
ಬೆಂಗಳೂರು [ಸೆ.09]: ಕೆಂಗೇರಿಯ ರಾಯಲ್ ಐರಾವತ ಕನ್ವೆನ್ಷನ್‌ನಲ್ಲಿ ಭಾನುವಾರ ಆಯೊಜಿಸಲಾಗಿದ್ದ ‘ಐರಾವತ ಬಾಗಿನ’ ಸಮರ್ಪಣಾ ಸಮಾರಂಭದಲ್ಲಿ ಉದ್ಯಮಿ ರಾಚಪ್ಪ ಅವರು ಗಾಂಧೀಜಿ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅವರಿಗೆ ಬಾಗಿನ ನೀಡಿದರು.
ದೇಗುಲ ಮಠದ ಸ್ವಾಮೀಜಿ ಮಾತನಾಡಿ, ತವರು ಹಾಗೂ ಗಂಡನ ಮನೆಯ ಶ್ರೇಯಸ್ಸಿನಲ್ಲಿ ಹೆಣ್ಣು ಮಗಳ ಪಾತ್ರ ಅತ್ಯಂತ ಗಮನಾರ್ಹ. ಅದನ್ನು ಗೌರವಿಸಿ ಆಕೆಯ ಸೇವೆಯ ಋುಣ ಸಂದಾಯದ ಸಂಕೇತವಾಗಿ ಬಾಗಿನ ಕೊಡುವ ಪ್ರತೀತಿ ಅನಾದಿ ಕಾಲದಿಂದ ನಡೆದು ಬರುತ್ತಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಚಂದ್ರಕುಮಾರಿ ಬಿ.ಆರ್.ಶೆಟ್ಟಿ, ಸತ್ಯಭಾಮ ಚಂದ್ರಶೇಖರ ಕಂಬಾರ ಹಾಗೂ ಡಾ.ಆರತಿ ಕೃಷ್ಣ ಅವರಿಗೆ ಬಾಗಿನ ನೀಡಿ ಗೌರವಿಸಲಾಯಿತು. ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಡಾ.ಮನು ಬಳಿಗಾರ್, ಸರ್ವೋತಮ್ ಶೆಟ್ಟಿ, ಉದ್ಯಮಿ ರಾಚಪ್ಪ ಹೋಳೂರು, ವೇಮಗಲ್ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.