ಬೆಂಗಳೂರು ಗಲಭೆ ತಡೆಯೋ ಶಕ್ತಿ ಬಿಜೆಪಿ ಸರ್ಕಾರಕ್ಕಿದ್ದಿಲ್ಲವೇ? ಆಂದೋಲಶ್ರೀ

By Kannadaprabha News  |  First Published Aug 16, 2020, 2:44 PM IST

ಬಿಜೆಪಿಗೆ ಬಹುಮತವಿದ್ದರೂ ಏನು ಪ್ರಯೋಜನ| ಮತಾಂಧರ ವಿಷಯದಲ್ಲಿ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ| ವ್ಯವಸ್ಥಿತ ಪಿತೂರಿಯ ಫಲವೇ ಈ ಧಂಗೆ| ಮೂರ್ನಾಲ್ಕು ದಿನ ಪ್ಲಾನ್‌ ರೂಪಿಸಿ ಮಾಡಿರುವಂತಹ ಘಟನೆ ಇದು ಎಂದ ಆಂದೋಲಶ್ರೀ| 


ಕಲಬುರಗಿ(ಆ.16): ಈಗ ಕಾಂಗ್ರೆಸ್‌ ಶಾಸಕನ ಮನೆಗೆ ಬೆಂಕಿ ಹಚ್ಚಿದ್ದಾರೆ. ಮುಂದೆ ನಿಮ್ಮ ಮನೆಗಳಿಗೂ ಬೆಂಕಿ ಹಚ್ಚಲಿದ್ದಾರೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲಶ್ರೀ ಸಿದ್ದಲಿಂಗ ಸ್ವಾಮಿಗಳು ರಾಜ್ಯ ಬಿಜೆಪಿ ಜನನಾಯಕರ ವಿರುದ್ಧ ಕಿಡಿಕಾರಿದ್ದಾರೆ. 

ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿಗಳ ಗಲಭೆ ಖಂಡಿಸಿದ ಅಂದೋಲಶ್ರೀ ಇದು ಆಕಸ್ಮಿಕವಾಗಿ ನಡೆದದ್ದಲ್ಲ, ವ್ಯವಸ್ಥಿತ ಪಿತೂರಿಯ ಫಲವೇ ಈ ಧಂಗೆ. ಮೂರ್ನಾಲ್ಕು ದಿನ ಪ್ಲಾನ್‌ ರೂಪಿಸಿ ಮಾಡಿರುವಂತಹ ಘಟನೆ ಇದು. ಆದರೆ, ಇದನ್ನು ತಡೆಯೋ ಶಕ್ತಿ ಬಿಜೆಪಿ ಸರ್ಕಾರಕ್ಕಿದ್ದಿಲ್ಲವೇ ಎಂದು ಪ್ರಶ್ನಸಿದ್ದಾರೆ. 

Tap to resize

Latest Videos

undefined

ಬೆಂಗಳೂರು ಗಲಭೆ: SDPI ಕಚೇರಿಯಲ್ಲಿ ಅಡಗಿ ಕುಳಿತಿದ್ದ ಪುಂಡರು ಅರೆಸ್ಟ್‌..!

ಬಿಜೆಪಿಗೆ ಬಹುಮತವಿದ್ದರೂ ಏನು ಪ್ರಯೋಜನ ಎಂದು ಕಿಡಿಕಾರಿರುವ ಅವರ, ಮತಾಂಧರ ವಿಷಯದಲ್ಲಿ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಂದೋಲಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

click me!