ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುಗೆ ಶೌಚಾಲಯ ನೀರಲ್ಲಿ ಸ್ನಾನ!

By Kannadaprabha News  |  First Published Sep 7, 2020, 6:57 AM IST

ಆರೋಗ್ಯ ಕೇಂದ್ರದಲ್ಲಿ ಜನಿಸಿದ ಮಗುವಿಗೆ ಶೌಚಾಲಯದ ನೀರಿನಲ್ಲಿ ಸ್ನಾನ ಮಾಡಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.


 ಸಾಗರ (ಸೆ.07): ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ರಾತ್ರಿ ನವಜಾತ ಶಿಶುವಿಗೆ ಶೌಚಾಲಯದ ನೀರಿನಲ್ಲಿ ಸ್ನಾನ ಮಾಡಿಸಲಾಗಿದೆ ಎಂದು ಮಗು ಪೋಷಕರು ಆರೋಪಿಸಿದ್ದಾರೆ.

ತಾಳಗುಪ್ಪ ಗ್ರಾಪಂ ವ್ಯಾಪ್ತಿಯ ಬೆಳ್ಳೆಣ್ಣೆ ಗ್ರಾಮದ ವಿದ್ಯಾ ಎಂಬುವರು ಶನಿವಾರ ಹೆರಿಗೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು.

Tap to resize

Latest Videos

ಬೆಳಗಿನ ಜಾವ 4.30ಕ್ಕೆ ಹೆರಿಗೆಯಾಗಿದ್ದು, ಜನಿಸಿದ ಹೆಣ್ಣುಮಗುವಿಗೆ ಆರೋಗ್ಯ ಸಹಾಯಕಿಯರು ಜನರಲ್‌ ವಾರ್ಡ್‌ ಬಳಿ ಇರುವ ಶೌಚಾಲಯದ ನಲ್ಲಿ ನೀರಿನಲ್ಲಿ ಸ್ನಾನ ಮಾಡಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಆದರೆ, ಸಮುದಾಯ ಕೇಂದ್ರದ ಮೂಲಗಳು ಶಿಶುಗೆ ಶೌಚಾಲಯದ ನೀರಿನಲ್ಲಿ ಸ್ನಾನ ಮಾಡಿಸಿರುವ ಆರೋಪವನ್ನು ನಿರಾಕರಿಸಿವೆ.

ಈ ರೀತಿ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತವೆ. ಇದೀಗ ಈ ಘಟನೆಯೂ ನಿರಲ್ಕ್ಷ್ಯತೆಗೆ ಒಂದು ಉದಾ ಹರಣೆಯಾಗಿದೆ. 

click me!