ಒಂದ್ಕಡೆ ರಸ್ತೆ ಮೇಲೆ ಡ್ಯಾನ್ಸ್ ಮಾಡ್ತಾ ಸಾಗ್ತಿರೋ ಆಟೋಗಳು. ಕಿತ್ತೋಗಿರೋ ದಾರಿ ರಿಪೇರಿ ಮಾಡ್ಸಿ ಅಂತಾ ರಸ್ತೆ ಬ್ಲಾಕ್ ಮಾಡಿರೋ ಚಾಲಕರು. ಅಧಿಕಾರಿಯನ್ನ ರಸ್ತೆಯಲ್ಲೇ ನಿಲ್ಲಿಸಿ ತರಾಟೆ.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಮೇ.05): ಒಂದ್ಕಡೆ ರಸ್ತೆ ಮೇಲೆ ಡ್ಯಾನ್ಸ್ ಮಾಡ್ತಾ ಸಾಗ್ತಿರೋ ಆಟೋಗಳು. ಕಿತ್ತೋಗಿರೋ ದಾರಿ ರಿಪೇರಿ ಮಾಡ್ಸಿ ಅಂತಾ ರಸ್ತೆ ಬ್ಲಾಕ್ ಮಾಡಿರೋ ಚಾಲಕರು (Auto Drivers). ಅಧಿಕಾರಿಯನ್ನ ರಸ್ತೆಯಲ್ಲೇ ನಿಲ್ಲಿಸಿ ತರಾಟೆ. ಮತ್ತೊಂದ್ಕಡೆ ನಗರಸಭೆಯ ಮೀಟಿಂಗ್ ಹಾಲ್‌ಗೆ ತೆರಳಿ ಅಧಿಕಾಗಲು ಹಾಗೂ ಜನ ಪ್ರತಿನಿಧಿಗಳಿಗೆ ಕ್ಲಾಸ್. ಇಷ್ಟೆಲ್ಲ ಹೈಡ್ರಾಮಾಕೆ ಕಾರಣವಾಗಿದ್ದು ಕೆಟ್ಟ ರಸ್ತೆ. ಗದಗ (Gadag) ನಗರದ ಅಂಬೇಡ್ಕರ್ ವೃತ್ತದಿಂದ ಕಳೆಯ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದವರೆಗಿನ ಗುಂಡಿಬಿದ್ದ ರಸ್ತೆಗಳು ಆಟೋ ಚಾಲಕರ ಪಾಲಿಗೆ ಯಮ ಕಂಟಕವಾಗಿವೆ. ಕಳೆದ ಕೆಲ ದಿನಗಳಿಂದ ರಸ್ತೆ ಸಂಪೂರ್ಣವಾಗಿ ಕೆಟ್ಟಿದೆ.
ರಸ್ತೆ ಮೇಲೆ ಡ್ರೈನೇಜ್ ನೀರು (Drainage Water) ಹರಿಯುತಿದ್ದು, ಕಂದಕದಂತ ಗುಂಡಿಗಳು ಬಿದ್ದಿವೆ. ಹೀಗಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.ಇದರಿಂದ ಆಕ್ರೋಶಗೊಂಡಿದ್ದ ಗದಗ ಆಟೋ ಚಾಲಕರು ಹೊಸ ಬಸ್ ನಿಲ್ದಾಣ ರಸ್ತೆ ಬ್ಲಾಕ್ ಮಾಡಿ ಪ್ರತಿಭಟನೆ ಮಾಡಿದರು. ಕೆಲ ಹೊತ್ತಿನ ನಂತರ ಹಳೆಯ ಜಿಲ್ಲಾ ಕಚೇರಿ ಸರ್ಕಲ್‌ಗೆ ತೆರಳಿ ವಾಹನಗಳನ್ನ ತಡೆದರು. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ನಿಲ್ದಾಣದಿಂದ ಬಸ್ ಆಚೆ ಬರದೆ ನಿಂತಿದ್ದವು. ಹೀಗಾಗಿ ಜನ ನಡೆದುಕೊಂಡೇ ನಗರದ ಕಡೆ ಬರುತ್ತಿದ್ದರು.
