4 ವರ್ಷದಲ್ಲಿ ರಾಜ್ಯವನ್ನು ಜಾಗತಿಕ ಅನಿಮೇಷನ್‌ ಲೀಡರ್‌ ಮಾಡುವ ಗುರಿ: ಸಿದ್ದರಾಮಯ್ಯ

Published : Jan 31, 2024, 10:37 AM IST
4 ವರ್ಷದಲ್ಲಿ ರಾಜ್ಯವನ್ನು ಜಾಗತಿಕ ಅನಿಮೇಷನ್‌ ಲೀಡರ್‌ ಮಾಡುವ ಗುರಿ: ಸಿದ್ದರಾಮಯ್ಯ

ಸಾರಾಂಶ

ಕರ್ನಾಟಕ ರಾಜ್ಯವು 2028ರ ವೇಳೆಗೆ 30,000 ಉದ್ಯೋಗ ಸೃಷ್ಟಿ ಮೂಲಕ ಅನಿಮೇಷನ್‌ ಹಾಗೂ ಗೇಮಿಂಗ್‌, ಕಾಮಿಕ್ಸ್ ಕ್ಷೇತ್ರದ ಜಾಗತಿಕ ಲೀಡರ್‌ ಆಗುವ ಗುರಿ ಹೊಂದಿದೆ. 

ಬೆಂಗಳೂರು (ಜ.31): ಕರ್ನಾಟಕ ರಾಜ್ಯವು 2028ರ ವೇಳೆಗೆ 30,000 ಉದ್ಯೋಗ ಸೃಷ್ಟಿ ಮೂಲಕ ಅನಿಮೇಷನ್‌ ಹಾಗೂ ಗೇಮಿಂಗ್‌, ಕಾಮಿಕ್ಸ್ ಕ್ಷೇತ್ರದ ಜಾಗತಿಕ ಲೀಡರ್‌ ಆಗುವ ಗುರಿ ಹೊಂದಿದೆ. ಸರ್ಕಾರದ ಗುರಿ ಸಾಧನೆ ಹಾಗೂ ಅನಿಮೇಷನ್‌ ಉದ್ಯಮದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಯುವಕರಿಗೆ ಈ ಸಮ್ಮೇಳನ ವೇದಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಜಿಎಎಫ್ಎಕ್ಸ್‌-2024 ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ನಾಯಕನನ್ನಾಗಿ ಮಾಡಲು ಮತ್ತು ರಾಜ್ಯವನ್ನು ಎವಿಜಿಸಿಎಕ್ಸ್‌ಆರ್‌ನ ಶ್ರೇಷ್ಠತೆಯ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ ದೃಢವಾದ ಪ್ರತಿಭಾ ಪೂಲ್ ರಚಿಸಲು ಉದ್ದೇಶಿಸಿದ್ದೇವೆ. 2028 ರ ವೇಳೆಗೆ ಈ ವಲಯದಲ್ಲಿ 30 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದು, ರಫ್ತು ಪ್ರಮಾಣವನ್ನು ಕನಿಷ್ಠ ಶೇ.80 ರಷ್ಟು ಹೆಚ್ಚಿಸಲು ಯೋಜಿಸಿದ್ದೇವೆ ಎಂದರು. 2012ರಲ್ಲೇ ಎವಿಜಿಸಿ (ಅನಿಮೇಷನ್‌, ವಿಜುಯಲ್‌ ಎಫೆಕ್ಟ್, ಗೇಮಿಂಗ್‌ ಮತ್ತು ಕಾಮಿಕ್) ನೀತಿಯನ್ನು ಮಾಡುವ ಮೂಲಕ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಹಾಗೂ ಸವಾಲುಗಳನ್ನು ಪರಿಹರಿಸಲು ಕರ್ನಾಟಕ ದೇಶದಲ್ಲೇ ಮೊದಲ ಬಾರಿಗೆ ಕ್ರಮ ಕೈಗೊಂಡಿತ್ತು ಎಂದು ಹೇಳಿದರು. 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ: ಸಂಸದ ರಾಘವೇಂದ್ರ ಭವಿಷ್ಯ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಜಿಎಎಫ್ಎಕ್ಸ್ ತಂತ್ರಜ್ಞಾನಗಳಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗುತ್ತಿದೆ. ಈ ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಿಯೋನಿಕ್ಸ್ ಅಧ್ಯಕ್ಷ ಶರತ್‌ ಬಚ್ಚೇಗೌಡ, ಇನ್ವೆಸ್ಟ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ನಿವೃತಿ ರೈ, ಆಕ್ಸಿಲರ್‌ ವೆಂಚರ್ಸ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಐಟಿ-ಬಿಟಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಏಕರೂಪ್‌ಕೌರ್‌ ಸೇರಿ ಹಲವರು ಹಾಜರಿದ್ದರು.

ಮೋದಿ ಬಳಿ ಪರಿಹಾರ ಕೇಳದೆ ರಾಜ್ಯದಲ್ಲಿ ಬಿಜೆಪಿ ನಾಟಕ: ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಕಳೆದ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲು ರಾಜ್ಯ ಬಿಜೆಪಿಯ ಪುಕ್ಕಲು ನಾಯಕರಿಗೆ ಆಗಲ್ಲ. ಅಂತಹ ಪುಕ್ಕಲರು ನಮ್ಮ ವಿರುದ್ಧ ‘ಪರಿಹಾರ ಕೊಡಿ ಕುರ್ಚಿ ಬಿಡಿ’ ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಯಾವ ಮುಖ ಹೊತ್ತು ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ರೈತರ ಬಳಿ ಹೋಗುತ್ತಾರೆ? ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ, ಮತ ಬೇಕಿದೆ: ಸಚಿವ ಆರ್.ಬಿ.ತಿಮ್ಮಾಪುರ

ಬರ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿರುವ ಪ್ರತಿಭಟನೆ ಉದ್ದೇಶಿಸಿ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗ ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿತ್ತು. ಬಳಿಕ ಪರಿಹಾರ ಕೊಡಿ ಎಂದು ಕೇಳಿದಾಗೆಲ್ಲ ನಾವೇನು ನೋಟ್ ಪ್ರಿಂಟಿಂಗ್ ಮೆಷಿನ್ ಇಟ್ಟು ಕೊಂಡಿದ್ದೆವೆಯೇ ಎಂದು ಧಾರ್ಷ್ಟ್ಯದಿಂದ ಕೇಳಿದ್ದು ಸಹ ಇದೇ ಬಿಜೆಪಿಯ ಮುಖ್ಯಮಂತ್ರಿಯೇ. ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಕೂಡಾ ಇದೇ ಬಿಜೆಪಿ. ಇಂತಹ ಹುಟ್ಟು ರೈತ ವಿರೋಧಿ ಬಿಜೆಪಿ ನಾಯಕರು ಈಗ ವೇಷ ಬದಲಿಸಿ ಸುರಿಸುವ ಕಣ್ಣೀರು ಮೊಸಳೆಯದ್ದು ಎಂದು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ನಮ್ಮ ರೈತರು’ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