ಅಂಗನವಾಡಿ ಫುಡ್ ಸೇವಿಸಿ ಮಕ್ಕಳು, ಗರ್ಭಿಣಿಯರು ಅಸ್ವಸ್ಥ

By Asianet Kannada  |  First Published Jul 31, 2018, 12:00 PM IST

ಅಂಗನವಾಡಿಯಲ್ಲಿ ತಯಾರಿಸಿದ ಫುಡ್ ತಿಂದ ಮಕ್ಕಳು, ಗರ್ಭಿಣಿಯರು ಕಕ್ಷಣವೇ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯಕ್ಕೆ ಕಾರಣವಿನ್ನೂ ತಿಳಿದು ಬಂದಿಲ್ಲ. ಮಕ್ಕಳು ತಿಂದ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.


ಚಿತ್ರದುರ್ಗ: ಅಂಗನವಾಡಿ ಫುಡ್ ಸೇವಿಸಿ 13 ಮಕ್ಕಳು ಮತ್ತು 15 ಗರ್ಭಿಣಿಯರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹನುಮಂತ ಸಾಗರ ಗ್ರಾಮದಲ್ಲಿ ನಡೆದಿದೆ.

ಸೋಮವಾರ ಮಧ್ಯಹ್ನ ವೇಳೆ ಶೇಂಗಾ ಹುಂಡೆ, ಅನ್ನ ಸಂಬಾರ್ ಊಟ ಮಾಡಿದ ಮಕ್ಕಳು ಅಸ್ವಸ್ಥ ಗೊಂಡಿದ್ದಾರೆ. ಊಟ ಸೇವಿಸಿದ ಮಕ್ಕಳಿಗೆ ವಾಂತಿ ಭೇದಿ ಶುರವಾಗಿದ್ದು, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸ್ವಸ್ಥ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಳ್ಳಕೆರೆ ತಾಲೂಕು ದಂಡಾಧಿಕಾರಿ ಟಿ ಕಾಂತರಾಜ್ ಆಸ್ಪತ್ರೆಗೆ ಭೇಟಿ ಗರ್ಭಿಣಿಯರು ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.

Latest Videos

ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಡುಗೆ ಮಾದರಿ ತೆಗೆದುಕೊಂಡಿದ್ದು, ಅಡುಗೆ ಫುಡ್ ಸೇಪ್ಟಿ ಇಲಾಖೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.  ವರದಿ ಬಂದ ನಂತರ ಕಾನೂನು ಕ್ರಮ ಜರುಗಿಸಲಾಗುವುದು , ಎಂದು ಪ್ರಕರಣದ ದಾಖಲಾದ  ಚಳ್ಳಕೆರೆ ಪೊಲೀಸರು ಹೇಳಿದ್ದಾರೆ.

click me!