Vijayapura: ವಿಜಯೇಂದ್ರ ಭೇಟಿ ರಹಸ್ಯ ಬಿಚ್ಚಿಟ್ಟ ಯತ್ನಾಳ್: ಮುಂದಿನ ನಡೆ ಏನು?

Published : Oct 21, 2026, 01:31 PM IST
Yatnal

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮುರುಗೇಶ್ ನಿರಾಣಿ ಭೇಟಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದು, ಯಾವುದೇ ರಾಜಕೀಯ ಒಪ್ಪಂದವಾಗಿಲ್ಲ ಎಂದಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಾಗಿ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿರುವ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯೇ ತಮ್ಮ ಮೊದಲ ಷರತ್ತು ಎಂದು ಗುಡುಗಿದ್ದಾರೆ.

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾದ ಕುರಿತಂತೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ನಾವೇನು ರಾಜಕೀಯ ಮಾತನಾಡಿಲ್ಲ. ಯಾವುದೇ ರೀತಿ ಒಪ್ಪಂದ ಆಗಿಲ್ಲ. ಪತ್ರಕರ್ತರು ಪಕ್ಷಾತೀತರಾಗಿರುತ್ತಾರೆ. ಅವರ ಮನೆಯಲ್ಲಿ ರಾಜಕಾರಣ ಮಾತನಾಡಲು ಬರುವುದಿಲ್ಲ. ಒಪ್ಪಂದ ಮಾತನಾಡಲು ಆಗುವುದಿಲ್ಲ. ಸುಮ್ನೇ ಆರಾಮಾ, ಆರಾಮ್ ಎಂದು ಎಷ್ಟೇ ಮಾತನಾಡಿದ್ದೇವೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಗಂಟೆ ಚರ್ಚೆ ಆಯ್ತಾ?

ಮರುಗೇಶ್ ನಿರಾಣಿ ಅವರೊಂದಿಗೆ ಚರ್ಚೆ ವಿಚಾರವಾಗಿಯೂ ಸ್ಪಷ್ಟನೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಳೆದ 30 ರಿಂದ 35 ವರ್ಷಗಳಿಂದ ನಾರಾಯಣಸಾ ಬಾಂಡಗೆ ದಸರಾ ಊಟಕ್ಕೆ ಹೋಗ್ತಿದ್ದೇವೆ. ಅವರ ಮನೆಗೆ ದಸರಾ ಸಂದರ್ಭದಲ್ಲಿ ಊಟಕ್ಕೆ ಹೋಗುವುದು ಸಹಜ. ಆಯುಧ ಪೂಜೆ ದಿವಸ ಮನೆಯಲ್ಲಿ ದೇವಿಯ ಪ್ರಸಾದ ವ್ಯವಸ್ಥೆ ಮಾಡಿಸಿರುತ್ತಾರೆ. ಪ್ರಸಾದಕ್ಕಾಗಿ ಹೋಗಿದ್ದೆ, ಆಕಸ್ಮಿಕವಾಗಿ ಅಲ್ಲಿ ನಿರಾಣಿ ಅವರು ಬಂದರು, ಅವರು ಊಟ ಮಾಡಿದ್ದಾರೆ. ನಾನು ಊಟ ಮಾಡಿದ್ದೇನೆ. ನಂತರ ನನ್ನ ಪಾಡಿಗೆ ನಾನು ಬಂದೆ, ಅವರು ಪಾಡಿಗೆ ಅವರು ಹೋದರು. ನಾನು ನನ್ನ ವಾಹನದಲ್ಲಿ ನಾನು ಬಂದೆ, ಅವರ ವಾಹನದಲ್ಲಿ ಅವರು ಹೋದರು. ಇಲ್ಲಿ ಎರಡು ಗಂಟೆ ಚರ್ಚೆ ನಡೆದಿದೆ ಅನ್ನೋದು ಏನು ಇಲ್ಲ ಎಂದು ತಿಳಿಸಿದರು.

'ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತ ನಾನು ಕೇಳುವುದಿಲ್ಲ'

