ಶಾಲೆ ಅಂದ್ಮೇಲೆ ಓದುವ ಎಲ್ಲಾ ಮಕ್ಕಳು ಒಂದೇ ಸಮಾನರು. ಆದ್ರೆ ಕೋಟೆನಾಡಿನ ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಮಾದ್ಯಮ ವಿಧ್ಯಾರ್ಥಿಗಳಿಗೆ ಆಂಗ್ಲ ಮಾದ್ಯಮದ ವಿಧ್ಯಾರ್ಥಿಗಳ ಮುಂದೆಯೇ ತಾರತಮ್ಯ ಮಾಡಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.23): ಶಾಲೆ ಅಂದ್ಮೇಲೆ ಓದುವ ಎಲ್ಲಾ ಮಕ್ಕಳು ಒಂದೇ ಸಮಾನರು. ಆದ್ರೆ ಕೋಟೆನಾಡಿನ ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಮಾದ್ಯಮ ವಿಧ್ಯಾರ್ಥಿಗಳಿಗೆ ಆಂಗ್ಲ ಮಾದ್ಯಮದ ವಿಧ್ಯಾರ್ಥಿಗಳ ಮುಂದೆಯೇ ತಾರತಮ್ಯ ಮಾಡಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಶಾಲೆಯ ಮುಂಭಾಗ ನಮ್ಮ ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಎಂದು ಖಾಸಗಿ ಶಾಲೆ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸ್ತಿರೋ ಪೋಷಕರು. ಮತ್ತೊಂದೆಡೆ ಆಡಳಿತ ಮಂಡಳಿ ಹಾಗೂ ವಿಧ್ಯಾರ್ಥಿಗಳ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ನಗರದ ಚಿಕ್ಕಪೇಟೆಯಲ್ಲಿರುವ ವಾಸವಿ ವಿದ್ಯಾಸಂಸ್ಥೆ ( ಖಾಸಗಿ) ಶಾಲೆಯ ಬಳಿ.
undefined
ಈ ಶಾಲೆಯಲ್ಲಿ ಕನ್ನಡ ಮಾದ್ಯಮ ಹಾಗೂ ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಬಗ್ಗೆ ತಾರತಮ್ಯ ಮಾಡಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈಗಾಗಲೇ ಸರ್ಕಾರ ಜೂನ್ ೧ರ ವರೆಗೂ ಯಾವುದೇ ಕಾರಣಕ್ಕೂ ಶಾಲೆ ತೆರೆಯಬಾರದು. ವಿಧ್ಯಾರ್ಥಿಗಳಿಗೆ ಕಡ್ಡಾಯ ರಜೆ ನೀಡಲೇಬೆಕು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಇದರ ಹೊರತಾಗಿಯೂ ಈ ಖಾಸಗಿ ಶಾಲೆಯಲ್ಲಿ ಕಳೆದೊಂದು ವಾರದಿಂದ SSLC ವಿಧ್ಯಾರ್ಥಿಗಳ ತರಗತಿ ನಡೆಸಲಾಗ್ತಿದೆ. ಅದ್ರಲ್ಲೂ ೩೦ಕ್ಕೂ ಅಧಿಕ ಕನ್ನಡ ಮಾದ್ಯಮ ವಿಧ್ಯಾರ್ಥಿಗಳನ್ನು ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಜೊತೆಗೆ ಸುಮಾರು ೮೦ಕ್ಕೂ ಅಧಿಕ ವಿಧ್ಯಾರ್ಥಿಗಳನ್ನ ಒಂದೇ ಕೊಠಡಿಯಲ್ಲಿ ಕೂರಿಸಿ ಕನ್ನಡ, ಹಿಂದಿ, ಇನ್ನಿತರ ವಿಷಯಗಳನ್ನು ಬೋಧನೆ ಮಾಡಲಾಗ್ತಿದೆ.
ಮಳೆ ಹಾನಿ ಪ್ರದೇಶಗಳಿಗೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಭೇಟಿ!
