Dharma Dangal: ಹಿಂದೂ ಜಾತ್ರೆಗಳಲ್ಲಿ ಅನ್ಯಕೋಮಿನವರ ವ್ಯಾಪಾರ ನಿಷೇಧಿಸಿ: ಬಜರಂಗದಳ ಮನವಿ

By Sathish Kumar KH  |  First Published Feb 2, 2023, 11:26 AM IST

ದೇವಸ್ಥಾನದಿಂದ 100 ಮೀ. ಅನ್ಯಕೋಮಿನವರ ವ್ಯಾಪಾರ ಬೇಡ
ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಧರ್ಮದಂಗಲ್‌ ಮತ್ತೆ ಮುನ್ನೆಲೆಗೆ
ತುಮಕೂರು ಜಿಲ್ಲಾಧಿಕಾರಿಗೆ ಮನವಿ ನೀಡಿದ ಬಜರಂಗದಳ‌ ಕಾರ್ಯಕರ್ತರು


ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ 
ತುಮಕೂರು (ಫೆ.02): ಹಿಜಾಬ್, ಹಲಾಲ್ ಕಟ್ ಗಲಾಟೆಗಳ ಸಮಯದಲ್ಲಿ ಜೋರಾಗಿದ್ದ  ಧರ್ಮ ಸಂಘರ್ಷ ವಿಚಾರ, ಮೂರ್ನಾಲ್ಕು ತಿಂಗಳಿಂದ ತಣ್ಣಗಾಗಿತ್ತು. ಇದೀಗ ಹಿಂದೂ ದೇವತೆಗಳ‌ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂಬ ಕೂಗು ಕೇಳಿ‌ಬಂದಿದೆ. 

ಈ ಮೂಲಕ ತೆರೆ ಮರೆಗೆ ಸರಿದಿದ್ದ ಧರ್ಮ ದಂಗಾಲ್ ವಿಚಾರ ತುಮಕೂರಿನಲ್ಲಿ ಮತ್ತೇ ಮುನ್ನೆಲೆಗೆ ಬಂದಿದೆ. ಇದೇ ತಿಂಗಳು ಫೆಬ್ರವರಿ 25 ರಿಂದ ಮಾರ್ಚ 19 ರ ವರೆಗೆ ತುಮಕೂರು ಜಿಲ್ಲೆಯ ಪ್ರಸಿದ್ದ ಗುಬ್ಬಿಯ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಜಾತ್ರೆಯಲ್ಲಿ ಅನ್ಯಕೋಮಿನವರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಬಜರಂಗದಳದ ಹಾಗೂ ವಿಶ್ವಹಿಂದೂ ಪರಿಷತ್ ಒತ್ತಾಯಿಸಿದೆ. ಹಿಂದೂಗಳನ್ನು ಹೊರತುಪಡಿಸಿ ಅನ್ಯಕೋಮಿನವರಿಗೆ ನಿಷೇಧ ಹೇರುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಈಗಿರುವ ನಿಯಮದಂತೆ ದೇವಸ್ಥಾನದ ಆವರಣದಿಂದ 100 ಮೀಟರ್ ದೂರದವರೆಗೂ ಅನ್ಯಕೋಮಿನವರಿಗೆ ಅವಕಾಶಕೊಡಬಾರದು ಎಂದು ಮನವಿ ಮಾಡಲಾಗಿದೆ.

