ಕೊರೋನಾ ಭೀತಿಯಲ್ಲೂ ಸರ್ಕಾರಕ್ಕೆ ಶಾಕ್ ಕೊಟ್ಟ ಆಯುಷ್​ ವೈದ್ಯರು

Published : May 24, 2020, 07:47 PM ISTUpdated : May 25, 2020, 12:15 PM IST
ಕೊರೋನಾ ಭೀತಿಯಲ್ಲೂ ಸರ್ಕಾರಕ್ಕೆ ಶಾಕ್ ಕೊಟ್ಟ ಆಯುಷ್​ ವೈದ್ಯರು

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲೂ ಕರ್ತವ್ಯ ನಿರ್ವಹಿಸದೇ ​ ವೈದ್ಯರ ಮುಷ್ಕರ….ಮನೆಯಲ್ಲಿ ಇದ್ದು ಮುಷ್ಕರಕ್ಕೆ ಬೆಂಬಲ…ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರೆ ನೀಡಿರುವ ಮುಷ್ಕರಕ್ಕೆ ಮುಂದಾದ ಆಯುಷ್​ ವೈದ್ಯರು….

"

ಬಾಗಲಕೋಟೆ, (ಮೇ.24): ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಆಯುಷ್​ ವೈದ್ಯಾಧಿಕಾರಿಗಳ ಸಂಘದ ಆಶ್ರಯದ ಆಯುಷ್​ ವೈದ್ಯರು ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ತವ್ಯವವನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಇದ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾ ಘಟಕವು ಸಹ ಮುಷ್ಕರಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಆಯುಷ್ ಇಲಾಖೆಯಲ್ಲಿ 80 ಮಂದಿ ಆಯುಷ್​ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಇವರೆಲ್ಲಾ ಕೋವಿಡ್​ ಸಂಭಂದಿತವಾಗಿ ಗಂಟಲು ದ್ರವ ಪರೀಕ್ಷೆ, ಕಂಟೋನ್ಮೇಂಟ, ಕ್ವಾರಂಟೈನ್ ಡ್ಯೂಟಿ ಹಾಗೂ ಚೆಕ್​ ಪೋಸ್ಟ್​ ಡ್ಯೂಟಿ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ಆರೋಗ್ಯ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಆನೇಕಲ್: ಪ್ರಾಣಾಪಾಯದಿಂದ ಪಾರಾದ ಕೊರೋನಾ ವಾರಿಯರ್ಸ್

ಹೀಗಿರುವಾಗ ಆಯುಷ್ ವೈದ್ಯರು ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಭದ್ರತೆಗಾಗಿ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಾ ಬಂದ್ರೂ ಸರ್ಕಾರ ಸ್ಪಂದಿಸಲಿಲ್ಲ, ಹೀಗಾಗಿ ಆಯುಷ್​ ವೈದ್ಯರು ಅನಿರ್ದಿಷ್ಟ ಅವಧಿಗೆ ಕರ್ತವ್ಯಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. 

ಈ ಮುಷ್ಕರಕ್ಕೆ ಜಿಲ್ಲೆಯಲ್ಲಿ ಎಎಪ್ಐ ಸಂಘವು ತಮ್ಮ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್​ ಬಂದ್​​ ಮಾಡುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದ್ದು, ಶೀಘ್ರ ಸರ್ಕಾರ ಸ್ಪಂದಿಸಬೇಕೆಂದು ಮುಷ್ಕರ ನಿರತ ವೈದ್ಯರು ಆಗ್ರಹಿಸಿದ್ದಾರೆ.
 
ಶ್ರೀರಾಮುಲು ಭರವಸೆ
ಎಂಬಿಬಿಎಸ್ ವೈದ್ಯರಂತೆ  ಆಯುಷ್ ವೈದ್ಯರ ವೇತನ ತಾರತಮ್ಯ ನಿವಾರಿಸುವ ಕುರಿತು ಮಂಗಳವಾರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ.

ಆಯುಷ್ ವೈದ್ಯರ ಬೇಡಿಕೆ ನ್ಯಾಯಸಮ್ಮತವಾಗಿದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಜೊತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆಯುಷ್ ಮತ್ತು ಎಂಬಿಬಿಎಸ್ ವೈದ್ಯರ ಮಧ್ಯೆ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
               

PREV
click me!

Recommended Stories

NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