ತಾವು ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿರುವ ಯತ್ನಾಳ್, ಭೇಟಿಯ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾತುಕತೆ, ಚರ್ಚೆ, ಸಂಧಾನ ಏನು ಆಗಿಲ್ಲ. ಮಾತುಕತೆ ಸಂಧಾನಗಳು ದೆಹಲಿಯಲ್ಲಿ ಆಗುತ್ತವೆ. ಈ ಬಗ್ಗೆ ವರಿಷ್ಠರು ಕರೆಯಿಸಿಕೊಳ್ತಾರೆ. ಯಾರಿಗೂ ಹೇಳಬೇಡಿ ನೀವು ಬನ್ನಿ ಎಂದು ಕರೆದು ಮಾತುಕತೆ ನಡೆಸುತ್ತಾರೆ. ನಾಳೆ ನಾನು ದೆಹಲಿ ಹೋಗಲಿದ್ದೇ‌ನೆ, ಎರಡು ದಿನ ಅಲ್ಲಿಯೇ ಉಳಿದುಕೊಳ್ಳಲಿದ್ದೇನೆ. ಆದರೆ ದೆಹಲಿಯಲ್ಲಿ ಯಾವುದೇ ನಾಯಕರನ್ನ ಭೇಟಿ ಮಾಡಲ್ಲ, ನನ್ನನ್ನು ಪಕ್ಷಕ್ಕೆ ತೆಗೆದುಕೊಳ್ಳಿ ಅಂತ ಯಾವುದೇ ಕಾರಣಕ್ಕೂ ಯಾರಿಗೂ ದಂಬಾಲು ಬೀಳುವುದಿಲ್ಲ. ಕಬ್ಬು ಬೆಳೆಯುವ ರೈತರ ಸಮಸ್ಯೆ ದೊಡ್ಡದಿದೆ. ಆದ್ದರಿಂದ ಈ ಬಗ್ಗೆ ಕೆಲವು ಮನವಿಗಳನ್ನು ನೀಡಬೇಕಿದೆ. ಆದ್ದರಿಂದಲೇ ದೆಹಲಿಗೆ ಹೋಗಬೇಕಿದೆ ಎಂದು ತಿಳಿಸಿದರು.

'ನನಗೆ ಬಹಳ ದಿನಗಳ ಹಿಂದೆಯೇ ಒಂದು ಸುಳಿವು ಸಿಕ್ಕಿದೆ'

ಕಳೆದ ಎರಡು ದಿನಗಳಿಂದ ನನಗೆ ಮಾತನಾಡದಿರುವವರು ಕೂಡ ಮಾತನಾಡಲು ಶುರು ಮಾಡಿದ್ದಾರೆ. ಯತ್ನಾಳ್ ಬಿಜೆಪಿ ಬರ್ತಾರೆ ಅಂತ ಕೆಲವರು ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರು ಯಾರು ಈಗ ಪಕ್ಷದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನಾವು ವಾಜಪೇಯಿ ಅವರ ಕಾಲದಲ್ಲಿ ಕೆಲಸ ಮಾಡಿದ್ದೇನೆ. ಆದರೆ ಈಗ ಪಕ್ಷದ ಕಾರ್ಯರ್ತರ ಭಾವನೆಯನ್ನು ಕೇಂದ್ರದ ನಾಯಕರು ಅರ್ಥ ಮಾಡಿಕೊಳ್ಳಬೇಕು. ವಿರೋಧ ಪಕ್ಷವಾಗಿ ಈಗಿನ ನಾಯಕರು ಹೇಗೆ ಕೆಲಸ ಮಾಡುತ್ತಿದ್ದಾರೆ ಅಂತ ವರದಿ ತೆಗೆದುಕೊಳ್ಳಬೇಕು. ನಮಗೆ ಕರೆದು ಅವಕಾಶ ನೀಡುವುದಾದರೆ, ಮೊದಲ ಸ್ಥಾನವೇ ನೀಡಬೇಕು. ನಾನು ಯಾವತ್ತು ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ, ರಾಜ್ಯ ಬಿಜೆಪಿ ನಾಯಕರನ್ನು ಜನ ಹೇಗೆ ನಂಬಬೇಕು. ಬಹಳ ದಿನಗಳ ಹಿಂದೆಯೇ ನಮಗೆ ವರಿಷ್ಠರು ಮಾತನಾಡಿದ್ದಾರೆ. ಅಲ್ಲಿಂದಲೇ ನನಗೆ ಒಂದು ಸುಳಿವು ಇದೆ, ಆದರೆ ನಾಯಕತ್ವ ಬದಲಾವಣೆ ಆಗಬೇಕಿದೆ. ಅದನ್ನು ಆ ಬಳಿಕ ಸಂಧಾನ ಪ್ರಕ್ರಿಯೆ ಚುರುಕುಗೊಳ್ಳುತ್ತದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯೇ ನನ್ನ ಮೊದಲ ಷರತ್ತು ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಬ್ರಿಟಿಷರ ಗುಲಾಮ RSSನಿಂದ ನಾವ್ ಕಲೀಬೇಕಾ? ಪಥಸಂಚಲನ ಕುರಿತು ಪ್ರಿಯಾಂಕ್ ಖರ್ಗೆ ಗುಡುಗು
ದಸರಾ ಹಬ್ಬದಂದೇ ಕೊಡಗು, ಮಂಡ್ಯದಲ್ಲಿ ಭೀಕರ ದುರಂತ; ಮಕ್ಕಳು ಸೇರಿ ನಾಲ್ವರ ಸಾವು