BBMP ವಾರ್ಡ್‌ ಮರು ವಿಂಗಡಣೆ: ಬದಲಾಗುತ್ತಾ ವಾರ್ಡ್ ನಂಬರ್..?

Kannadaprabha News   | Asianet News
Published : Feb 26, 2020, 08:54 AM IST
BBMP ವಾರ್ಡ್‌ ಮರು ವಿಂಗಡಣೆ: ಬದಲಾಗುತ್ತಾ ವಾರ್ಡ್ ನಂಬರ್..?

ಸಾರಾಂಶ

ಬಿಬಿಎಂಪಿಯ ವಾರ್ಡ್‌ ಮರು ವಿಂಗಡಣೆಯಲ್ಲಿ ನಗರದ ಕೇಂದ್ರ ಭಾಗದ ವಾರ್ಡ್‌ ಸಂಖ್ಯೆ ಕಡಿಮೆಯಾಗಿ ಹೊರ ವಲಯದಲ್ಲಿ ಸಂಖ್ಯೆ ಹೆಚ್ಚಾಗಲಿವೆ. ಹಾಗಾದ್ರೆ ವಾರ್ಡ್‌ಗಳ ಸಂಖ್ಯೆ ಬದಲಾಗಲಿದೆಯಾ..? ಮಾಹಿತಿಗಾಗಿ ಇಲ್ಲಿ ಓದಿ.  

ಬೆಂಗಳೂರು(ಫೆ.26): ಬಿಬಿಎಂಪಿಯ ವಾರ್ಡ್‌ ಮರು ವಿಂಗಡಣೆಯಲ್ಲಿ ನಗರದ ಕೇಂದ್ರ ಭಾಗದ ವಾರ್ಡ್‌ ಸಂಖ್ಯೆ ಕಡಿಮೆಯಾಗಿ ಹೊರ ವಲಯದಲ್ಲಿ ಸಂಖ್ಯೆ ಹೆಚ್ಚಾಗಲಿವೆ. ಆದರೆ, ವಾರ್ಡ್‌ಗಳ ಸಂಖ್ಯೆ198 ಮೀರುವುದಿಲ್ಲ ಎಂದು ಬಿಬಿಎಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 2011ರ ಜನಗಣತಿಯ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. 2011ರಲ್ಲಿ ನಗರದಲ್ಲಿ ಒಟ್ಟು 84 ಲಕ್ಷ ಜನಸಂಖ್ಯೆ ಇದ್ದು, ಪ್ರತಿ ವಾರ್ಡ್‌ಗೆ ಸುಮಾರು 42 ಸಾವಿರ ಮಂದಿಯಂತೆ ಹಂಚಿಕೆ ಮಾಡಿ ವಾರ್ಡ್‌ ಮರು ವಿಂಗಡಿಸಲಾಗಿದೆ. ನಗರದ ಕೇಂದ್ರ ಭಾಗದ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ ಜನಸಂಖ್ಯೆ ಪ್ರಮಾಣ ಕಡಿಮೆ ಇರುವುದರಿಂದ ವಾರ್ಡ್‌ ಸಂಖ್ಯೆಕಡಿಮೆಯಾಗಲಿವೆ. ಹೊರ ವಲಯದಲ್ಲಿ ಜನಸಂಖ್ಯೆಪ್ರಮಾಣ ಹೆಚ್ಚಿರುವುದರಿಂದ ಒಂದೆರಡು ವಾರ್ಡ್‌ ಸಂಖ್ಯೆ ಹೆಚ್ಚಾಗಲಿವೆ. ಆದರೆ, ಒಟ್ಟು ವಾರ್ಡ್‌ ಸಂಖ್ಯೆ 198 ಮೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಲಿಕೆ ಚುನಾವಣೆಗೆ ತಯಾರಿ: ಜೆಡಿಎಸ್‌ ಸರಣಿ ಸಭೆ

ಮರು ವಿಂಗಡಣೆ ವರದಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಸರ್ಕಾರ ವಾರ್ಡ್‌ ಮರು ವಿಂಗಡಣೆಯ ಕರಡು ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಬಳಿಕ ಸರ್ಕಾರವೇ 198 ವಾರ್ಡ್‌ಗಳಿಗೆ ಮೀಸಲಾತಿ ಹಂಚಿಕೆ ಮಾಡಿ ಪ್ರಕಟಿಸಲಿದೆ ಎಂದು ವಿವರಿಸಿದರು.

ಇನ್ನು ವಾರ್ಡ್‌ ಮರು ವಿಂಗಡಣೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ ವಾರ್ಡ್‌ ಮರು ವಿಂಗಡಣೆಯ ಕುರಿತು ಸರ್ಕಾರಕ್ಕೆ ಕೆಲವು ನಿರ್ದೇಶನ ನೀಡಿದೆ. ಮತ್ತೆ ಮಾ.4ಕ್ಕೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.BBMP ward re arrangement in bangalore

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