ಬೆಳಗಾವಿ ಸಚಿವರೇ... ಚಿಕ್ಕೋಡಿ ತಾಯಿ, ಮಕ್ಕಳ ಆಸ್ಪತ್ರೆಗೆ ಉದ್ಘಾಟನೆ ಯಾವಾಗ?

By Sathish Kumar KH  |  First Published Aug 9, 2023, 8:13 PM IST

ಚಿಕ್ಕೋಡಿಯಲ್ಲಿ ಕಳೆದ 7 ವರ್ಷಗಳ ಹಿಂದೆಯೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಈವರೆಗೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.


ಬೆಳಗಾವಿ (ಆ.09): ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೇ ನೆರೆಯ ಮಹಾರಾಷ್ಟ್ರದ ಮಿರಜ್ ಸಾಂಗಲಿಗೆ ಹೋಗಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆಸ್ಪತ್ರೆಯೊಂದರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದ್ರೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಏಳು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಕಟ್ಟಡ ಕಾಮಗಾರಿ ಈಗ ಬಹುತೇಕ ಪೂರ್ಣಗೊಂಡಿದೆ. ಆದರೆ, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಕನಸು ಕಂಡಿದ್ದ ಮಹಿಳೆ ಈಗ 7 ಮಕ್ಕಳ ತಾಯಿ ಆಗಿದ್ದರೂ (7 ವರ್ಷ) ಹೆರಿಗೆ ಆಸ್ಪತ್ರೆಗೆ ಮಾತ್ರ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಅಷ್ಟಕ್ಕೂ ಯಾವುದು ಆ ಆಸ್ಪತ್ರೆ? ಈ ಭಾಗದ ಜನರು ಹೇಳೋದೇನು? ಅಧಿಕಾರಿಗಳು ಹೇಳೋದೇನು? ಈ ಸ್ಟೋರಿಯಲ್ಲಿದೆ ನೋಡಿ.

ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಬಾಣಂತಿ ಕೋಡಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಆರಂಭವಾಗಿ ಏಳು ವರ್ಷಗಳೇ ಕಳೆದಿವೆ. ಏಳು ವರ್ಷಗಳ ವಿಳಂಬ ಕಾಮಗಾರಿ ಯಿಂದ ಈಗ ಬಹುತೇಕ ಪೂರ್ಣಗೊಂಡ ಈ ಆಸ್ಪತ್ರೆ ಜನರ ಉಪಯೋಗಕ್ಕೆ ಲಭ್ಯ ಯಾವಾಗ ಎಂಬ ಪ್ರಶ್ನೆ ಈ ಭಾಗದ ಜನ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಸೂಕ್ತ ಸರ್ಕಾರಿ ಆಸ್ಪತ್ರೆಗಳಿಲ್ಲದೇ ಜನರು ಮಹಾರಾಷ್ಟ್ರದ ಮಿರಜ್ ಸಾಂಗಲಿಯ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವಂತೆ ಸಾಕಷ್ಟು ಆಗ್ರಹ ಕೇಳಿ ಬಂದಿತ್ತು. ಎಂಎಲ್​ಸಿ ಪ್ರಕಾಶ್ ಹುಕ್ಕೇರಿ ಸತತ ಪ್ರಯತ್ನದಿಂದ ನೂರು ಬೆಡ್​ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಚಿಕ್ಕೋಡಿಗೆ ಮಂಜೂರು ಮಾಡಿಸಿಕೊಂಡು ಬಂದಿದ್ದರು. 

Tap to resize

Latest Videos

ಪುನೀತ್, ಸ್ಪಂದನಾ ಸಾವಿನ ಬೆನ್ನಲ್ಲೇ, ಕೇರಳ ತಂತ್ರಿಗಳ ಬಳಿ ಅಷ್ಟಮಂಗಳ ಪ್ರಶ್ನೆ: ಈಡಿಗ ಸ್ವಾಮೀಜಿ ಮುಂದಾಳತ್ವ

