ಗಡಿಗಿ ಚೆನ್ನಪ್ಪ ವೃತ್ತದ ಗಡಿಯಾರ ಸ್ಥಂಭ ತೆರವು: ರಾತ್ರೋರಾತ್ರಿ ಶ್ರೀರಾಮುಲು ನೇತೃತ್ವದಲ್ಲಿ ಕಾರ್ಯಾಚರಣೆ

By Govindaraj S  |  First Published Aug 24, 2022, 10:13 AM IST

ಅದು ಬಳ್ಳಾರಿಯ ಐಕಾನ್ ಹೆಸರಿಗೆ ಗಡಿಗಿ ಚೆನ್ನಪ್ಪ ವೃತ್ತವಾದ್ರೂ ಅದು ರಾಯಲ್ ಸರ್ಕಲ್ ಎಂದೇ ಫೇಮಸ್ ಇಲ್ಲಿರೋ ಗಡಿಯಾರ ಸ್ಥಂಭವೇ ಬಳ್ಳಾರಿ ಹೆಗ್ಗುರುತಾಗಿತ್ತು. 
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಆ.24): ಅದು ಬಳ್ಳಾರಿಯ ಐಕಾನ್ ಹೆಸರಿಗೆ ಗಡಿಗಿ ಚೆನ್ನಪ್ಪ ವೃತ್ತವಾದ್ರೂ ಅದು ರಾಯಲ್ ಸರ್ಕಲ್ ಎಂದೇ ಫೇಮಸ್ ಇಲ್ಲಿರೋ ಗಡಿಯಾರ ಸ್ಥಂಭವೇ ಬಳ್ಳಾರಿ ಹೆಗ್ಗುರುತಾಗಿತ್ತು. ಇದೀಗ ಈ ಗಡಿಯಾರ ಸ್ಥಂಭದ ಸ್ಥಳದಲ್ಲಿ ಹೊಸದೊಂದು 140 ಅಡಿ ಎತ್ತದ ಲೆಬಿನಾನ್ ಮಾದರಿಯ ಗಡಿಯಾರ ಸ್ಥಂಭ ನಿರ್ಮಾಣ ಮಾಡೋ ನಿಟ್ಟಿನಲ್ಲಿ ರಾತ್ರೋ ರಾತ್ರಿ ಕಾರ್ಯಚರಣೆ ಮಾಡಿ ಹಳೇಯ ಗಡಿಯಾರ ಸ್ಥಂಭವನ್ನು ತೆರವು ಮಾಡಲಾಗಿದೆ. ತಡರಾತ್ರಿವರೆಗೂ ನಡೆದ ಕಾರ್ಯಚರಣೆಯಲ್ಲಿ ರಾಯಲ್ ವೃತ್ತದಲ್ಲಿರೋ ಬೃಹತ್ ಗಡಿಯಾರ ಕಂಬವನ್ನು ಜಿಲ್ಲಾಡಳಿತವು  ಸಚಿವ ಶ್ರೀರಾಮುಲು ನೇತೃತ್ವದಲ್ಲಿ ತೆರವು ಮಾಡಿದೆ. 

Tap to resize

Latest Videos

undefined

140 ಅಡಿ ಎತ್ತರದ ಗಡಿಯಾರ ಸ್ಥಂಭ ನಿರ್ಮಾಣ: ಅಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ  ಆಗಸ್ಟ್ ಹದಿನೈದರಂದು ಈ ಸ್ಥಳದಲ್ಲಿ ನೂತನವಾಗಿ 140 ಅಡಿ ಎತ್ತರದಲ್ಲಿ ಲೆಬಿನಾನ್ ಮಾದರಿಯಲ್ಲಿ ಗಡಿಯಾರ ಸ್ಥಂಭವನ್ನು ನಿರ್ಮಾಣ ಮಾಡೋದಕ್ಕಾಗಿ ಭೂಮಿ ‌ಪೂಜೆ ಮಾಡಲಾಗಿತ್ತು. ಕಳೆದೆರಡು ದಿನಗಳಿಂದ ವೃತ್ತದಲ್ಲಿ ಸುತ್ತಲೂ ಇರೋ ಸ್ಥಳವನ್ನು ಅಗಲಿಕಿರಣ ಮಾಡೋ ಮೂಲಕ ಸ್ಥಳ ವಿಸ್ತರಣೆ ಮಾಡಲಾಗಿತ್ತು. ತಡರಾತ್ರಿ ಜನಸಂಚಾರ ಕಡಿಮೆಯಾಗ್ತಿದ್ದಂತೆ ಹಳೇಯದಾಗಿದ್ದ ಗಡಿಗಿ ಚೆನ್ನಪ್ಪ ಸ್ಮಾರಕ ಗಡಿಯಾರ ಕಂಬವನ್ನು ತೆರವು ಮಾಡಲಾಗಿದೆ.

