* ಸುಂದರಿಯರ ಫೇಸ್ಬುಕ್ ಮೂಲಕ ಫ್ರೆಂಡ್ಸ್ ರಿಕ್ವೆಟ್ಸ್ ಕಳಿಸಿ ಮೋಸ
* ದೂರು ನೀಡಿದ ಬ್ಲ್ಯಾಕ್‌ಮೇಲ್ ತಂಡದಿಂದ ವಂಚನೆಗೊಳದವರು
* ಈ ರೀತಿ ಮೋಸ ಹೋದಲ್ಲಿ ದೂರು ನೀಡಲು ಮುಂದಾಗಬೇಕು
ಬೆಳಗಾವಿ(ಆ.04): ಫೇಸ್‌ಬುಕ್ ಹಾಗೂ ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರೇ ಎಚ್ಚರ.! ಸ್ವಲ್ಪ ಯಾಮಾರಿದರೂ ಬ್ಲ್ಯಾಕ್‌ಮೇಲರ್ ತಂಡದ ವ್ಯವಸ್ಥಿತ ಗಾಳಕ್ಕೆ ಸಿಕ್ಕು ತೀವ್ರ ಸಂಕಷ್ಟ ಎದುರಿಸಬೇಕಾದೀತು.
ಇತ್ತೀಚೆಗೆ ದ ಮೂಲಕ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿರುವ ನಿದರ್ಶನಗಳಿವೆ. ಬೆರಳ ತುದಿಯಲ್ಲಿಯೇ ಜಗತ್ತಿನ ಎಲ್ಲ ವಿಷಯಗಳನ್ನು ಕಂಡುಕೊಳ್ಳಬಹುದಾದ ಇವುಗಳಿಂದ ಬೆರಳು ತುದಿಯಿಂದಲೇ ತಮ್ಮ ಸುಂದರ ಬದುಕಿಗೆ ಕೊಳ್ಳಿ ಇಟ್ಟುಕೊಂಡಿರುವ ಘಟನೆಗಳೂ ಇವೆ. ಫೇಸ್‌ಬುಕ್ ಖಾತೆ ತೆರೆದು ಅದಕ್ಕೆ ಪ್ರೊಫೈಲ್ ಫೋಟೋವನ್ನಾಗಿ ಚೆಂದುಳ್ಳಿ ಚೆಲುವೆಯರ ಫೋಟೋಗಳನ್ನು ಹಾಕಿ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಖೆಡ್ಡಾಕ್ಕೆ ಕೆಡವಿಕೊಳ್ಳುವ ಬ್ಲ್ಯಾಕ್‌ಮೇಲರ್ ಗ್ಯಾಂಗ್ ಇತ್ತೀಚಿಗೆ ವ್ಯವಸ್ಥಿವಾಗಿ ಸಕ್ರಿಯವಾಗಿದೆ
undefined
ಯುವಕರು, ಶ್ರೀಮಂತರು ಹಾಗೂ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಫೇಸ್‌ಬುಕ್‌ನಲ್ಲಿ ಚೆಲುವೆಯರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಸುಂದರ ಹುಡಗಿಯ ಫೋಟೋ ನೋಡುತ್ತಿದ್ದಂತೆ ನೀವು ಸ್ವೀಕಾರ ಮಾಡುತ್ತಿದ್ದಂತೆ ಚಾಟ್ ಮಾಡುವ ಮೂಲಕ ಹತ್ತಿರವಾಗುತ್ತಾರೆ. ಇದಾದ ಬಳಿಕ ವಾಟ್ಸಾಪ್ ಇರುವ ಮೊಬೈಲ್ ನಂಬರ್ ಪಡೆದುಕೊಂಡು ವಾಟ್ಸಾಪ್‌ನಲ್ಲಿ ಮೆಸೆಜ್, ಅಶ್ಲೀಲ ಫೋಟೋ ಚಾಟ್ ಮಾಡುವುದು ವಿಡಿಯೋ ಕಾಲ್ ಮಾಡುವ ಮೂಲಕ ಮತ್ತಷ್ಟು ಹತ್ತಿರವಾಗುತ್ತಾರೆ.
15 ವರ್ಷದ ಪಂಟರ್ ಹ್ಯಾಕರ್... ಚೀನಿ ಆ್ಯಪ್ ಬಳಸಿ ಪೋರ್ನ್ ತೋರಿಸುತ್ತಿದ್ದ
ಇದರಿಂದ ಸಹಜವಾಗಿ ತಮ್ಮ ಮನಸಿನ ಮಾತುಗಳನ್ನು ಹಂಚಿಕೊಂಡ ನಂತರ, ನಗ್ನವಾಗುವಂತೆ ಉತ್ತೇಜನಗೊಳಿಸಿ ಸ್ಕ್ರೀನ್ ರೆಕಾರ್ಡ್ ಮಾಡುತ್ತಾರೆ. ಬಳಿಕ ಈ ರೆಕಾರ್ಡ್ ಮಾಡಲಾದ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿ ಲಕ್ಷಾಂತರ ರುಪಾಯಿ ಹಣ ನೀಡಬೇಕು. ಇಲ್ಲವಾದಲ್ಲಿ ಈ ವಿಡಿಯೋವನ್ನು ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುವ ತಂಡ ಸಕ್ರಿಯವಾಗಿದೆ.
ನಗರದ ಪೊಲೀಸ್ ಕಮಿಷನರೇಟ್‌ನಲ್ಲಿ ಈಗಾಗಲೇ ಇಂತಹ ಪ್ರಕರಣಕ್ಕೆ ವಂಚನೆಗೆ ಒಳಗಾದವರ ಸಂಖ್ಯೆ ಹತ್ತಂಕಿ ದಾಟಿದೆ. ತಮಗಾಗುತ್ತಿರುವ ಬ್ಲ್ಯಾಕ್‌ಮೇಲ್ ಕುರಿತು ನಗರದ ಅಪರಾಧ, ಆರ್ಥಿಕ ಹಾಗೂ ಮಾದಕವಸ್ತು ನಿಯಂತ್ರಣ (ಸಿಇಎನ್) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹೊರತು, ವಂಚಕರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಧೈರ್ಯವಾಗಿ ಮುಂದೆ ಬಂದು ಪ್ರಕರಣ ದಾಖಲಿಸುವ ಕಾರ್ಯವನ್ನು ಮಾಡುತ್ತಿಲ್ಲ. ಇದರಿಂದಾಗಿ ಬ್ಲ್ಯಾಕಮೇಲರ್ ತಂಡಕ್ಕೆ ಯಾವುದೇ ಭಯ ಇಲ್ಲದಂತಾಗಿದೆ ಎನ್ನಲಾಗುತ್ತಿದೆ.
ಬ್ಲ್ಯಾಕ್‌ಮೇಲ್ ತಂಡದಿಂದ ವಂಚನೆಗೊಳದವರು ದೂರು ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಬಗ್ಗೆ ಗೌಪ್ಯತೆ ಕಾಪಾಡುವಂತೆ ಮನವಿಯನ್ನೂ ಮಾಡಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು. ಯಾರಾದರೂ ಈ ರೀತಿ ಮೋಸ ಹೋದಲ್ಲಿ ದೂರು ನೀಡಲು ಮುಂದಾಗಬೇಕು. ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಬೆಳಗಾವಿ ಡಿಸಿಪಿ ಡಾ. ವಿಕ್ರಮ್ ಅಮಟೆ ತಿಳಿಸಿದ್ದಾರೆ.