ಬೀದಿ ಪ್ರಾಣಿಗಳಿಗೆ ಆ್ಯಂಬ್ಯುಲೆನ್ಸ್‌ ಸೇವೆ ಆರಂಭ

Published : Mar 09, 2020, 10:43 AM IST
ಬೀದಿ ಪ್ರಾಣಿಗಳಿಗೆ ಆ್ಯಂಬ್ಯುಲೆನ್ಸ್‌ ಸೇವೆ ಆರಂಭ

ಸಾರಾಂಶ

ಪೀಪಲ್‌ ಫಾರ್‌ ಅನಿಮಲ್ಸ್‌ ಸಂಸ್ಥೆ ವತಿಯಿಂದ ಮೈಸೂರಿನ ಬೀದಿ ಪ್ರಾಣಿಗಳಿಗೆ ಸ್ಥಳದಲ್ಲಿ ತುರ್ತು ಚಿಕಿತ್ಸೆ ಒದಗಿಸುವ ಸಲುವಾಗಿ ಆ್ಯಂಬ್ಯುಲೆನ್ಸ್‌ ಸೇವೆಯನ್ನು ಆರಂಭಿಸಿದೆ.  

ಮೈಸೂರು(ಮಾ.09): ಪೀಪಲ್‌ ಫಾರ್‌ ಅನಿಮಲ್ಸ್‌ ಸಂಸ್ಥೆ ವತಿಯಿಂದ ಮೈಸೂರಿನ ಬೀದಿ ಪ್ರಾಣಿಗಳಿಗೆ ಸ್ಥಳದಲ್ಲಿ ತುರ್ತು ಚಿಕಿತ್ಸೆ ಒದಗಿಸುವ ಸಲುವಾಗಿ ಆ್ಯಂಬ್ಯುಲೆನ್ಸ್‌ ಸೇವೆಯನ್ನು ಆರಂಭಿಸಿದೆ.

ಈ ಸೇವೆಗೆ ಆರಿಸ್‌ ಗ್ಲೋಬಲ್‌ ಪ್ರೈ.ಲಿ. ಆ್ಯಂಬ್ಯುಲೆನ್ಸ್‌ ಕೊಡುಗೆ ನೀಡಿದ್ದಾರೆ. ಈ ಆ್ಯಂಬ್ಯುಲೆನ್ಸ್‌ ಸೇವೆಯು ನುರಿತ ಪಶುವೈದ್ಯರು ಮತ್ತು ತಂಡ, ತುರ್ತು ಚಿಕಿತ್ಸೆಗೆ ಅಗತ್ಯವಾದ ಜೀವ ರಕ್ಷಕ ಔಷಧಿಗಳು ಮತ್ತು ಉಪಕರಣಗಳನ್ನು ಒಳಗೊಂಡಿದೆ.

ಕೊರೋನ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಎಸ್ಕೇಪ್

ರೇಬಿಸ್‌ ನಿರೋಧಕ ಲಸಿಕೆ ಹಾಕಿಸುವ ಶಿಬಿರಗಳನ್ನು ಏರ್ಪಡಿಸಿದ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಲು ಮೈಕ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆಯವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. 0821- 2598213 ಸಂಪರ್ಕಿಸಬಹುದು.

PREV
click me!

Recommended Stories

ಬೇಡ್ತಿಯ ದಿಕ್ಕು ಬದಲಿಸಿದರೆ ಕಾದಿದೆ ಅಪಾಯ, ಪರಿಸರ ನಾಶ ಮಾಡಿ ಸಾಧಿಸುವುದೇನು?
ರಾಜ್ಯದಲ್ಲಿ ಮುಂದಿನ 4 ದಿನ ಸಾಧಾರಣ ಮಳೆ ಸಾಧ್ಯತೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!