Kannada Rajyotsava: ಬೆಳಗಾವಿ ಜಿಲ್ಲಾಧಿಕಾರಿಯಾಗಿ ಮೊಹ್ಮದ್ ರೋಷನ್ ಬಂದ ನಂತರ ಕನ್ನಡಿಗರಿಗೆ ಆನೆ ಬಲ

Kannadaprabha News   | Kannada Prabha
Published : Nov 03, 2026, 05:48 AM IST
Belagavi Kannada Rajyotsava

ಸಾರಾಂಶ

ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವವು ಲಕ್ಷಕ್ಕೂ ಅಧಿಕ ಕನ್ನಡಿಗರ ಪಾಲ್ಗೊಳ್ಳುವಿಕೆಯೊಂದಿಗೆ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು. ನಿರಂತರ 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಆಕರ್ಷಕ ಸ್ತಬ್ಧ ಚಿತ್ರಗಳು ಮತ್ತು ಜಾನಪದ ಕಲಾತಂಡಗಳು ಗಮನ ಸೆಳೆದವು.

ಬೆಳಗಾವಿ (ನ.3): ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಲಕ್ಷಕ್ಕೂ ಅಧಿಕ ಕನ್ನಡಿಗರು ಪಾಲ್ಗೊಂಡು ಸಂಭ್ರಮದ ಹೊನಲನ್ನೇ ಹರಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅದ್ಧೂರಿ ಮೆರವಣಿಗೆ ನಿರಂತರ 12 ಗಂಟೆಗಳಿಗೂ ಹೆಚ್ಚು ಕಾಲ ನಡೆದು, ಕನ್ನಡಿಗರ ಒಗ್ಗಟ್ಟು, ಭಾಷಾಭಿಮಾನ ಹಾಗೂ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು.

ಕುಂದಾನಗರಿಯಲ್ಲಿ ಹಬ್ಬದ ವಾತಾವರಣ

ಭಾನುವಾರ ಬೆಳಗ್ಗೆಯಿಂದಲೇ ನಗರದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ನಗರದ ಬೀದಿಬೀದಿಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸಿದರೆ, ಎಲ್ಲೆಡೆ ಕನ್ನಡದ ಘೋಷಣೆಗಳು ಮೊಳಗಿದವು. ವಿವಿಧ ಕನ್ನಡಪರ ಸಂಘಟನೆಗಳು, ಯುವಕ ಮಂಡಳಿಗಳು ಹಾಗೂ ಕಲಾ ತಂಡಗಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸಿದವು.

ಮೆರವಣಿಗೆಯಲ್ಲಿ ಪ್ರದರ್ಶಿಸಲಾದ ಆಕರ್ಷಕ ಸ್ತಬ್ಧ ಚಿತ್ರಗಳು, ಜಾನಪದ ಕಲಾತಂಡಗಳು, ಸಾಂಪ್ರದಾಯಿಕ ವಾದ್ಯಮೇಳಗಳು ಹಾಗೂ ವಿವಿಧ ಸಾಂಸ್ಕೃತಿಕ ರೂಪಕಗಳು ಜನರ ಗಮನ ಸೆಳೆದವು. ಬೆಳಗಾವಿ ಚನ್ನಮ್ಮಳ ವೇಷಧಾರಿಗಳು ಹಾಗೂ ಕನ್ನಡದ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಪ್ರದರ್ಶನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವ ಆಚರಣೆ

ಒಟ್ಟಾರೆ, ಬೆಳಗಾವಿಯ ಈ ವರ್ಷದ ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಾಗಿರದೆ, ಕನ್ನಡಿಗರ ಭಾಷಾಭಿಮಾನ, ಸಾಂಸ್ಕೃತಿಕ ಪರಂಪರೆ ಹಾಗೂ ಒಗ್ಗಟ್ಟಿನ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ಸಂಭ್ರಮವಾಗಿ ಮೂಡಿ ಬಂತು. ಕುಂದಾನಗರಿಯ ಬೀದಿಗಳಲ್ಲಿ ಹನ್ನೆರಡು ಗಂಟೆಗಳ ಕಾಲ ಮೊಳಗಿದ ಕನ್ನಡದ ಕಂಪು, ಭಾಗವಹಿಸಿದ ಪ್ರತಿಯೊಬ್ಬರ ಮನದಲ್ಲೂ ಅವಿಸ್ಮರಣೀಯ ನೆನಪಾಗಿ ಉಳಿಯಿತು.

ಬೆಳಗಾವಿ ಜಿಲ್ಲಾಧಿಕಾರಿಯ ಕನ್ನಡ ಪ್ರೇಮ

ಬೆಳಗಾವಿಯ ಹಿಂದಿನ ಜಿಲ್ಲಾಧಿಕಾರಿಗೆ ಹೋಲಿಸಿದರೆ ಈಗ ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಮೊಹ್ಮದ್ ರೋಷನ್ ಹೆಚ್ಚು ಸ್ನಹಮಯಿಯಾಗಿರುವುದಲ್ಲದೆ ಕನ್ನಡ ಸಂಘಟನೆಗಳು, ನಾಯಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಕನ್ನಡ ರಾಜ್ಯೋತ್ಸವ ಸ್ವತಃ ಕನ್ನಡದ ಹಾಡುಗಳಿಗೆ ಕಾರ್ಯಕರ್ತರೊಂದಿಗೆ ಕೊರಳಲ್ಲಿ ಕನ್ನಡ ಧ್ವಜ ಹೊಂದಿದ್ದ ಟವೆಲ್ ಧರಿಸಿ ಕುಣಿದು ಕುಪ್ಪಳಿಸಿದರುವುದು ಕನ್ನಡಿಗರಿಗೆ ತುಂಬಾ ಖುಷಿಯಾಗಿದೆ. ಮೊಹ್ಮದ್ ರೋಷನ್ ಉತ್ತಮ ಅಧಿಕಾರಿಯಾಗಿದ್ದು. ಅವರು ಜಿಲ್ಲಾಧಿಕಾರಿ ಬಂದ ನಂತರ ಇಲ್ಲಿನ ಕನ್ನಡ ಭಾಷೆ, ನೆಲ, ಜಲ ಉಳಿವಿಗೆ ಹೋರಾಡುತ್ತಿರುವ ಕನ್ನಡ ಕಾರ್ಯಕರ್ತರಿಗೆ ಆನೆ ಬಲ ಬಂದಂತಾಗಿದೆ ಎಂಬ ಮಾತು ಕೇಳಿಬಂದಿದೆ.

PREV
Read more Articles on
click me!

Recommended Stories

ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್: ಬರೋಬ್ಬರಿ 1.42 ಲಕ್ಷ ಮಂದಿ ಯೋಜನೆಯಿಂದ ಔಟ್?!
ಸ್ಟಿಂಗ್ ಕೇಸ್: ಸುದ್ದಿವಾಹಿನಿ ಮುಖ್ಯಸ್ಥನ ಮನೆ, ಕಚೇರಿಗೆ ಪೊಲೀಸರ ದಾಳಿ - ತನಿಖೆ ವೇಳೆ ಲಂಚಕ್ಕಾಗಿ ಬೇಡಿಕೆ