ಮೂಲಸೌಕರ್ಯ ವಂಚಿತ ಹಂಪಾಪುರ; ಇಲ್ಲಿವರೆಗೂ ಸಾರಿಗೆ ಬಸ್ ಬಂದಿಲ್ಲ!

ಬಿಜೆಪಿ ಸರ್ಕಾರ ಬಂದಗಲೇ ಹೀಗೆನಾ?: ಬಿಜೆಪಿ ಸರ್ಕಾರ ಬಂದಾಗಲೇಲ್ಲ ಗಡಯಾರ ಕಂಬವನ್ನು ತೆರವು‌ ಮಾಡಿದೆ ಎನ್ನುವ ಆರೋಪವನ್ನು ಇದೀಗ ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ. ದಶಕಗಳಿಂದ ಇದ್ದ ಗಡಿಗಿ‌ ಚೆನ್ನಪ್ಪ ಸ್ಮಾರಕ ವೃತ್ತದ ಗಡಿಯಾರ ಸ್ಥಂಬವನ್ನು 2009ರಲ್ಲಿ ರೆಡ್ಡಿಗಳ ಆರ್ಭಟದ ವೇಳೆ ಕೆಡವಲಾಗಿತ್ತು. ಸಾಕಷ್ಟು ವಿವಾದದ ಜೊತೆಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನು ಮಾಡಿದ್ರು. ಆದರೆ ಹಠಕ್ಕೆ ಬಿದ್ದವರಂತೆ ಅಂದಿನ ಬಿಜೆಪಿ ನಾಯಕರು ಗಡಿಯಾರ ಸ್ತಂಭವನ್ನು ಇದೇ ರೀತಿ ರಾತ್ರೋರಾತ್ರಿ ಕೆಡವಿಹಾಕಿದ್ರು. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮತ್ತೊಂದು ಗಡಿಯಾರ ಸ್ಥಂಬ‌ ನಿರ್ಮಾಣ ಮಾಡೋ ಮೂಲಕ ಶ್ರೀರಾಮುಲು ಸೇರಿದಂತೆ ರೆಡ್ಡಿ ಸಹೋದರರಿಗೆ ಟಾಂಗ್ ನೀಡಿದ್ರು. 

ಆದರೆ ಇದೀಗ ದಾಖಲೆಯ 140 ಅಡಿ ಲೆಬಿನಾನ್ ಮಾದರಿಯ ಗಡಿಯಾರ ಸ್ಥಂಬ‌ ನಿರ್ಮಾಣ ಮಾಡ್ತಿರೋ‌‌ ಹಿನ್ನಲೆ, ಮತ್ತೊಮ್ಮೆ ಕಾಂಗ್ರೆಸ್  ಸರ್ಕಾರದಲ್ಲಿ ನಿರ್ಮಾಣವಾಗಿದ್ದ ಗಡಿಯಾರ ಸ್ಥಂಭ ತೆರವು ಮಾಡಲಾಗಿದೆ. ಒಟ್ಟಾರೇ ಬಿಜೆಪಿ ಸರ್ಕಾರ‌‌ ಬಂದಾಗಲೇಲ್ಲ ಈ ವೃತ್ತದಲ್ಲಿರೋ ಸ್ಥಂಭವನ್ನು ಕೆಡವುತ್ತೀರಾ ಎಂದು ಕಾಂಗ್ರೆಸ್ ಮುಖಂಡರು‌ ಪ್ರಶ್ನಿಸಿದ್ದಾರೆ. ಆದರೆ ನಗರ ಸೌಂದರ್ಯಕ್ಕೆ ಮತ್ತು ಬಳ್ಳಾರಿಯ ಐಕಾನ್ ಎಲ್ಲಕ್ಕಿಂತ ದೊಡ್ಡದಾಗಿರಬೇಕೆಂದು ಹೀಗಾಗಿ  7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗಡಿಯಾರ ಸ್ತಂಭ ನಿರ್ಮಾಣ ಮಾಡ್ತಿದ್ದೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

