ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು

Kannadaprabha News   | Kannada Prabha
Published : Sep 10, 2025, 05:51 AM IST
annabhagya

ಸಾರಾಂಶ

ಬಡವರಿಗೆ ಸರ್ಕಾರದಿಂದ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ ವಿದೇಶಕ್ಕೆ ರಫ್ತು ಮಾಡಲು ಭಾರಿ ಪ್ರಮಾಣದಷ್ಟು ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ ಯಾದಗಿರಿ ಜಿಲ್ಲೆ ಗುರುಮಠಕಲ್‌ನ 2 ರೈಸ್‌ಮಿಲ್‌ಗಳನ್ನು ಜಪ್ತಿ ಮಾಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಯಾದಗಿರಿ : ಬಡವರಿಗೆ ಸರ್ಕಾರದಿಂದ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ ವಿದೇಶಕ್ಕೆ ರಫ್ತು ಮಾಡಲು ಭಾರಿ ಪ್ರಮಾಣದಷ್ಟು ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ ಯಾದಗಿರಿ ಜಿಲ್ಲೆ ಗುರುಮಠಕಲ್‌ನ 2 ರೈಸ್‌ಮಿಲ್‌ಗಳನ್ನು ಜಪ್ತಿ ಮಾಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ರೈಸ್‌ಮಿಲ್‌ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ದಾಸ್ತಾನು ಸಂಗ್ರಹಕ್ಕೆ ಸಂಬಂಧಿಸಿದಂತೆ ಗುರುಮಠಕಲ್‌ ಪೊಲೀಸ್‌ ಠಾಣೆಯಲ್ಲಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಹಾಗೂ ಶ್ರೀ ಲಕ್ಷ್ಮೀ ಬಾಲಾಜಿ ಇಂಡಸ್ಟ್ರೀಸ್‌ ಪಾಲುದಾರರು/ಮಾಲೀಕರಾದ ನರೇಂದ್ರ ರಾಠೋಡ್‌, ಅಯ್ಯಪ್ಪ ರಾಠೋಡ್‌, ಚಂದ್ರಿಕಾ ನೀಲಕಂಠ ಹಾಗೂ ಲಕ್ಷ್ಮೀಬಾಯಿ ರಾಠೋಡ್‌ ಅವರ ವಿರುದ್ಧ ದೂರು (ಅಪರಾಧ ಸಂಖ್ಯೆ 0169/2025) ದಾಖಲಾಗಿದೆ. ಈ ಎರಡೂ ರೈಸ್‌ಮಿಲ್‌ಗಳನ್ನು ಸೀಝ್‌ ಮಾಡಲಾಗಿದೆ.

ಆರೋಪಿ ನರೇಂದ್ರ ರಾಠೋಡ್‌ ಹಾಗೂ ಅಯ್ಯಪ್ಪ ರಾಠೋಡ್‌ ಅವರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ತಂದೆ ಹಾಗೂ ಸಹೋದರಾಗಿದ್ದಾರೆ. ₹1.21 ಕೋಟಿ ಮೌಲ್ಯದ 3,985 ಕ್ವಿಂಟಾಲ್‌ ಅಕ್ಕಿ ದಾಸ್ತಾನು ಹಾಗೂ ₹45 ಲಕ್ಷ ಮೌಲ್ಯದ ಎರಡು ಲಾರಿಗಳನ್ನು ಜಪ್ತಿ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪಡಿತರ ವ್ಯವಸ್ಥೆ ಮೂಲಕ ವಿತರಣೆ ಇರುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಿಲ್ಲಲ್ಲಿ ಸಂಗ್ರಹಿಸಿದ್ದ ಆರೋಪಿಗಳು

ಈ ಅಕ್ಕಿಗೆ ಪಾಲಿಶ್‌ ಮಾಡಿ ಫ್ರಾನ್ಸ್, ಸಿಂಗಾಪುರ, ದುಬೈಗೆ ವಿಮಾನ, ಹಡಗಿನ ಮೂಲಕ ಸಾಗಿಸಿದ್ದ ಪ್ರಕರಣ

ಇತ್ತೀಚೆಗೆ ಮಿಲ್‌ ಮೇಲೆ ರೇಡ್‌ ಮಾಡಿದ್ದ ಆಹಾರ ಇಲಾಖೆ ಅಧಿಕಾರಿಗಳು. ಇದೀಗ ಎಣಿಕೆ ಬಳಿಕ ಮಿಲ್‌ ಜಪ್ತಿ

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