್ರದಲ್ಲಿ ನಮೂದಿಸಿದ್ದ ಇನ್ನಿತರೆ 5 ಲೇಔಟ್‌ ಗಳ ಬಗ್ಗೆಯೂ ವಿವರಣೆ ನೀಡಿದರು. ಬಿಸಿಎಂಸಿ ಲೇಔಟ್‌, ರಘುವನಹಳ್ಳೀ, ಬಾಲಾಜಿ ಲೇಔಟ್‌ ವಜ್ರಹಳ್ಳೀ, ಬಿಸಿಸಿಹೆಚ್‌ ಲೇಔಟ್‌ ವಜ್ರಹಳ್ಳಿ 110 ಗ್ರಾಮಗಳ ವ್ಯಾಪ್ತಿಯಲ್ಲಿವೆ. ಇವುಗಳು ಹೊಸದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿವೆ. ಸರಕಾರದ ನಿರ್ಧಾರದಂತೆ ಇವುಗಳಿಗೆ ಸಂಪರ್ಕ ನೀಡಲಾಗಿದೆ. ಕಾವೇರಿ 5 ನೇ ಹಂತದ ಕಾಮಗಾರಿ ಮುಗಿದ ನಂತರ ಪ್ರೊರೇಟಾ ಛಾರ್ಜಸ್‌ ಗಳನ್ನು ಈ ಸಂಪರ್ಕಗಳಿಂದ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಇನ್ನು ದೊಡ್ಡಕಲ್ಲಸಂದ್ರದಲ್ಲಿರುವ ಬಿಡಿಎ ಇಂಪ್ಲಾಯೀಸ್‌ ಲೇಔಟ್‌ ಮತ್ತು ನಾರಾಯಣನಗರ ಬ್ಲಾಕ್‌ 1 ಲೇಔಟ್‌ ನಿಂದ ಈಗಾಗಲೇ ಇಟಿಪಿ ಚಾರ್ಜಸ್ಸನ್ನು ಪಡೆದುಕೊಂಡು ಸಂಪರ್ಕ ನೀಡಲಾಗಿದೆ. ಬಿಡಿಎ ನಿರ್ಮಾಣ ಮಾಡುವ ಲೇಔಟ್‌ಗೂ ಸಂಪರ್ಕ ನೀಡಲು ಜಲಮಂಡಳಿ ಶುಲ್ಕವನ್ನು ವಿಧಿಸುತ್ತದೆ. ಯಾವುದೇ ಲೇಔಟ್‌ ಗಳಿಗೂ ವಿನಾಯಿತಿ ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಬ್ರಿಟೀಷರ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಿದ್ದ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಶ್ಚೇತನ

ವೈಯಕ್ತಿಕವಾಗಿ ಡಿಮ್ಯಾಂಡ್‌ ನೋಟೀಸ್‌: ಲೇಔಟ್‌ ನ ನಿವಾಸಿಗಳಲ್ಲಿ ಒಗ್ಗಟ್ಟಿನ ಕೊರೆತೆಯಿಂದ ಜಲಮಂಡಳಿಯ ಡಿಮ್ಯಾಂಡ್‌ ಶುಲ್ಕವವನ್ನ ಒಟ್ಟಾರೆಯಾಗಿ ಕಟ್ಟುವುದು ಸಾಧ್ಯವಿಲ್ಲ. ಈ ಸಮಸ್ಯೆಗೆ ಪರಿಹಾರ ನೀಡುವಂತೆ ಪದಾಧಿಕಾರಿಗಳು ಅಧ್ಯಕ್ಷರನ್ನು ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಲಮಂಡಳಿ ಅಧ್ಯಕ್ಷರು, ನಿವಾಸಿಗಳಿಗೆ ಜಲಮಂಡಳಿಯ ವತಿಯಿಂದ ವೈಯಕ್ತಿಕವಾಗಿ ಡಿಮ್ಯಾಂಡ್‌ ನೊಟೀಸ್‌ ನೀಡಲಾಗುವುದು. ಈ ನೋಟೀಸ್‌ನ ಅನುಸಾರವಾಗಿ ಶೇಕಡಾ 60 ರಷ್ಟು ನಿವಾಸಿಗಳು ಶುಲ್ಕ ತುಂಬಿದಲ್ಲಿ ಅಗತ್ಯ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

click me!