ಮಗ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ಮೇ.31) : ಮಗ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ.
ಬಾಳಪ್ಪ ವೆಂಕಪ್ಪ ತಳವಾರ (50) ರುದ್ರವ್ವ ತಳವಾರ (70) ಮೃತದುರ್ದೈವಿಗಳು. ನೇರಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಬಾಳಪ್ಪ. ಮರ ಏರಿ ನೇರಳೆ ಹಣ್ಣು ತಂದು ವ್ಯಾಪಾರ ಮಾಡುತ್ತಿದ್ದ ಎಂಬ ಮಾಹಿತಿ. ಎಂದಿನಂತೆ ಮರ ಏರಿ ನೇರಳೆ ಹಣ್ಣು ಕೀಳುತ್ತಿದ್ದ ವೇಳೆ ಕಾಲುಜಾರಿ ಮರದಿಂದ ಕೆಳಗೆ ಬಿದ್ದಿದ್ದಾನೆ. ಬಿದ್ದ ತೀವ್ರತೆಗೆ ವಯಸ್ಸಾಗಿದ್ದ ಬಾಳಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಗ ಮರದ ಮೇಲಿಂದ ಬಿದ್ದು ಮೃತಪಟ್ಟ ಸುದ್ದಿ ಕೇಳಿದ ತಾಯಿ ರುದ್ರವ್ವ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಇನ್ನೊಂದೆಡೆ ತಾಯಿ-ಅಣ್ಣ ಇಬ್ಬರೂ ಸಾವನ್ನಪ್ಪಿದ ಸುದ್ದಿ ಕೇಳಿದ ಮತ್ತೋರ್ವ ಸಹೋದರ ಬಸವರಾಜ ತಳವಾರ ಕುಸಿದುಬಿದ್ದಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಬಸವರಾಜ ತಳವಾರ.
ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಮೃತ ಮಗನ ಕ್ರಿಯಾಕರ್ಮ ನೆರವೇರಿಸುವ ವೇಳೆ ಮೃತಪಟ್ಟ ತಾಯಿ
ಡಾ.ಕೋಳಿವಾಡ ನಿಧನ
ಸಾಗರ: ಪಟ್ಟಣದ ಸರಳ, ಸಜ್ಜನಿಕೆ ವೈದ್ಯರಾಗಿದ್ದ, ಕೋಳಿವಾಡ ಡಾಕ್ಟರ್ ಎಂದೇ ಪರಿಚಿತರಾಗಿದ್ದ ಡಾ. ಕೆ.ಎಸ್. ವಾಸುದೇವ ಕೋಳಿವಾಡ (86) ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.
62 ವರ್ಷಗಳಿಂದ ಪಟ್ಟಣದ ಸಂಗಮೇಶ್ವರ ರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ನಿರ್ಗತಿಕರು ಸೇರಿದಂತೆ ಸರ್ವರಿಗೂ ಸಮನಾಗಿ ವೈದ್ಯಕೀಯ ನೆರವು ನೀಡುತ್ತಿದ್ದರು. ವೈದ್ಯಕೀಯ ವೃತ್ತಿಯನ್ನು ಹಣ ಮಾಡುವ ದಂಧೆಯಾಗಿಸಿಕೊಳ್ಳದೇ, ಸೇವೆಯನ್ನಾಗಿಯೇ ಜೀವನದಲ್ಲಿ ರೂಢಿಸಿಕೊಂಡಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಕೊರೋನಾ ಸಂದರ್ಭ ತಮ್ಮ ಇಳಿ ವಯಸ್ಸಿನಲ್ಲೂ ಜೀವಭಯ ಬದಿಗಿಟ್ಟು ರೋಗಿಗಳ ಸೇವೆ ಮಾಡಿದ್ದರು. ಅಂತ್ಯಕ್ರಿಯೆ ಬುಧವಾರ ನಡೆಯಿತು.