ಅಲ್ಲದೇ ಕನ್ನಡ ಮಾದ್ಯಮ ವಿಧ್ಯಾರ್ಥಿಗಳಿಗೆ ನೆಲದ ಮೇಲೆ ಕೂರಿಸಿ, ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳನ್ನ ಬೆಂಚ್ ಮೇಲೆ ಕೂರಿಸಿ ತಾರತಮ್ಯ ಮಾಡ್ತಿದ್ದರು ಎನ್ನುವ ಗಂಭೀರ ಆರೋಪವನ್ನು ವಿಧ್ಯಾರ್ಥಿಗಳು ಹಾಗೂ ಪೋಷಕರು ಮಾಡ್ತಿದ್ದಾರೆ. ಈ ಕ್ರಮ ಸರಿಯಲ್ಲ ನಮ್ಮ ಮಕ್ಕಳಿಗೆ ಪ್ರತ್ಯೇಕ ತರಗತಿ ನಡೆಸಿಕೊಡಿ ಎಂದು ಪೋಷಕರು ಶಾಲಾ ಆಡಳಿತ ಮಂಡಳಿ ಮುಂದೆ ಕೇಳಲು ಹೋದ್ರೆ, ಆಡಳಿತ ಮಂಡಳಿಯವರು ಬೇಜವಾಬ್ದಾರಿ ಹೇಳಕೆ ನೀಡುವ ಮೂಲಕ ಉದ್ದಟತನ ಮೆರೆದಿದ್ದಾರೆ. LKG, UKG ಯಿಂದಲೂ ಇದೇ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಓದಿಸ್ತಿದ್ದೀವಿ, ಆದ್ರೆ ಈಗ ಶಾಲೆ ಆಡಳಿತ ಮಂಡಳಿ ನಮ್ಮ ಮಕ್ಕಳಿಗೆ ಅನ್ಯಾಯ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದಲೂ ಸುಮಾರು ಗಂಟೆ ಗಟ್ಟಲೇ ಪೋಷಕರು ಹಾಗೂ ವಿಧ್ಯಾರ್ಥಿಗಳು, ನೀವು ಮಾಡ್ತಿರುವ ಭೋದನಾ ಕ್ರಮ ಸರಿಯಿಲ್ಲ ಎಂದು ಪ್ರಶ್ನಿಸಿದ್ರು ಆಡಳಿತ ಮಂಡಳಿ ಕ್ಯಾರೇ ಅಂದಿಲ್ಲ. ಇನ್ನೂ ಮಾದ್ಯಮಗಳು ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟಿದ್ದೇ ತಡ, ಆಡಳಿತ ಮಂಡಳಿ ಡ್ರಾಮಾ ಮಾಡಲು ಶುರು ಮಾಡಿತು. ಇನ್ನೂ ಈ ಆರೋಪಕ್ಕೆ ಸಂಬಂಧಿಸಿದಂತೆ, ಶಾಲಾ ಆಡಳಿತ ಮಂಡಳಿ ಅವರನ್ನೇ ವಿಚಾರಿಸಿದ್ರೆ, ಮಕ್ಕಳು, ಪೋಷಕರ ಈ ಆರೋಪ ಸುಳ್ಳು ಅವರಿಗೆ ಯಾರೋ ಬೇಕು ಅಂತ ತಲೆ ಕೆಡಿಸಿದ್ದಾರೆ ಎಂದರು. ಇನ್ನೂ ಸರ್ಕಾರದ ಆದೇಶ ಖಡಕ್ ಆಗಿರುವುದು ಗೊತ್ತಾದ ಬೆನ್ನಲ್ಲೇ, ನಾವು ಇನ್ನೂ ತರಗತಿಗಳನ್ನೇ ಶುರು ಮಾಡಿಲ್ಲ. ಮುಂದೆ ಮಕ್ಕಳಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ಆಂಗ್ಲ, ಕನ್ನಡ ಮಾದ್ಯಮದ ಮಕ್ಕಳನ್ನು ಒಂದೇ ಕಡೆ ಕೂರಿಸಿ ಭೋದನೆ ಮಾಡುವ ಪ್ಲಾನ್ ಮಾಡಿಕೊಂಡಿದ್ದೆವು.
ಸ್ಟಾರ್ ನಟರು ವರ್ಷಕ್ಕೆ 3-4 ಸಿನಿಮಾ ಮಾಡಿದರೆ ಏನೂ ಬದಲಾಗಲ್ಲ: ಡಾಲಿ-ದುನಿಯಾ ವಿಜಿ ಹೇಳಿದ್ದೇನು?
ಆದ್ರೆ ಭಾಷಾ ವಿಷಯಗಳ ತರಗತಿ ನಡೆಯುವ ವೇಳೆ ಯಾವ ಮಕ್ಕಳಿಗೂ ತಾರತಮ್ಯ ಮಾಡಿಲ್ಲ ಎಂದು ಸಮಜಾಯಿಸಿ ಕೊಟ್ಟರು. ಜೊತೆಗೆ ಮಕ್ಕಳು ಮಾಡಿದ ಅಷ್ಟೂ ಆರೋಪ ಸುಳ್ಳು ಎಂದು ಹೇಳುವ ಮೂಲಕ ಬೇಜವಾಬ್ದಾರಿ ಮೆರೆದರು. ಇದರ ಹೊರತಾಗಿಯೂ ಮಕ್ಕಳಿಗೆ ಯಾವ ಭೋದನೆ ಇಷ್ಟವೋ ಅದೇ ರೀತಿ ಮಾಡಿಕೊಡುವ ಪ್ರಯತ್ನ ಮಾಡ್ತೀನಿ ಶೀಘ್ರದಲ್ಲೇ ಈ ಸಮಸ್ಯೆಗೆ ನಾಂದಿ ಹಾಡ್ತೀವಿ ಎಂದು ತಿಳಿಸಿದರು. ಒಟ್ಟಾರೆ ಶಾಲೆ ಅಂದ್ಮೇಲೆ ಅಲ್ಲಿ ಓದುವ ಮಕ್ಕಳೆಲ್ಲಾ ಒಂದೇ ಸಮಾನರು ಇದ್ದಂತೆ, ಆದ್ರೆ ಇತ್ತೀಚಿಗೆ ಖಾಸಗಿ ಶಾಲೆಯಲ್ಲಿ ಶುಲ್ಕು ಹೆಚ್ಚು ಕಟ್ಟುವ ಆಂಗ್ಲ ಮಾದ್ಯಮ ಮಕ್ಕಳಿಗೆ ಆದ್ಯತೆ ಕೊಡುವುದು, ಕನ್ನಡ ಮಾದ್ಯಮ ಮಕ್ಕಳನ್ನ ತಾರತಮ್ಯ ಮಾಡುವ ಆರೋಪ ಸರಿಯಲ್ಲ. ಕೂಡಲೇ ಶಿಕ್ಷಣ ಇಲಾಖೆ ಈ ಖಾಸಗಿ ಶಾಲೆಗೆ ನೋಟೀಸ್ ನೀಡುವ ಮೂಲಕ ಕಠಿಣ ಕ್ರಮ ಕೈಗೊಳ್ಳಲಿ ಎಂಬುದು ಸ್ಥಳೀಯರ ಆಗ್ರಹ.