Deepavali ಸಂಭ್ರಮದ ನಡುವೆ ಭೂಕಂಪನ: ಬೆಚ್ಚಿಬಿದ್ದ ವಿಜಯಪುರದ ಜನತೆ..!

By Suvarna NewsFirst Published Nov 5, 2021, 9:34 AM IST
Highlights

*  ಗುಮ್ಮಟನಗರಿ ಜನರ ಬೆನ್ನು ಬಿಡದ ಭೂಕಂಪನ ಕಂಟಕ
*  ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ ಹಾಗೂ ಮಸೂತಿ ಗ್ರಾಮಗಳಲ್ಲಿ ನಡುಗಿದ ಭೂಮಿ
*  ಭೂಕಂಪನದ ಭೀತಿ: ಊರು ಬಿಡ್ತಿದ್ದಾರೆ ಜನ
 

ವಿಜಯಪುರ(ನ.05): ಜಿಲ್ಲೆಯ ಜನತೆಗೆ ಭೂಕಂಕನ ಬೆನ್ನುಬಿಡಹದ ಹಾಗೆ ಕಾಣಸುತ್ತಿಲ್ಲ. ಹೌದು, ಇಂದು(ಶುಕ್ರವಾರ) ಬೆಳಗ್ಗೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ ಹಾಗೂ ಮಸೂತಿ ಗ್ರಾಮಗಳಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ಎರಡು ದಿನದಲ್ಲಿ 7 ಬಾರಿ ಭೂಕಂಪನವಾಗಿದೆ. ಇದರಿಂದ ಮಲಘಾಣ ಭಾಗದ ಜನರಿಗೆ ಭೂಕಂಪನ ಕಂಟಕವಾಗಿ ಪರಿಗಣಿಸಿದೆ. ಬೆಳಗಿನ ಜಾವ 6.45, ತಡರಾತ್ರಿ 1.30 ಗಂಟೆ ಸೇರಿ 7 ಕಂಪನದ ಅನುಭವವಾಗಿದೆ. ನಿನ್ನೆ(ಗುರುವಾರ) ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೆ ಒಟ್ಟು 5 ಬಾರಿ ಕಂಪನದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂಕಂಪನ ಭಯಗ್ರಸ್ತ ಗಡಿಕೇಶ್ವಾರದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಂದಾದ ಮುರುಗೇಶ ನಿರಾಣಿ

ಕೊಲ್ಹಾರ ತಾಲೂಕಿನ ಮಲಘಾಣ ಹಾಗೂ ಮಸೂತಿ ಗ್ರಾಮಗಳಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸುತ್ತಿದೆ. ಇದರಿಂದ ಇಲ್ಲಿನ ಜನತೆ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. 

ಕಳೆದ ತಿಂಗಳು ಅ. 20ರಂದು ಮಸೂತಿ-ಮಲಘಾಣ ಗ್ರಾಮಕ್ಕೆ‌ ಹೈದರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(NGRI) ಪರಿಣಿತ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು. ಭೂಮಿಯ ಆಳದಲ್ಲಿ ನಡೆಯುವ ಬದಲಾವಣೆ, ಚಲನವಲನಗಳ ಮೇಲೆ ನಿಗಾ ಇಡಲು ತಾತ್ಕಾಲಿಕ ಸಿಸ್ಮೋಮಿಟರ್‌ಅನ್ನು ಅಳಡಿಸಲಾಗಿತ್ತು. ಈ ವಿಶೇಷ ಯಂತ್ರ ಪ್ರತಿ ಕಂಪನಗಳ ಮಾಹಿತಿಯನ್ನ ಸಂಗ್ರಹಿಸಿ ಹೈದರಾಬಾದ್ ಕೇಂದ್ರಕ್ಕೆ ರವಾನಿಸಲಿದೆ ಎಂದು ತಿಳಿದು ಬಂದಿದೆ. 

ದೀಪಾವಳಿ ಸಂಭ್ರಮದ ನಡುವೆ ಭೂಕಂಪನದಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಸರಣಿ ಕಂಪನದಿಂದ ಜನರ ಎದೆಯಲ್ಲಿ ಢವ... ಢವ... ಶುರುವಾಗಿದೆ. ಮಲಘಾಣ-ಮಸೂತಿ ಗ್ರಾಮಗಳ 10 ಕೀ.ಮೀ ವ್ಯಾಪ್ತಿಯಲ್ಲಿ ಕಂಪನ ಅನುಭವವಾಗಿದೆ ಎಂದು ತಿಳಿದು ಬಂದಿದೆ. 

