Ballari Farmers: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಉತ್ತರ: 3 ದಿನ ಭಗೀರಥ ಪ್ರಯತ್ನ!

Published : Sep 23, 2026, 11:13 AM IST
Kurugodu

ಸಾರಾಂಶ

ಕುರುಗೋಡು ಬಳಿ ತುಂಗಭದ್ರಾ ಉಪ ವಿತರಣಾ ನಾಲೆಯಲ್ಲಿ ಹೂಳು ಮತ್ತು ಮುಳ್ಳಿನ ಗಿಡಗಳು ಬೆಳೆದು ರೈತರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಅಧಿಕಾರಿಗಳು ಸ್ಪಂದಿಸದ ಕಾರಣ, ರೈತರು ತಾವೇ 1.5 ಲಕ್ಷ ರೂ. ಸಂಗ್ರಹಿಸಿ ಕಾಲುವೆಯನ್ನು ಸ್ವಚ್ಛಗೊಳಿಸಿದ್ದಾರೆ.

ಕುರುಗೋಡು: ಕಾಲುವೆಯಲ್ಲಿ ಬೆಳೆದಿರುವ ಮುಳ್ಳಿನ ಗಿಡ ಮತ್ತು ಹೂಳನ್ನು ರೈತರು ಸ್ವಂತ ವೆಚ್ಚದಲ್ಲಿ ತೆರುವುಗೊಳಿಸಿ ಇಲಾಖೆ ಅಧಿಕಾರಿಯ ಗಮನ ಸೆಳೆದಿದ್ದಾರೆ.

ತಾಲೂಕಿನ ಸೋಮಲಾಪುರ ಕ್ರಾಸ್ ನಿಂದ ಓರ್ವಾಯಿ ಕ್ರಾಸ್‌ಗೆ ತೆರಳುವ ಮಾರ್ಗ ಮಧ್ಯ ಹರಿಯುವ ತುಂಗಭದ್ರಾ ಕೆಳಮಟ್ಟದ ಕಾಲುವೆಯ ಉಪ ವಿತರಣಾ ನಾಲೆ 16 ಕಿಮೀ ವ್ಯಾಪ್ತಿ ಹೊಂದಿದ್ದು ತಿಮ್ಮಣ್ಣ ಕ್ಯಾಂಪ್, ರಾಮಚಂದ್ರಾಪುರ ಕ್ಯಾಂಪ್, ನಾಗಾರ್ಜುನ ಕ್ಯಾಂಪ್ ಮತ್ತು ಸೂಗೂರು ಗ್ರಾಮಗಳ ಮೂರು ಸಾವಿರ ಎಕರೆ ಭೂಮಿ ಅಧಿಕೃತವಾಗಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ.

ಕಾಲುವೆ ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ 

ಕಾಲುವೆಯಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ದಟ್ಟವಾಗಿ ಬೆಳೆದಿರುವ ಮುಳ್ಳಿನ ಗಿಡ ಕಾಲಕಾಲಕ್ಕೆ ತೆರುವುಗೊಳಿಸದೆ ಇಲಾಖೆ ನಿರ್ಲಕ್ಷ್ಯ ತೋರಿರುವುದು ಒಂದು ಸಮಸ್ಯೆಯಾದರೆ ಮೆಲ್ಬಾಗದ ರೈತರು ಅನಧಿಕೃತವಾಗಿ ನೀರು ಬಳಸಿಕೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿದ್ದು, ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರು ನೀರಿನ ಬವಣೆ ಎದುರಿಸುವಂತಾಗಿದೆ. ಮಳೆಯಿಲ್ಲದೆ ಬರಗಾಲ ಆವರಿಸಿರುವ ಜತೆಗೆ ತೀವ್ರ ಬಿಸಿಲಿನ ತಾಪಕ್ಕೆ ಬೆಳೆದ ಬೆಳೆ ಭೂಮಿ ಬಿಟ್ಟು ಮೇಲಕ್ಕೇಳುತ್ತಿಲ್ಲ. ಸಂಕಷ್ಟ ಪರಿಸ್ಥಿತಿಯಿಂದ ಕಂಗಾಲಾಗಿರುವ ನಾವು ಅನಿವಾರ್ಯವಾಗಿ ಕಾಲುವೆ ಸ್ವಚ್ಛತೆಗೆ ಮುಂದಾಗಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.

ರೈತರಿಂದ ₹1.5 ಲಕ್ಷ ಹಣ ಸಂಗ್ರಹ

ಈ ಸಂದರ್ಭದಲ್ಲಿ ರೈತರಾದ ಶಿವರುದ್ರಗೌಡ, ನಾಗರಾಜ, ತಿರುಪತಿರಾವ್, ಶಿವಪ್ಪ, ರಾಜು, ಜಡೇಶ, ಕಾಸೀಂ ಸಾಬ್, ರುದ್ರಪ್ಪ, ಮೌಲಪ್ಪ, ಕೃಷ್ಣ ಮತ್ತು ಮಲ್ಲಪ್ಪ ಇದ್ದರು. ಕಾಲುವೆ ಸ್ವಚ್ಛತೆಗೆ ಅಧಿಕಾರಿಗಳು ಸ್ಪಂದಿಸಲಿಲ್ಲ. ರೈತರಿಂದ ₹1.5 ಲಕ್ಷ ಹಣ ಸಂಗ್ರಹಿಸಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಮೂರು ದಿನದಲ್ಲಿ ಕಾಲುವೆಯಲ್ಲಿನ ಹೂಳು ಮತ್ತು ಮುಳ್ಳಿನ ಗಿಡ ತೆರುವುಗೊಳಿಸಿದ್ದೇವೆ ಎಂದು ರೈತ ಶಿವರುದ್ರಗೌಡ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬೆಳೆ ರಕ್ಷಣೆಗೆ ದಿನಕ್ಕೆ 5 ಸಾವಿರ ಬಾಡಿಗೆ ಟ್ಯಾಂಕರ್‌ನಿಂದ ನೀರುಣಿಸಿದ ಕೊಟ್ಟೂರಿನ ರೈತ
e-Aasthi 2.0: ಬೆಂಗಳೂರು ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್: ‘ಇ-ಆಸ್ತಿ 2.0’ ಲೋಕಾರ್ಪಣೆ, ಏನೆಲ್ಲ ಸೌಲಭ್ಯ? ಇಲ್ಲಿದೆ ಮಾಹಿತಿ