ಸರ್ಕಾರದಿಂದ 2015ರಲ್ಲಿ ಕಟ್ಟಡ ಕಾಮಗಾರಿ ಅರಂಭಗೊಂಡಿದೆ. ಕಟ್ಟಡ ಕಾಮಗಾರಿ ಆರಂಭಗೊಂಡು 7 ವರ್ಷಗಳೇ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಚಿಕ್ಕೋಡಿಯಲ್ಲಿ ಇರುವಂತಹ ಸಾರ್ವಜನಿಕ ಆಸ್ಪತ್ರೆಯಂತೂ ಶಿಥಿಲಾವ್ಯಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಆಸ್ಪತ್ರೆಯಲ್ಲಿ ಬಕೆಟ್, ಬುಟ್ಟಿಗಳನ್ನು ಇಡುವಂತಹ ಪರಿಸ್ಥಿತಿ ಇದೆ. ಆದಷ್ಟು ಬೇಗ ಆಸ್ಪತ್ರೆ ಲೋಕಾರ್ಪಣೆ ಮಾಡಬೇಕು ಇಲ್ಲವಾದ್ರೆ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕರವೇ ಮುಖಂಡ ಸಂಜು ಬಡಿಗೇರ ಎಚ್ಚರಿಕೆ ನೀಡಿದ್ದಾರೆ.

ಇನ್ನು ಕಟ್ಟಡ ಕಾಮಗಾರಿ ವಿಳಂಬವಾಗಿದ್ದಕ್ಕೆ ಖುದ್ದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ್ ಹುಕ್ಕೇರಿಯವರೇ ಬಹಿರಂಗ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದಾರೆ. ಕಟ್ಟಡ ಕಾಮಗಾರಿ ಜವಾಬ್ದಾರಿ ನೋಡಿಕೊಳ್ಳುವ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಅಧಿಕಾರಿಗಳು ಈವರೆಗೆ 20ಕ್ಕೂ ಹೆಚ್ಚು ಬಾರಿ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದಾರೆ. ಆದರೂ, ಯಾವುದೇ ಪ್ರಯೋಜನ ಆಗಿಲ್ಲ ಎಂದು ತಿಳಿಸಿದರು.

ಮುತ್ತೈದೆ ಸಾವಿನ ಭಾಗ್ಯ ಕಂಡ ಸ್ಪಂದನಾಗೆ ತಾಳಿ ಕಟ್ಟಿ ಕಳಿಸಿಕೊಟ್ಟ ವಿಜಯ್‌

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್ ಕೊಣ್ಣೂರಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಚಿಕ್ಕೋಡಿಯಿಂದ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ 2015ರಿಂದ ಆರಂಭವಾಗಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಕೋವಿಡ್ ಹಿನ್ನೆಲೆ ವಿಳಂಬವಾಗಿತ್ತು. ಬಳಿಕ ಮತ್ತೆ ಕಟ್ಟಡ ಕಾಮಗಾರಿ ಶುರುವಾಯಿತು. ಇನ್ನೊಂದು ತಿಂಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡುವ ಚಿಂತನೆ ಇದೆ. ಕಟ್ಟಡ ಕಾಮಗಾರಿ ಮುಗಿದಿದೆ. ಇಂಟಿರಿಯರ್ ವರ್ಕ್ ನಡೆದಿದೆ. ಈಗಾಗಲೇ ಶೇ.80ರಷ್ಟು ವೈದ್ಯಕೀಯ ಉಪಕರಣಗಳು ಸಹ ಬಂದಿವೆ. ಆಸ್ಪತ್ರೆಗೆ ಬೇಕಾದಂತಹ ವೈದ್ಯಕೀಯ ಸಿಬ್ಬಂದಿ ಸಹ ನೇಮಕ ಮಾಡಿಕೊಳ್ಳಲಾಗಿದೆ. ಸ್ತ್ರೀರೋಗ ತಜ್ಞ, ಅರವಳಿಕೆ ತಜ್ಞ ನೇಮಕಗೊಂಡಿದ್ದಾರೆ. ಮಕ್ಕಳ ತಜ್ಞ ನೇಮಕವಾಗಬೇಕಿದೆ. ವೈದ್ಯಕೀಯ ಉಪಕರಣಗಳು ಬಂದು ಈಗಾಗಲೇ ಆರು ತಿಂಗಳು ಕಳೆದಿವೆ. ಹೈಟೆಕ್ ಶಸ್ತ್ರಚಿಕಿತ್ಸಾ ಘಟಕ, ಲಿಫ್ಟ್ ಈ ಎರಡು ಕೆಲಸ ಆಗಬೇಕಿದೆ ಎಂದು ತಿಳಿಸಿದ್ದಾರೆ.

click me!