ರಾತ್ರಿಯೀಡಿ ಕಾಂಗ್ರೆಸ್ ಹೈಡ್ರಾಮ: ಇನ್ನೂ ತಡರಾತ್ರಿ ಕ್ಲಾಕ್ ಟವರ್ ಕೆಡವಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಕಾರ್ಯದರ್ಶಿ ಆಂಜನೇಯಲು ಮತ್ತು ಜಿಲ್ಲಾಧ್ಯಕ್ಷ ರಫೀಕ್ ನೇತೃತ್ವದಲ್ಲಿ ‌ಪ್ರತಿಭಟನೆ ಮಾಡಿದ್ರು. 2009ರಲ್ಲೂ ಇದೇ ರೀತಿ ಇಲ್ಲರೋ‌ ಗಡಿಗಿ ಚೆನ್ನಪ್ಪ ವೃತ್ತದ ಗಡಿಯಾರ ಸ್ಥಂಭ ಕೆಡವಲಾಯ್ತು. ಇದೀಗ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ನಿರ್ಮಾಣ ಮಾಡಿದ ಮತ್ತೊಂದು ಟವರ್ ನಾಶ ಮಾಡಲಾಗಿದೆ. ಇದೆಲ್ಲ ಯಾಕಾಗಿ ಮಾಡ್ತಿದ್ದೀರಾ..? ಕಾಂಗ್ರೆಸ್ ಹೆಗ್ಗುರುತು ಇರೋದೇ ಬೇಡ್ವಾ ಎಂದು ಪ್ರಶ್ನಿಸಿದ್ರು. 

ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ಪಂಗನಾಮ; ಕೋಟ್ಯಂತರ ರೂ. ಹಣದೊಂದಿಗೆ ಎಸ್ಕೆಪ್!

ಅಲ್ಲದೇ ನೂತನ ಟವರ್ ನಿರ್ಮಾಣ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿಲ್ಲ. ಈ ರೀತಿ ಬಿಜೆಪಿ ಸರ್ಕಾರ ಬಂದಾಗಲೇಲ್ಲ ಟವರ್ ಕೆಡವಿದ್ರೆ ಹೇಗೆ ಇದು ಎರಡನೇ ಬಾರಿ ಈ ರೀತಿ ‌ಮಾಡ್ತಿರೋದು.ಅಷ್ಟಕ್ಕೂ ಯಾರ ಅನುಮತಿ ಮೇರೆಗೆ ಕೆಡವಿದ್ರು ಎಂದು ಆರೋಪಿಸಿದ್ರು. ಆದ್ರೇ ಸ್ಥಳಕ್ಕೆ ಬಂದ ಪಾಲಿಕೆ ಆಯುಕ್ತ ರುದ್ರೇಶ್ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದಿದ್ದಾರೆ..  ಅಭಿವೃದ್ಧಿಗೆ ಸಹಕಾರ ಮಾಡ್ತೆವೆ ಆದ್ರೇ ಅಧಿಕಾರದಲ್ಲಿರೋ ಕಾಂಗ್ರೆಸ್ ‌ಪಾಲಿಕೆ ಸದಸ್ಯರಿಗೆ ಕನಿಷ್ಠ ಗಮನಕ್ಕೆ ತರದೇ ಇದ್ರೇ ಹೇಗೆ ಅನ್ನೋದೇ ಪಾಲಿಕೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

click me!