2 ಗಂಟೆಯಲ್ಲಿ 2 ಸಾವಿರ ಜನರ ರಕ್ಷಣೆ : ದೇವರ ರೂಪದಲ್ಲಿ ಬಂದ ಅಧಿಕಾರಿ

By Web DeskFirst Published Aug 26, 2019, 3:58 PM IST
Highlights

ನೆರೆ ಬಂದ ಸಮಯದಲ್ಲಿ ಕೆಲವರು ಕೆಚ್ಚೆದೆಯಿಂದ ಹೋರಾಡಿ ಹಲವು ಜೀವಗಳನ್ನು ಕಾಪಾಡಿದ್ದಾರೆ. ಅಂತಹವರ ಸಾಲಿನಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡಾ ಇದ್ದಾರೆ. ಹೌದು! ಅವರೇ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಲಗೋಡ ಪಿಎಸೈ ಹನಮಂತ ನೇರಳೆ. 
 

ಭೀಮಶಿ ಭರಮಣ್ಣವರ

ಬೆಳಗಾವಿ [ಆ.26]: ಪ್ರವಾಹ ಎಲ್ಲವನ್ನು ನಾಶ ಮಾಡಿದೆ, ಮುನ್ಸೂಚನೆ ಇಲ್ಲದೇ ಬಂದ ನೆರೆಗೆ ಜನರು ನಲುಗಿ ಹೋಗಿದ್ದಾರೆ. ಆದರೆ, ನೆರೆ ಬಂದ ಸಮಯದಲ್ಲಿ ಕೆಲವರು ಕೆಚ್ಚೆದೆಯಿಂದ ಹೋರಾಡಿ ಹಲವು ಜೀವಗಳನ್ನು ಕಾಪಾಡಿದ್ದಾರೆ. ಅಂತಹವರ ಸಾಲಿನಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡಾ ಇದ್ದಾರೆ. ಹೌದು! ಅವರೇ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಲಗೋಡ ಪಿಎಸೈ ಹನಮಂತ ನೇರಳೆ. 

ಗೋಕಾಕ ಹಾಗೂ ಮೂಡಲಗಿ ಭಾಗದ ಹಲವಾರು ಹಳ್ಳಿಗಳಿಗೆ ಪ್ರವಾಹ ಆವರಿಸಿ ಹಲವಾರು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು ಅವುಗಳಲ್ಲಿ ಅಡಿಬಟ್ಟಿ, ಉದಗಟ್ಟಿ, ಮೆಳವಂಕಿ, ಹಡಗಿನಾಳ, ಮುಸಗುಪ್ಪಿ ಗ್ರಾಮಗಳ ಗ್ರಾಮಸ್ಥರಿಗೆ ಪ್ರವಾಹದ ಮುನ್ಸೂಚನೆ ನೀಡಿ ಗ್ರಾಮಗಳನ್ನು ತೊರೆಯುವಂತೆ ಸ್ಥಳೀಯ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಕುಲಗೂಡ ಠಾಣೆಯ ಪಿಎಸ್‌ಐ ಹನಮಂತ ನೇರಳೆ 
ಮನವಿ ಮಾಡಿದ್ದರೂ ಜನರು ಗ್ರಾಮಗಳನ್ನು ಬಿಟ್ಟು ಬರಲು ಹಿಂದೇಟು ಹಾಕಿದರು. ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಗ್ರಾಮಗಳನ್ನು ತೊರೆಯುವಂತೆ ಪಿಎಸ್‌ಐ ನೇರಳೆ ಅವರು ಗ್ರಾಮದ ಹಿರಿಯರ ಮನವೊಲಿಸಲು ಕಾಲಿಗೆ ಬಿದ್ದು ಊರು ಬಿಡಿ ಎಂದು ಬೇಡಿಕೊಂಡಿದ್ರು. 

ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಮಾರು ಕೆಲವೆ ಗಂಟೆಯಲ್ಲಿ ಈ ಹಡಗಿನಾಳ ಗ್ರಾಮಕ್ಕೆ ಘಟಪ್ರಭೆಯ ಪ್ರವಾಹ ಆವರಿಸಿ ಗ್ರಾಮಕ್ಕೆ ಗ್ರಾಮವೇ ಮುಳುಗಡೆಯಾಗಿ ಗ್ರಾಮದ ಜನರು ಸಂಪೂರ್ಣ ಜಲಸಮಾಧಿಯಾಗಿ ಹಡಗಿನಾಳ ಗ್ರಾಮವೇ ಘಟಪ್ರಭೆಯ ಸೆಳೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಇಂತಹ ಸಂದರ್ಭದಲ್ಲಿ ನೇರಳೆ ಅವರು ತೋರಿದ ಮುಂಜಾಗ್ರತೆ ಹಾಗೂ ಧೈರ್ಯ ಮೆಚ್ಚುವಂತಹದ್ದು.

ಖಾಕಿ ತೊಟ್ಟ ದೇವರು ಗ್ರಾಮದಲ್ಲಿ ಸುತ್ತು ಹಾಕಿ ನಿಮ್ಮ ವಸ್ತುಗಳನ್ನು ಬಿಟ್ಟು ತಮ್ಮ ಅಮೂಲ್ಯವಾದ ಜೀವ ಉಳಿಸುವಂತೆ ಹೇಳುವ ಮಾತನ್ನು ಆಲಿಸಿದ ಹಲವು ಕುಟುಂಬಗಳು ತಕ್ಷಣವೇ ತಮ್ಮ ಮನೆಗಳನ್ನು ತೊರೆದು ಬಂದಿದ್ದರು. ಇನ್ನೂ ಹಲವು ಕುಟುಂಬಳು ಗ್ರಾಮವನ್ನು ತೊರೆಯದ ಹಿನ್ನೆಲೆ ಮತ್ತೇ ಇದೇ ಪೊಲೀಸ್ ಅಧಿಕಾರಿ ರಕ್ಷಣಾ ಕಾರ್ಯಾಚರಣೆಗೆ ಇಳಿದು ಬೋಟ್‌ಗಳ ಮೂಲಕ ಗ್ರಾಮದ ಜನರ ಜೀವ ಉಳಿಸಿದರು. ನಂತರ ಹೆಲಿಕ್ಯಾಪ್ಟರ್ ಮುಖಾಂತರ 7 ಜನರನ್ನು ರಕ್ಷಿಸಿ ಅವರ ಪಾಲಿಗೆ ದೇವಧೂತರಾಗಿದ್ದಾರೆ. ಖಾಕಿ ತೊಟ್ಟ ದೇವರು 2 ಗಂಟೆಯಲ್ಲಿ 2 ಸಾವಿರ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

click me!