Gadaga ಅಪ್ರಾಪ್ತೆಯ ಕಿಡ್ನಾಪ್ ಮಾಡಿ ಅತ್ಯಾಚಾರ, ಬಿಜೆಪಿ ಮುಖಂಡನ ವಿರುದ್ಧ ಆರೋಪ!
ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಬರುತ್ತಿದೆ. ಮಳೆ ಬಂದ ನಂತರದಲ್ಲಂತೂ ರಸ್ತೆ ಸಂಪೂರ್ಣ ಹಾಳಾಗಿವೆ. ಡ್ರೈನೇಜ್ ಉಕ್ಕುತ್ತಿವೆ. ಇದರಿಂದಾಗಿ ಪಾದಚಾರಿಗಳು ಇಲ್ಲಿ ಓಡಾಡೋಗಾಗೇ ಇಲ್ಲ. ಹೊಸ ಬಸ್ ಸ್ಟಾಪ್, ಮುಂಡರಗಿ ಕೊಪ್ಪಳ ಮಾರ್ಗವಾಗಿ ಸಂಚರಿಸೋ ಜನರು ಇದೇ ರಸ್ತೆ ಬಳಸಬೇಕು. ಇದೇ ರಸ್ತೆ ಬಳಸೋ ಅನಿವಾರ್ಯತೆ ಇರೋರು ಜೀವ ಕೈಯಲ್ಲಿ ಹಿಡ್ಕೊಂಡು ಬೈಕ್ ಓಡ್ಸೋ ಪರಿಸ್ಥಿತಿ ಇದೆ. ರಸ್ತೆಯಲ್ಲಿ ಓಡಾಡುವಾಗಿ ಕೆಲವೊಬ್ಬರು ಬಿದ್ದಿದಾರಂತೆ. ಆಟೋಗಳ ಇಂಜಿನ್‌ಗಳು ಹಾಳಾಗಿವೆಯಂತೆ.
ನರಗುಂದದಲ್ಲಿ ಹೈಡ್ರಾಮಾ : ಸಚಿವರ ಮನೆ ಮುಂದೆ ಧರಣಿ ನಡೆಸಲು ಬಂದ ದಿಂಗಾಲೇಶ್ವರ ಶ್ರೀಗೆ ತಡೆ
ಆಟೋ ಮೆಂಟೆನೆನ್ಸ್ ತುಂಬ ಕಷ್ಟ ಆಗ್ತಿದ್ಯಂತೆ. ಇದರಿಂದದ ರೋಸಿ ಹೋಗಿದ್ದ ಆಟೋ ಚಾಲಕರು ಏಕಾ ಏಕಿ ರಸ್ತೆ ತಡೆ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಲೋಕೋಪಯೋಗಿ ಸಚಿವ ಸಿಸಿ ಪಾಟೀಲರ ತವರು ಜಿಲ್ಲೆಯಲ್ಲೇ ರಸ್ತೆ ಹದಗೆಟ್ಟು ಹೋಗಿವೆ. ಜಿಲ್ಲೆಯ ರಸ್ತೆಗಳು ಸಿಎಂ ಬಂದಾಗಲೇ ಸರಿಯಾಗುತ್ತವೆ ಅನ್ನೊ ಆರೋಪವೂ ಇದೆ. ಸಚಿವ ಸಿಸಿ ಪಾಟೀಲರು (CC PAtil) ಈ ಬಗ್ಗೆ ಗಮನ ಹಿರಿಸಿ ಅಧಿಕಾರಿಗಳಿಗೆ ನಿರ್ದೇಶಕ ಕೊಡಬೇಕ.. ಈ ಮೂಲಕ ರಸ್ತೆ ಸಮಸ್ಯೆಯನ್ನ ಬಗೆಹರಿಸಬೇಕು.