
ಅಬುದಾಭಿ: ಉಡುಪಿ ಜಿಲ್ಲೆಯ ಕಿದಿಯೂರು ಮೂಲದ ಸದ್ಯ ಬಹ್ರೈನ್ನಲ್ಲಿ ನೆಲೆಸಿರುವ ಅರುಣ್ ಕೃಷ್ಣಪ್ಪ ಕಿದಿಯೂರು ಅವರುಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ 25 ಲಕ್ಷ ರು. ಮೌಲ್ಯದ 200 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿಯನ್ನು ಗೆದ್ದಿದ್ದಾರೆ. ಇದೇ ಲಾಟರಿಯಲ್ಲಿ ಬೆಂಗಳೂರಿನ ಎಂಜಿನಿಯರ್ ಸದಾತುಲ್ಲಾ ಕೂಡ ವಿಜೇತರಾಗಿದ್ದಾರೆ.
ಅಕ್ಟೋಬರ್ 3ನೇ ವಾರದಲ್ಲಿ ನಾಲ್ವರು ಭಾರತೀಯರು ಗೆದ್ದಿದ್ದು ಅದರಲ್ಲಿ ಅರುಣ್ ಕೂಡ ಒಬ್ಬರು. 45 ವರ್ಷದ ಅರುಣ್ ಕಳೆದ 23 ನಿವಾಸಗಳಿಂದ ಬಹ್ರೈನ್ನಲ್ಲಿ ನೆಲೆಸಿದ್ದು, ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹಲವು ಸಮಯಗಳಿಂದ ಬಿಗ್ ಟಿಕೆಟ್ ಅಬುಧಾಬಿ ಟಿಕೆಟ್ ಖರೀದಿಸುತ್ತಿದ್ದರು. 4 ತಿಂಗಳ ಹಿಂದಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದು, ಅದೃಷ್ಟ ಖುಲಾಯಿಸಿದೆ. ‘ ಗೆಲುವು ಸಾಧಿಸಿರುವುದು ತುಂಬಾ ಖುಷಿಯಾಗಿದೆ. ಇದು ಅನಿರೀಕ್ಷಿತವಾಗಿತ್ತು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅರುಣ್ ಜತೆಗೆ ಇನ್ನೂ ಮೂರು ಭಾರತೀಯರು ಲಕ್ಕಿ ಡ್ರಾ ವಿಜೇತರಾಗಿದ್ದಾರೆ. ಜಿಜೋಯ್ ವಿಶ್ವನ್, ಸದಾತುಲ್ಲಾ ಶರೀಫ್ ಮತ್ತು ಮನೀಷಾ ಹರ್ಷಲ್ ಕಸತ್ ಕೂಡ ವಿಜೇತರಾಗಿದ್ದಾರೆ. ಈ ಪೈಕಿ ಸಿವಿಲ್ ಎಂಜಿನಿಯರ್ ಆಗಿರುವ ಸದಾತುಲ್ಲಾ ಬೆಂಗಳೂರಿನ ನಿವಾಸಿಯಾಗಿದ್ದು ವರ್ಷದ ಹಿಂದೆ ದುಬೈಗೆ ತೆರಳಿದ್ದರು.
ಈ ವರ್ಷದ ಫೆಬ್ರವರಿಯಲ್ಲಿ ಅಬುಧಾಬಿಯಲ್ಲಿ ಬಿಗ್ ಟಿಕೆಟ್ ಡ್ರಾದಲ್ಲಿ ಉಡುಪಿಯ ಉದ್ಯಾವರ ಮೂಲದ ಶಾಂತನು ಶೆಟ್ಟಿಗಾರ್ ಸುಮಾರು 49 ಕೋಟಿ ರು. ಗೆದ್ದಿದ್ದರು.
ಉಡುಪಿ ರೈಲ್ವೆ ಯಾತ್ರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಧೀರಜ್ ಎನ್ ಶಾಂತಿಯವರ ಅಧ್ಯಕ್ಷತೆಯಲ್ಲಿ ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಅಮೃತ್ ಯೋಜನೆಯಂತಹ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಘ ನಿರಂತರ ಹೋರಾಟ ನಡೆಸಲು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು - ಜನಪ್ರತಿನಿಧಿಗಳನ್ನು ಭೇಟಿಯಾಗಿ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ಸಂಘದ ನಿರ್ದೇಶಕರು ಮತ್ತು ಸದಸ್ಯರಾದ ಸದಾನಂದ ಅಮೀನ್, ರಾಧಾಕೃಷ್ಣ ರಾವ್, ಜಯರಾಮ್ ಪ್ರಭು, ರತ್ನಶ್ರೀ ಆಚಾರ್ಯ, ಹೇಮನಾಥ ಹೆಗ್ದೆ, ಪಿ ಎನ್ ರವೀಂದ್ರ, ಅಪ್ರಾಯ ಶೆಟ್ಟಿಗಾರ್, ಮಹಮ್ಮದ್ ಮೌಲಾ, ಶ್ರೀನಿವಾಸ ಶೆಟ್ಟಿ ತೊನ್ಸೆ, ರವೀಶ್ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ತಿಲಕನಾಥ್ ಮಂಜೇಶ್ವರ, ಐವಾನ್ ಡಿಸೋಜ, ನಾರಾಯಣ ಕಾಂಚನ್ ಮತ್ತಿತರರು ಹಾಜರಿದ್ದರು.
ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ವಾರ್ಷಿಕ ವರದಿ, ಕೋಶಾಧಿಕಾರಿ ಯು. ಅಜಿತ್ ಕುಮಾರ್ ಶೆಣೈ ಅವರು ಲೆಕ್ಕಪತ್ರ ಮಂಡನೆ ಮಾಡಿದರು. ನಿರ್ದೇಶಕರಾದ ಜನಾರ್ದನ್ ಕೋಟ್ಯಾನ್ ಸ್ವಾಗತಿಸಿ, ಜಾನ್ ರೆಬೆಲ್ಲೊ ವಂದಿಸಿದರು. ಪ್ರಭಾಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.