ವಾಯುಪಡೆಯ ಯುವ ಅಧಿಕಾರಿಯೋರ್ವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಶಿಗ್ಗಾಂವಿ (ನ.21): ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಜಗದೀಶ್ ಸುತಗಟ್ಟಿ(29) ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. 2017ರಲ್ಲಿ ಮಾ.16ರಂದು ಭಾರತೀಯ ವಾಯುಪಡೆಯ 10, ವಿಂಗ್ ಏರ್‌ಫೋರ್ಸ್ ವಿಭಾಗದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದರು.
ಸದ್ಯ ಅಸ್ಸಾಂನ ಜೋರ್ಹತ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇದಕ್ಕೂ ಮುನ್ನ ಬೆಂಗಳೂರಿನಲ್ಲಿ 2.10 ವರ್ಷ ಸೇವೆ ಸಲ್ಲಿಸಿದ್ದರು. ಮೃತ ಅಧಿಕಾರಿ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ರಕ್ಷಣಾ ಪಡೆ ಅಧಿಕಾರಿಗಳ ನಿವೃತ್ತಿ ವಯೋಮಿತಿ ಹೆಚ್ಚಳ? ...
ಜಿಲ್ಲಾಧಿಕಾರಿಗಳಿಗಾಗಲಿ, ಕುಟುಂಬದವರಿಗಾಗಲಿ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಜಗದೀಶ್ ಅವರಿಗೆ ತಂದೆ ನಿಂಗಪ್ಪ, ತಾಯಿ ಉಮಾದೇವಿ, ಸೋದರ ವೀರೇಶ್, ಅಜ್ಜ, ಅಜ್ಜಿ ಇದ್ದಾರೆ.
ಮೃತರ ಪಾರ್ಥಿವ ಶರೀರ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶಿಗ್ಗಾಂವಿ ಪಟ್ಟಣ ತಲುಪಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.