Tap to resize

Latest Videos

Udupi: ಧರ್ಮ ದಂಗಲ್‌ಗೆ ಕೌಂಟರ್ ನೀಡಲು ಎಸ್‌ಡಿಪಿಐ ರೆಡಿ

ಸೋಮೇಶ್ವರ ಜಾತ್ರೆಯಲ್ಲೂ ಧರ್ಮದಂಗಲ್‌ ನಡೆದಿತ್ತು:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿಸೆಂಬರ್‌ ತಿಂಗಳಲ್ಲಿ ಕೇಸರಿ ಕಲರವದೊಂದಿಗೆ ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರಿನ ವಿವಾದಿತ ದತ್ತಪೀಠದಲ್ಲಿ ವಿಜೃಂಭಣೆಯಿಂದ ದತ್ತಜಯಂತಿ ಮುಗಿಯಿತು. ಅದರ ಬೆನ್ನಲ್ಲೇ ಈಗ ಮತ್ತೊಂದು ಸುತ್ತಿನ ಧರ್ಮ ದಂಗಲ್‍ಗೆ ಕಾಫಿನಾಡೇ ವೇದಿಕೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಅದು ಕೇಸರಿ ಧ್ವಜದ ಹೆಸರಲ್ಲಿ. ಡಿ.21 ರಿಂದ 24ರವರೆಗೆ ಸೋಂಪುರದ ಸೋಮೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಆದರೆ, ಪ್ರಾರಂಭಕ್ಕೂ ಮುನ್ನವೇ ಧರ್ಮ ದಂಗಲ್‍ನ ಪೋಸ್ಟ್ ವೈರಲ್ ಆಗಿದ್ದು, ಹಿಂದೂಗಳ ಬಳಿ ವ್ಯಾಪಾರ ಮಾಡಿ ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿದ್ದಾರೆ. ನಮ್ಮ ದೇವರ ಹೆಸರಲ್ಲೇ ವ್ಯಾಪಾರ ಮಾಡುತ್ತಾರೆ. ನಮ್ಮ ದೇವರನ್ನೇ ಬೈಯುತ್ತಾರೆ. ಅವರ ಬಳಿ ವ್ಯಾಪಾರ ಏಕೆ ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳ ಬಳಿಯೇ ವ್ಯಾಪಾರ ಮಾಡುವುದರಿಂದ ಉಗ್ರ ಚಟುವಟಿಕೆಗೆ ಹೋಗೋ ಹಣವನ್ನ ತಡೆಯಿರಿ ಎಂದು ಮನವಿ ಮಾಡಿದ್ದರು. ಇದಕ್ಕಾಗಿ ಪ್ರತ್ಯೇಕವಾಗು ಅಭಿಯಾನವನ್ನೂ ಮಾಡಿ ಮುಸ್ಲಿಂ ವ್ಯಾಪಾರಿಗಳನ್ನು ವಿರೋಧಿಸಿ ಪೋಸ್ಟರ್‌ಗಳನ್ನು ಹಂಚಿಕೆ ಮಾಡಲಾಗಿತ್ತು. 

Chikkamagaluru: ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ರಥೋತ್ಸವಕ್ಕೂ ಮುನ್ನವೇ ಧರ್ಮ ದಂಗಲ್

ಅನ್ಯ ಧರ್ಮೀಯರಿಗೆ ವ್ಯಾಪಾರ ನಿಷೇಧಿಸಬೇಕು: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಡಿಸೆಂಬರ್‌ ತಿಂಗಳಲ್ಲಿ ಎರಡನೇ ಸುತ್ತಿನ ಧರ್ಮ ದಂಗಲ್ ಶುರುವಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾದ ವ್ಯಾಪಾರ ಬಹಿಷ್ಕಾರ, ಈ ಬಾರಿಯ ಜಾತ್ರೆಗಳಲ್ಲೂ ಕಂಡು ಬಂದಿತ್ತು. ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಕೊಡಿಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಈಗ ಪ್ರತಿದಿನ ಒಂದಿಲ್ಲೊಂದು ಗ್ರಾಮಗಳಲ್ಲಿ ಜಾತ್ರೆ ಮಹೋತ್ಸವಗಳು ನಡೆಯುತ್ತವೆ. ದೇವಾಲಯಗಳ ನಗರಿಯಲ್ಲಿ ಇನ್ನು ಮೂರ್ನಾಲ್ಕು ತಿಂಗಳ ಕಾಲ ಪ್ರತಿದಿನ ನಿತ್ಯೋತ್ಸವ ಇರುತ್ತದೆ. ಈ ಬಾರಿಯ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಬೇಕೆಂಬ ಒತ್ತಾಯ ಹಿಂದೂ ಸಂಘಟನೆಗಳು ಮಾಡಿವೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಹೋಡಿ ಹಬ್ಬದಲ್ಲೂ ಧರ್ಮ ದಂಗಲ್‌ ಆರಂಭವಾಗಿತ್ತು. ದೇವಾಲಯದ ರಥ ಬೀದಿಯಲ್ಲಿ ವ್ಯಾಪಾರ ಮಳಿಗೆಗಳನ್ನು ಹಾಕಲಾಗುತ್ತೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸ್ಥಳದಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಗ್ರಹಿಸಿತ್ತು.

click me!