ವಿಜಯಪುರ: ಭೂಕಂಪನದ ಭೀತಿ: ಊರು ಬಿಡ್ತಿದ್ದಾರೆ ಜನ

ವಿಜಯಪುರ (vijyapura) ಮತ್ತು ಕಲಬುರಗಿ (kalaburgi) ಜಿಲ್ಲೆಗಳ ನಾನಾ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು, ನಾಗರಿಕರು ಭಯಭೀತಿಗೊಂಡಿದ್ದಾರೆ. ಭೂಕಂಪದ (Earthquake) ಭಯಕ್ಕೆ ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ. 

ಸೆ.4ರಿಂದ ಅ.11ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಿಜಯಪುರ, ಸಿಂದಗಿ, ಬ.ಬಾಗೇವಾಡಿ, ಕೊಲ್ಹಾರ, ತಿಕೋಟಾ ತಾಲೂಕುಗಳಲ್ಲಿ ಭೂಮಿ ಕಂಪಿಸಿದೆ. ಒಟ್ಟು ಎಂಟು ಬಾರಿ ಭೂಮಿ ಕಂಪನವಾಗಿದ್ದು, ಐದು ಬಾರಿ ಭೂಕಂಪನವು ರಿಕ್ಟರ್‌ ಮಾಪಕದಲ್ಲಿ(Richter scale) ದಾಖಲಾಗಿದೆ.

ನಿರಂತರ ಭೂಕಂಪ: 'ಶೆಡ್‌ ಹಾಕಿ ಕೊಡಿ, ಅಲ್ಲೇ ಮಕ್ಕೊಂಡು ಜೀವಾ ಉಳಿಸ್ಕೋತೀವಿ'

ಭೂಕಂಪದೂರಲ್ಲಿ ಪ್ರತಿ ಮನೆ ಮುಂದೆ ಶೆಡ್‌ ನಿರ್ಮಾಣ: ಸಚಿವ ಅಶೋಕ

ಕಲಬುರಗಿ ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಭೂಕಂಪನ(Earthquake) ಪೀಡಿತ ಗ್ರಾಮಗಳಲ್ಲಿರುವ ಮನೆಗಳ ಮುಂದೆ ಶೆಡ್‌ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ(R Ashok) ಭರವಸೆ ನೀಡಿದ್ದರು.

ಭೂಕಂಪನ ಭಯಗ್ರಸ್ತ ಊರುಗಳಾದ ಗಡಿಕೇಶ್ವರ, ಹೊಸಳ್ಳಿ ಹಾಗೂ ಕೊರವಿ ತಾಂಡಾಗಳಿಗೆ ಅ.19ರಂದು ಭೇಟಿ ನೀಡಿದ ಕಂದಾಯ ಸಚಿವರು ಜನತೆಯೊಂದಿಗೆ ಸಂವಾದ ನಡೆಸಿ ಯಾವುದೇ ಕಾರಣಕ್ಕೂ ಭಯ ಪಡದಂತೆ ಮನವಿ ಮಾಡಿದರಲ್ಲದೆ ಸರ್ಕಾರ(Government) ನಿಮ್ಮೊಂದಿಗೆ ಎಂದು ಅಭಯ ನೀಡಿದ್ದರು. 

ಗಡಿಕೇಶ್ವರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಭೂಮಿ ಕಂಪಿಸುತ್ತಿರುವ ಕಾರಣ ಗ್ರಾಮದಲ್ಲಿ ಭೂಕಂಪದ ತೀವ್ರತೆ ಅರಿಯಲು ಹೈದ್ರಬಾದ್‌ನ(Hyderabad) ಎನ್‌ಜಿಆರ್‌ಐ ವಿಜ್ಞಾನಿಗಳ(NGRI Scientists) ತಂಡ ಸಿಸ್ಮೋಮೀಟರ್‌ ಯಂತ್ರ ಅಳವಡಿಸಿದ್ದಾರೆ. ಮುಂದಿನ 1 ತಿಂಗಳ ಕಾಲ ವಿಜ್ಞಾನಿಗಳು ಈ ಯಂತ್ರದ ಮೂಲಕ ದಾಖಲಾಗುವ ಪ್ರತಿಯೊಂದು ಮಾಹಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವೈಜ್ಞಾನಿಕವಾಗಿ ವರದಿ(Scientific Report) ಸಲ್ಲಿಸಲಿದ್ದು, ತದನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದರು. 
 

click me!