ಶಿವಮೊಗ್ಗ: ಎಣ್ಣೆ ಏಟು ತಂದ ಸಾವು, ಟೈಟಾಗಿ ಬಿಲ್ಡಿಂಗ್ ಮೇಲಿಂದ ಬಿದ್ದಿದ್ದು ಗೊತ್ತಿಲ್ಲ!

By Suvarna NewsFirst Published May 8, 2020, 9:37 PM IST
Highlights

ಅತಿಯಾದ ಮದ್ಯಪಾನ ತಂದ ಅನಾಹುತ/ ಮನೆಯ ಮೇಲಿನಿಂದ ಬಿದ್ದು ರೌಡಿ ಶೀಟರ್ ಸಾವು/ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿತ್ತು/ ಶಿವಮೊಗ್ಗದಲ್ಲಿ ಪ್ರಕರಣ

ಶಿವಮೊಗ್ಗ(ಮೇ 08)  ಮದ್ಯಪಾನ ಎಂತೆಂಥ ಅವಾಂತರ ಸೃಷ್ಟಿ ಮಾಡಿಸುತ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ರಸ್ತೆ ಅಪಘಾತಕ್ಕೆ ಒಂದು ಪ್ರಮುಖ ಕಾರಣ ಈ ಮದ್ಯಪಾನ. ರಾಜ್ಯ ಸರ್ಕಾರವೇನೋ ಮದ್ಯ ಮಾರಾಟಕ್ಕೆ ಲಾಕ್ ಡೌನ್ ಸಮಯದಲ್ಲಿಯೂ ಅವಕಾಶ ನೀಡಿದೆ. ಇಲ್ಲಿ ಆಗಿರುವ ಅನಾಹುತವನ್ನು ನೀವೇ ನೋಡಿ . 

ಕುಡಿದು ಮನೆಯ ಟೆರೆಸ್ ನಿಂದ ಜಾರಿಬಿದ್ದ ರೌಡಿಶೀಟರ್ ಸಾವನ್ನಪ್ಪಿದ್ದಾನೆ.  25 ವರ್ಷದ  ನವುಲೆ ಸಿದ್ದಪ್ಪ ಸಾವನ್ನಪ್ಪಿದ್ದಾರೆ.  ಲಾಕ್ ಡೌನ್ ಸಡಲಿಕೆ ನಂತರ ಮದ್ಯ ಹೇರಳವಾಗಿ ಸಿದ್ದಪ್ಪ ಕೈ ಸೇರಿತ್ತು.

ಶೇ. 40ಕ್ಕಿಂತ ಕಡಿಮೆ ಆಲ್ಕೋಹಾಲ್ ಇರುವ ಮದ್ಯ ಹಲಾಲ್

ಸ್ನೇಹಿತನ ಮನೆ ಮೇಲಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾರದೆ ಇಂದು ಸಾವನ್ನಪ್ಪಿದ್ದು ಜಯನಗರ  ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯಪಾನ ಮಾಡಿ ಕೆಳಕ್ಕೆ ಇಳಿಯಬೇಕಿದ್ದರೆ ಆಯತಪ್ಪಿ ರೌಡಿ ಶೀಟರ್ ಕೆಳಕ್ಕೆ ಬಿದ್ದಿದ್ದ. ತಾನು ಯಾರು ಎಂಬುದು ಮರೆತುಹೋಗುವಷ್ಟು ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ. 

 

click me!