ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ!

Kannadaprabha News, Ravi Janekal |   | Kannada Prabha
Published : Mar 22, 2026, 06:17 AM IST
Digital arrest

ಸಾರಾಂಶ

ಬೆಳಗಾವಿಯ ವೃದ್ಧ ಉದ್ಯಮಿಯೊಬ್ಬರನ್ನು 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಗುರಿಯಾಗಿಸಿಕೊಂಡ ಸೈಬರ್ ವಂಚಕರು, ಮನಿ ಲಾಂಡ್ರಿಂಗ್ ಬೆದರಿಕೆ ಹಾಕಿ ₹15 ಕೋಟಿ ದೋಚಿದ್ದಾರೆ. ದೂರು ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು, ವಂಚಕರ ಖಾತೆಯಲ್ಲಿದ್ದ ₹90 ಲಕ್ಷವನ್ನು ಫ್ರೀಜ್ ಮಾಡಿ, ತನಿಖೆ ಮುಂದುವರಿಸಿದ್ದಾರೆ.

ಬೆಳಗಾವಿ (ಮಾ.2): ಜಿಲ್ಲೆಯಲ್ಲಿ ಸೈಬರ್ ವಂಚಕರು ವೃದ್ಧ ಉದ್ಯಮಿಯನ್ನು ಗುರಿಯಾಗಿಸಿಕೊಂಡು ₹15 ಕೋಟಿ ದೋಚಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಬೆಳಗಾವಿ ನಗರದ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ವಿಡಿಯೋ ಕರೆ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ ಎಂದು ಬೆದರಿಕೆ ಹಾಕಿ ಭಯ ಹುಟ್ಟಿಸಿದ್ದರು. ತನಿಖೆ ನಡೆಯುತ್ತಿದೆ ಎಂದು ಹೇಳಿ, ಹಣವನ್ನು ಸುರಕ್ಷತೆಯ ಹೆಸರಿನಲ್ಲಿ ಬೇರೆ ಖಾತೆಗೆ ವರ್ಗಾಯಿಸಿ ಬಳಿಕ ಮರಳಿಸುತ್ತೇವೆ ಎಂದು ನಂಬಿಸಿ ಹಂತ ಹಂತವಾಗಿ ₹15 ಕೋಟಿ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ನಂತರ ವಂಚಕರ ಸಂಪರ್ಕ ಕಡಿತಗೊಂಡಾಗ ಅನುಮಾನಗೊಂಡ ವೃದ್ಧ ಉದ್ಯಮಿ ಮಾರ್ಚ್ 18ರಂದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ವಂಚಕರ ಖಾತೆಗಳನ್ನು ತಡೆಹಿಡಿದು, ₹15 ಕೋಟಿಯಲ್ಲಿ ₹90 ಲಕ್ಷ ಇರುವ ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಇದೇ ರೀತಿಯ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಕಳೆದ ಒಂದೇ ತಿಂಗಳಲ್ಲಿ ಮೂವರು ಹಿರಿಯ ನಾಗರಿಕರು ಇಂತಹ ಮೋಸಕ್ಕೆ ಒಳಗಾಗಿರುವುದು ಆತಂಕಕಾರಿ ಸಂಗತಿ. ಯಾವುದೇ ರೀತಿಯ ಬೆದರಿಕೆ ಕರೆಗಳಿಗೆ ಹೆದರದೇ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಮೇಟಿ ಕಿರಿ ಪುತ್ರ, ಶಾಮನೂರು ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್? ಅಲ್ಪಸಂಖ್ಯಾತರ ವಿರೋಧದ ನಡುವೆ ನಡೆದದ್ದೇನು?
ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