
ಕಾರವಾರ(ಡಿ.13): ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕೋಲಾರದ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಹೌದು, ಜಿಲ್ಲೆಯ ಮುಂಡಗೋಡದಲ್ಲಿ ವಿದ್ಯಾರ್ಥಿಗಳ ಹಾಗೂ ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಇಂದು(ಶುಕ್ರವಾರ) ಸಂಭವಿಸಿದೆ.
ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಜ್ಜೇನು ದಾಳಿಯಿಂದ ಆರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 15ಕ್ಕೂ ಹೆಚ್ಚು ಜನರು ಗಾಯಗಳಾಗಿದ್ದು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಉತ್ತರಕನ್ನಡ: ಪ್ರವಾಸಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿನಿ ಸಮುದ್ರದಲ್ಲಿ ಮುಳುಗಿ ಸಾವು,
ಗಂಭೀರ ಸ್ಥಿತಿಯಲ್ಲಿದ್ದ 10 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕರ್ಣದ ಕುಡ್ಲೆ ಬೀಚಿನಲ್ಲಿ ಇಬ್ಬರು ಪ್ರವಾಸಿಗರ ಜೀವ ರಕ್ಷಣೆ
ಉತ್ತರಕನ್ನಡ: ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚಿನಲ್ಲಿ ಇಬ್ಬರು ಪ್ರವಾಸಿಗರನ್ನ ರಕ್ಷಿಸಲಾಗಿದೆ. ಬಿಹಾರ್ ಮೂಲದ ಪ್ರದೀಪ್ ಗುಪ್ತ (29) ಹಾಗೂ ಅರ್ಪಿತ್ ಬೆಹೆರಾ (30) ಎಂಬುವರನ್ನ ಮಿಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಪ್ರದೀಪ್ ಗುಪ್ತ ಹಾಗೂ ಅರ್ಪಿತ್ ಬೆಹೆರಾ ಇಬ್ಬರೂ ಸ್ನೇಹಿತರು ಗೋಕರ್ಣದ ಕುಡ್ಲೇಬೀಚಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಸಮುದ್ರದ ಸುಳಿಗೆ ಸಿಲುಕಿ ಜೀವ ರಕ್ಷಣೆಗಾಗಿ ಗೊಬ್ಬೆ ಹಾಕಿದ್ರು. ಕೂಡಲೇ ಮಿಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ ಸಿಬ್ಬಂದಿ ಇವರನ್ನ ರಕ್ಷಣೆ ಮಾಡಿದ್ದಾರೆ. ಸ್ಪೀಡ್ ಬೋಟ್ ಮೂಲಕ ಇಬ್ಬರು ಪ್ರವಾಸಿಗರನ್ನ ರಕ್ಷಿಸಿದ್ದಾರೆ.