ಆತ ರೈಲ್ವೆ ನಿಲ್ದಾಣದ ಎದುರು ಭಿಕ್ಷೆ ಬೇಡುತ್ತಿದ್ದ. ಅನುಮಾನಾಸ್ಪದವಾಗಿ ಸಾವಿಗೀಡಾದ. ಪೊಲೀಸರು ಪರಿಶೀಲನೆ ನಡೆಸಿದಾಗ ನೋಟಿನ ಕಂತೆ ಕಂತೆಗಳೆ ಪತ್ತೆಯಾಗಿವೆ.
ಬೆಂಗಳೂರು[ಜ.01] ಬೆಂಗಳೂರಿನಲ್ಲಿ ಭಿಕ್ಷುಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಕಂತೆ ಕಂತೆ ನೋಟು ಪತ್ತೆಯಾಗಿದೆ. ಕಂಟೋನ್ ಮೆಂಟ್ ರೈಲ್ವೇ ಸ್ಟೇಷನ್ ಮುಂಭಾಗದ ಖಾಲಿ ಜಾಗದಲ್ಲಿ ಭಿಕ್ಷುಕ ಶರೀಫ್ ಸಾಬ್ (75) ಸಾವನ್ನಪ್ಪಿದ್ದಾರೆ.
ಭಿಕ್ಷಾಟನೆಗಿಳಿದ ಹೈಟೆಕ್ ಯುವತಿಯರ ಗ್ಯಾಂಗ್ ಹಿಂದೆ ಕಾಣದ ಕೈಗಳು?
ಬೆಳ್ಳಗೆ 10ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಕಳೆದ 15ವರ್ಷದಿಂದ ರೈಲ್ವೇ ನಿಲ್ದಾಣದ ಸುತ್ತಮುತ್ತ ಶರೀಫ್ ಭಿಕ್ಷೆ ಬೇಡುತ್ತಿದ್ದರು.
ಗ್ಯಾಂಗ್ರೀನ್ ನಿಂದ ಬಳಲುತ್ತಿದ್ದ ಶರೀಫ್ ಕೃತಕ ಕಾಲು ಹಾಕಿಸಿಕೊಂಡಿದ್ದರು. ಪರಿಶೀಲನೆ ವೇಳೆ ಕೃತಕ ಪ್ಲಾಸ್ಟಿಕ್ ಕವರ್ ಒಂದರಲ್ಲಿ ಬರೋಬ್ಬರಿ 96 ಸಾವಿರ ರೂ. ಪತ್ತೆಯಾಗಿದೆ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.