ಮಂಡ್ಯ : ಚಿಕ್ಕರಸಿನಕೆರೆ ಗ್ರಾಮದಲ್ಲಿ ನಡೆಯಿತೊಂದು ಪವಾಡ

By Kannadaprabha NewsFirst Published Sep 16, 2019, 11:39 AM IST
Highlights

ಮಂಡ್ಯದ ಚಿಕ್ಕರಸಿನಕರೆ ಗ್ರಾಮದಲ್ಲಿ 18ವರ್ಷಗಳಿಂದ ಬಗೆಹರಿಯದ ವಿವಾದವೊಂದು ಬಗೆಹರಿದಿದೆ. ಇಲ್ಲಿನ ಬಸಪ್ಪ ಪವಾಡ ಸೃಷ್ಟಿಸಿದ್ದಾರೆ. 

ಮಂಡ್ಯ (ಸೆ.16): ಸಕ್ಕರೆ ನಾಡು ಮಂಡ್ಯದ ಚಿಕ್ಕರಸಿನ ಕೆರೆಯಲ್ಲೊಂದು ಪವಾಡ ನಡೆದಿದೆ. 

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಬಸಪ್ಪ ಸ್ವಾಮಿಯು 18 ವರ್ಷಗಳಿಂದ ಬಗೆಹರಿಯದ ಅರ್ಚಕನ ಸಮಸ್ಯೆಯನ್ನು ಬಗೆಹರಿಸಿ ಪರಿಹಾರ ನೀಡಿದ್ದಾರೆ.

ಶುದ್ದಲೂರಿನ ಮಾರಮ್ಮ ದೇವಾಲಯದ ಅರ್ಚಕರ ನೇಮಕಾತಿ ವಿಚಾರವು ಸಾಕಷ್ಟು ಕಗ್ಗಂಟಾಗಿದ್ದು, ಅರ್ಚಕ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿತ್ತು.  ಈ ವಿಚಾರ ಕೋರ್ಟ್ ಕಚೇರಿ, ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರೂ ಕೂಡ ಬಗೆಹರಿದಿರಲಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮಸ್ಥರಿಗೆ ತಲೆನೋವಾಗಿದ್ದ ಸಮಸ್ಯೆ ಬಗೆಹರಿಸಲು ಬಸಪ್ಪನ ಮೊರೆ ಹೋಗಿದ್ದು ಈ ವೇಳೆ ಸಾವಿರಾರು ಜನರ ಸಮ್ಮುಖದಲ್ಲಿ ಬಸಪ್ಪ ನಿಂಗರಾಜು ಎನ್ನುವ ಯುವಕನನ್ನು ಅರ್ಚಕನಾಗಿ ಆಯ್ಕೆ ಮಾಡಿ, ಗ್ರಾಮದ ಕರೆಯ ಬಳಿ ಕರೆತಂದು ಸ್ನಾನ ಮಾಡಿಸಿ ಕರೆ ತಂದಿದ್ದಾನೆ.

ಬಸಪ್ಪನ ನ್ಯಾಯ ತೀರ್ಮಾನಕ್ಕೆ ಗ್ರಾಮಸ್ಥರೆಲ್ಲರೂ ಕೂಡ ತಲೆಬಾಗಿದ್ದುಮ ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಬಸಪ್ಪನ ನ್ಯಾಯ ತೀರ್ಮಾನಕ್ಕೆ ಸುತ್ತಮುತ್ತಲ ಗ್ರಾಮಸ್ಥರ ಪ್ರಶಂಸಿದ್ದು, ಸಮಸ್ಯೆ ಬಗೆ ಹರಿಸಿದ ಬಸಪ್ಪನಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದ್ದಾರೆ.

click me!